ದೇಶ-ವಿದೇಶ

ಮೋದಿ ಸರ್ಕಾರದ ಹೊಸ ಶಾಕ್ !!!

583

ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ   ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

ಎರಡು ಸಾವಿರದ ನೋಟು ಮತ್ತು 10, 5, 2, 1 ರುಪಾಯಿ ನಾಣ್ಯ ಕೂಡ ಅಮಾನ್ಯ ಮಾಡಲು ಚಿಂತನೆ ನಡೆಸಿದ್ದಾರೆ. ವರದಿಗಳ ಪ್ರಕಾರ, ತೆರಿಗೆಗಳ್ಳರು ಎರಡು ಸಾವಿರ ರುಪಾಯಿ ನೋಟುಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಮೋದಿ ಅವರಿಗೆ ಗೊತ್ತಿದೆ. ಆದ್ದರಿಂದಲೇ ಶೀಘ್ರದಲ್ಲೇ ಎರಡು ಸಾವಿರ ರುಪಾಯಿ ನೋಟುಗಳನ್ನು ಹಿಂಪಡೆಯುವುದಕ್ಕೆ ಚಿಂತಿಸಿದ್ದಾರೆ.

ನಾಣ್ಯಗಳನ್ನು ನಿಷೇಧಿಸುವುದರ ಹಿಂದಿರುವ ತರ್ಕವನ್ನು ಕೂಡ ವರದಿಯಲ್ಲಿ ತೆರೆದಿಡಲಾಗಿದೆ. ನೋಟುಗಳ ಮುದ್ರಣಕ್ಕಿಂತ ನಾಣ್ಯಗಳಿಗೆ ಹೆಚ್ಚಿನ ಖರ್ಚು ತಗುಲತ್ತದೆ. ಒಂದು ನಾಣ್ಯ ಟಂಕಿಸುವುದರ ಖರ್ಚಿನಲ್ಲಿ ಆರು ನೋಟುಗಳ ಮುದ್ರಣ ಮಾಡಬಹುದು. ಉದಾಹರಣೆಗೆ 10 ರುಪಾಯಿಯ ನಾಣ್ಯ ಟಂಕಿಸುವುದಕ್ಕೆ 6ರುಪಾಯಿ ಖರ್ಚಾಗುತ್ತದೆ.

ಅದೇ 10 ರುಪಾಯಿಯ ನೋಟು ಮುದ್ರಣಕ್ಕೆ 94 ಪೈಸೆ ಖರ್ಚು ತಗುಲುತ್ತದೆ. ಹಾಗಾದರೆ 1,2,5 ರುಪಾಯಿಯ ನಾಣ್ಯ ಟಂಕಿಸುವುದಕ್ಕೆ ಎಷ್ಟು ಖರ್ಚಾಗಬಹುದು ಎಂಬುದನ್ನು ಊಹಿಸಿ. ಆದ್ದರಿಂದಲೇ ಸರಕಾರವು ನಾಣ್ಯಗಳನ್ನು ಟಂಕಿಸುವುದನ್ನು ನಿಲ್ಲಿಸಿ, ನೋಟುಗಳ ಮುದ್ರಣ ಹೆಚ್ಚಿಸಲು ನಿರ್ಧರಿಸಿದೆ

ಈ ವರದಿಯೇ ನಿಜವಾದರೆ ದೇಶದಾದ್ಯಂತ ನಾಣ್ಯಗಳೇ ಕಣ್ಮರೆಯಾಗಲಿವೆ.

 ನೋಟುಗಳ  ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದರ ವಿವರ ಇಲ್ಲಿದೆ ನೋಡಿ.

  • 10ರೂ – 94 ಪೈಸೆ
  • 20ರೂ – 1.16ಪೈಸೆ
  • 50ರೂ- 1.65ಪೈಸೆ  
  • 100ರೂ – 1.70ಪೈಸೆ
  • 500ರೂ- 2.90ಪೈಸೆ
  • 2000ರೂ – 3.80ಪೈಸೆ                                                                                                                                                                                                                                                                                                                                                                                  ಹಾಗಾದರೆ ಸರಕಾರ  ನಾಣ್ಯಗಳ ರದ್ದು ಮಾಡುವುದಕ್ಕೆ ಯೋಚಿಸುತ್ತಿರುವುದಕ್ಕೆ ಕಾರಣಗಳು ಇಲ್ಲಿವೆ:-

ಏಕೆಂದರೆ ನೋಟುಗಳ ಆಯುಷ್ಯ ಒಂಬತ್ತರಿಂದ ಹತ್ತು ತಿಂಗಳು ಮಾತ್ರ. ಆದರೆ ನಾಣ್ಯಗಳು ದೀರ್ಘಾವಧಿ ಬಳಸಬಹುದು. ಆದ್ದರಿಂದಲೇ ನೋಟು ಮುದ್ರಣಕ್ಕಿಂತ ನಾಣ್ಯ ಉತ್ತಮ ಅನ್ನುತ್ತಾರೆ ತಜ್ಞರು. ಆದ್ದರಿಂದಲೇ ನಾಣ್ಯಗಳು ಇನ್ನೂ ಚಲಾವಣೆಯಲ್ಲಿವೆ. ಸರಕಾರವು ನಾಣ್ಯಗಳ ನಿಷೇಧಕ್ಕೆ ಹಿಂದೆ-ಮುಂದೆ ಯೋಚಿಸುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ