ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇದೊಂದು ಭಯಾನಕ ಸುದ್ದಿ. ಎಲ್ಲರೂ ಭಹಯಬೀಳುವಂತಹ ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್‌ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು. ಬಾಕಿ ಇಲಿಗಳು ಹಾವಿನ ಬಾಯಿಯಿಂದ ತಪ್ಪಿಸಿಕೊಂಡು ಓಡಿದರೆ ಒಂದು ಮಾತ್ರ ಹೆಬ್ಬಾವಿಗೆ ಆಹಾರವಾಗಿತ್ತು. ಈ ಭಯಾನಕ ದೃಶ್ಯ ಕಂಡ ಮಹಿಳೆ ಹೆದರಿ ತಕ್ಷಣ ತನ್ನ ಮಗ ಮಲಗಿದ್ದ ಕೋಣೆ ಹೋಗಿ ಮಗನನ್ನೂ ಎಬ್ಬಿಸಿದ್ದರು.

ಆದರೆ, ಈ ಘಟನೆಯಿಂದ ಎಂಗ್ಲರ್ ಭಯಗೊಂಡಿದ್ದರೆ ಮಗ ಮಾತ್ರ ತುಂಬಾ ಕುತೂಹಲಿಗನಾಗಿದ್ದ. ಕಾರಣ, ಹಾವು ಇಲಿಯನ್ನು ಬೇಟೆಯಾಡುವುದನ್ನು ಆತ ನೋಡಿರಲಿಲ್ಲ. ಇದೇ ಕಾರಣಕ್ಕೆ ಮಗ ಅಮ್ಮನನ್ನೂ ಕರೆದುಕೊಂಡು ಹೆಬ್ಬಾವಿನ ಇಲಿ ಬೇಟೆಯನ್ನು ನೋಡಲು ನಿಂತಿದ್ದ. ಆದರೆ, ಎಂಗ್ಲರ್ ಮಾತ್ರ ಭಯದಲ್ಲಿ ನಡುಗುತ್ತಿದ್ದರು, ಅವರ ಧ್ವನಿಯೂ ಕಂಪಿಸುತ್ತಿತ್ತು… ಈ ಭಯದ ನಡುವೆಯೇ ಜನ್ನಾ ಈ ಹೆಬ್ಬಾವಿನ ಇಲಿ ಶಿಕಾರಿಯ ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದರು. ಇದನ್ನು ಜನ್ನಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಸಾಕಷ್ಟು ಲೈಕ್ ಕಾಮೆಂಟ್ ಬಂದಿದೆ.

ಹಾವನ್ನು ಕಂಡ ಬಳಿಕ ಜನ್ನಾ ಬಾತ್ ರೂಮ್‌ನ ಬಾಗಿಲನ್ನು ಮುಚ್ಚಿದ್ದರು. ಸಣ್ಣ ಸಣ್ಣ ರಂಧ್ರಗಳಿಗೂ ಬಟ್ಟೆ ಇಟ್ಟು ಹಾವು ಮನೆಯೊಳಗೆ ಬರದಂತೆ ತಡೆದಿದ್ದರು. ಬಳಿಕ ಇವರು ಕೆಲಸಕ್ಕೆ ಹೋಗಿದ್ದರು. ಇಲ್ಲಿಂದ ಮರಳಿದ ಬಳಿಕ ಬಾತ್ ರೂಮ್‌ನ ಬಾಗಿಲು ತೆಗೆದರೆ ಹೆಬ್ಬಾವು ಇರಲಿಲ್ಲ. ಆದರೆ, ಇಲಿಗಳು ಸತ್ತು ಬಿದ್ದಿದ್ದವು. ಉರಗ ಸೆರೆ ಹಿಡಿಯುವವರು ಬಂದು ಹುಡುಕಿದಾಗಲೂ ಹಾವು ಪತ್ತೆಯಾಗಿರಲಿಲ್ಲ. ಬಹುಶಃ ಅಂದು ಹಾವು ಪೈಪಿನ ಮೂಲಕ ಹೊರಗೆ ಹೋಗಿರಬಹುದು ಎಂದು ಎಂಗ್ಲರ್ ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಮತ್ತೆ ಎಂಗ್ಲರ್ ತಮ್ಮ ಮನೆಯ ಆವರಣದಲ್ಲಿ ಮತ್ತೆ ಹೆಬ್ಬಾವನ್ನು ಕಂಡಿದ್ದರು. ತಕ್ಷಣ ಇವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಇವರು ಈ ಹೆಬ್ಬಾವನ್ನು ಸೆರೆ ಹಿಡಿಸಿದ್ದಾರೆ. ಬಳಿಕ ಈ ಹಾವನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆಗೆ ಸಾಗಿಸಲಾಗಿದೆ ಎಂದಿದ್ದಾರೆ . ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಇಂತಹದ್ದೇ ಮತ್ತೊಂದು ಘಟನೆಯೂ ಸಹ ನಡೆದಿತ್ತು. ಈ ಫೋಟೋಗಳನ್ನು ಹಾವು ರಕ್ಷಿಸುವ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.ಸದ್ಯ ಇಂತಹ ಘಟನೆಯಿಂದ ಜನರು ತುಂಬಾ ಭಯಭೀತರಾಗಿದ್ದಾರೆ. ಯಾವಾಗ ಮನೆಯೊಳಗೆ ಹಾವು ಕಾಣಿಸಿಕೊಳ್ಳುತ್ತದೋ ಎಂಬ ಆತಂಕದಲ್ಲೇ ಇವರು ಜೀವನವನ್ನು ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ
ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್ಸ್ಕಿನ್ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ. ಪ್ರತಿದಿನ ನಾವು ಬಳಕೆ ಮಾಡುವ ಸೋಪ್ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು. ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು… ಟೂಥ್ಪೇಸ್ಟ್…
ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ…
ಪ್ರಧಾನಿ ನರೆಂದ್ರ ಮೋದಿಯವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ಮಂದಿರ ನಿರ್ಮಿಸಲು ಉತ್ತರ ಪ್ರದೇಶದ ಮೀರತ್ನಲ್ಲಿ ನಿವೃತ್ತ ಅಧಿಕಾರಿಯೋರ್ವರು ಮುಂದಾಗಿದ್ದಾರೆ.
ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ.ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಾಂತಾ ಅವರಿಗಿಂತ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಬೇಕಿದೆ.ಇದೇ…