ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ ಎಂದು , ಚಾಮರಾಜನಗರದ ಸುತ್ತಮುತ್ತಲ ಹಳ್ಳಿಗಳ ಪಾಲಿಗೆ ಈಕೆ ದೇವತೆಯೇ ಸರಿ ಈಕೆ ಹೆಚ್ಚು ದುಡ್ಡನ್ನು ಕೇಳುವುದಿಲ್ಲ ಹಾಗೆಯೇ ಈಕೆ ಜೀವನ ನಡೆಸುವುದು ಒಂದು ಸಾಧಾರಣ ಜೋಪಡಿಯಲ್ಲಿ .
ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡೆಲಿವರಿ ಕಿಂತ ಸಿ ಸೆಕ್ಷನ್ ಡೆಲಿವರಿ ಗಳು ಬಹಳ ಹೆಚ್ಚಾಗಿ ಹೋಗಿವೆ ಆಸ್ಪತ್ರೆಗಳು ದುಡ್ಡಿನ ಹಿಂದೆ ಬಿದ್ದು ನಾರ್ಮಲ್ ಡೆಲಿವರಿಯನ್ನು ಸಹ ಸರ್ಜರಿ ಮಾಡುವಂತೆ ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕಿಸುತ್ತಾರೆ ಆದರೆ ಈಕೆ ಯಾವುದೇ ಮದ್ದನ್ನು ನೀಡುವುದಿಲ್ಲ ಯಾವುದೇ ಚುಚ್ಚುಮದ್ದಿನ ಮೊರೆ ಹೋಗುವುದಿಲ್ಲ ಈ ಪ್ರಸವ ತಜ್ಞೆ ಇಲ್ಲಿನವರೆಗೆ ಎರಡು ಸಾವಿರದ ಒಂಬೈನೂರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ .
ಇದುವರೆಗೆ ಈಕೆ ಮಾಡಿದ ಹೆರಿಗೆಗಳು ಯಾವುದು ಸೋಲನ್ನು ಕಂಡಿಲ್ಲ , ಇದಕ್ಕೂ ಹಿಂದೆ ಆಕೆಯ ತಾಯಿ ಮತ್ತು ಅಜ್ಜಿ ಈ ರೀತಿಯ ಹೆರಿಗೆಗಳನ್ನು ಮಾಡಿಸುತ್ತಿದ್ದರಂತೆ ಇದಕ್ಕೂ ಮುಂಚೆ ಅವರ ಅಜ್ಜಿ ಅವರ ಹೆಸರು ಸಹ ಮಾದಮ್ಮ ಎಂದು ಆಕೆ ಈ ಹೆರಿಗೆ ತಂತ್ರವನ್ನು ಕಂಡು ಹಿಡಿದರಂತೆ ಸುತ್ತಮುತ್ತಲಿನ ಹಳ್ಳಿಗಳ ಹೆಣ್ಣುಮಕ್ಕಳಿಗೆ ಆಕೆಯೇ ಮುಂದೆ ನಿಂತು ಹೆರಿಗೆ ಮಾಡಿಸಿದರಂತೆ ನಂತರ ಅವರ ಮಗಳು ಅಂದರೆ ಮಾದಮ್ಮ ಅವರ ತಾಯಿಗೂ ಕೂಡ ಈ ಕಲೆ ಒದಗಿ ಬಂತು ಮಾದಮ್ಮ ಹತ್ತು ವರ್ಷದ ಚಿಕ್ಕ ಹುಡುಗಿಯಾಗಿದ್ದಾಗ ಈ ಕಲೆಯಲ್ಲಿ ಆಸಕ್ತಿ ತೋರಿಸಿ ತಾಯಿಯ ಜೊತೆಗೆ ಹೆರಿಗೆ ಮಾಡಿಸಲು ಹೋದರಂತೆ ಆಗ ತಾಯಿ ಮಗುವನ್ನು ತಿರುಗಿಸಲು ಹೇಳಿದರಂತೆ ನಂತರ ತಾಯಿಗೆ ಆಶ್ಚರ್ಯಕರ ರೀತಿಯಲ್ಲಿ ಈ ಕೆಲಸವನ್ನು ಮಾಡಿಕೊಟ್ಟರಂತೆ ಹೀಗೆ ಕಳೆದ ಹದಿನೈದು ವರ್ಷಗಳಿಂದ ಪ್ರಸವ ತಜ್ಞೆಯಾಗಿ ಖ್ಯಾತಿ ಹೊಂದಿದ್ದಾರೆ .
ಹೆರಿಗೆಯಾಗುವ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಒಂದು ಪದ್ಧತಿಯ ರೀತಿಯಲ್ಲಿ ಕೂಡಿಸಿ ಅವರಿಗೆ ಕೆಲವು ಮಂತ್ರಗಳನ್ನು ಹೇಳುತ್ತಾರಂತೆ , ಈ ಕ್ರಿಯೆಯಲ್ಲಿ ಹರಳೆಣ್ಣೆಯನ್ನು ಈಕೆ ಕೈಗಳಿಗೆ ಹಚ್ಚಿಕೊಂಡು ಮಗುವನ್ನು ತಿರುಗಿಸುತ್ತಾರೆ ಆಗ ಹರಳೆಣ್ಣೆ ಏನಾದರೂ ಗಟ್ಟಿಯಾಗಿ ಅಂಟಿದರೆ ಹೆರಿಗೆ ಸ್ವಲ್ಪ ಕಷ್ಟವಾಗಬಹುದು ಎಂದು ಅದೇ ಹರಳೆಣ್ಣೆ ತೆಳುವಾಗಿದ್ದರೆ ಹೆರಿಗೆ ಸುಲಭವಾಗುತ್ತದೆ ಎಂದು.
ಕೆಲವಾರು ವರ್ಷಗಳ ಹಿಂದೆ ಈಕೆ ಹೆರಿಗೆ ಮಾಡಿಸುವಾಗ ಗೋಣಿಚೀಲಗಳನ್ನು ಬಳಸುತ್ತಿದ್ದರಂತೆ ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯಿಂದ ಈಕೆಗೆ ಸಹಾಯ ದೊರೆಯುತ್ತಿದೆಯಂತೆ ಇದರಿಂದ ಈಕೆಗೆ ಆಧುನಿಕ ನೈರ್ಮಲ್ಯಕ್ಕೆ ಸಂಬಂಧಿಸಿದ ಉಪಕರಣಗಳು ದೊರೆಯುತ್ತಿದೆಯಂತೆ ಹಾಗೆಯೇ ಪ್ರತಿ ಹೆರಿಗೆಗೆ ಇವರಿಗೆ ನೂರು ರೂಪಾಯಿಗಳನ್ನು ಕೊಡುತ್ತಾರಂತೆ ಆ ನೂರು ರೂಪಾಯಿಯಲ್ಲಿ ಈಕೆ ಹಾಗೂ ಇಬ್ಬರು ಮಕ್ಕಳ ಜೀವನ ನಡೆದು ಹೋಗುತ್ತಿದೆಯಂತೆ .
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಂದೆ-ತಾಯಿ ಮಕ್ಕಳಿಗೋಸ್ಕರ ತಮ್ಮ ಇಡೀ ಬದುಕನ್ನೇ ಮುಡಿಪಾಗಿ ಇಡುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಸಾಕಿದರೂ ಕೊನೆಗೆ ತಂದೆ ತಾಯಿಗೆ ದ್ರೋಹ ಬಗೆಯುವ ಮಟ್ಟಕ್ಕೆ ಕೆಲವರು ಹೋಗುತ್ತಾರೆ. ಆದರೆ ಇಲ್ಲಿ ನೋಡಿ ಹೆಣ್ಣುಮಕ್ಕಳು ಕುಟುಂಭದ ಕಣ್ಣು ಎನ್ನುವಂತೆ ಸಾಕಿ ಸಲಹಿದರು ಅದೇ ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ. ಮಕ್ಕಳಿಗೋಸ್ಕರ, ಅವರ ಸುಖ ಸಂತೋಷಕ್ಕೋಸ್ಕರ ತಂದೆ ತಾಯಿ ತಮ್ಮ ಜೀವನವನ್ನೆ ಮುಡಿಪಾಗಿಡುತ್ತಾರೆ. ಆದರೆ ಇಲ್ಲಿ ವೆಲ್ಲಿಯನ್, ಕಮಲಮ್ಮ ಎಂಬ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿರುವ ಘಟನೆ ಬೆಳಕಿಗೆ…
ಜಗತ್ತಿನಲ್ಲೇ ಅತೀ ಹೆಚ್ಚಾಗಿ ಸೇವಿಸುವ ಹಣ್ಣು ಬಾಳೆಹಣ್ಣು. ಬಾಳೆಹಣ್ಣು ಅತ್ಯಂತ ಹೆಚ್ಚು ಪೋಷಕಾಂಶವುಳ್ಳ ಆಹಾರ ಎಂದು ವೈದ್ಯರಿಂದ ಹಿಡಿದು ಪ್ರತಿಯೊಬ್ಬರು ಶಿಫಾರಸು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ತಕ್ಷಣವೇ ಶಕ್ತಿ ತುಂಬುತ್ತದೆ. ಒಂದು ರೀತಿಯಲ್ಲಿ ಗ್ಲೂಕೊಸ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಕೂಡ ಹೇಳಬಹುದು.
ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ರಾಜ್ಯದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಮಂಗಳವಾರವೇ ಜಾರಿಗೆ ಬಂದಿದೆ. ಸಂಚಾರ ನಿಯಮಗಳನ್ನು ಕೇರ್ ಮಾಡದ ವಾಹನ ಸವಾರರು ಭಾರೀ ದಂಡ. ದಂಡಕ್ಕೆ ಹೆದರಿ ರಸ್ತೆಗಿಳಿಯದ ವಾಹನಗಳು, ಒಡಿಶಾದಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಕುಸಿತಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ದಂಡಗಳನ್ನು ನೋಡಿ ಬೆಚ್ಚ ಬಿದ್ದಿರುವ ವಾಹನ ಸವಾರರು ಹಲವರು ತಮ್ಮ ವಾಹನಗಳನ್ನು ಮನೆಯಿಂದ ಹೊರಗೆ ತರುತ್ತಿಲ್ಲವಂತೆ. ಇದರ ಪರಿಣಾಮ ಪೆಟ್ರೋಲ್, ಡೀಸೆಲ್ ಬೇಡಿಕೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆಯಂತೆ. ಹೌದು ಒಡಿಶಾದಲ್ಲಿ ಪೆಟ್ರೋಲ್…
ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್ ಲ್ಯಾಂಡ್ನ ಕೈನ್ಸ್ರ್ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಅವರ ಕುಟುಂಬದಲ್ಲಿ ಈಗ ಪರಿಹಾರ ಹಣದ ವಿಚಾರ ಕುಟುಂಬ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಅವರ ಕುಟುಂಬಕ್ಕೆ ಸರ್ಕಾರ, ಸಾರ್ವಜನಿಕರು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿವೆ. ಆದರೆ, ಪರಿಹಾರದ ಹಣವೇ ಈಗ ಕುಟುಂಬ ಸದಸ್ಯರ ಸಂಬಂಧಕ್ಕೆ ಅಡ್ಡಿಯಾಗಿದೆ. ಗುರು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ…