ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಳಿಗೂ ಹಾರ್ಟ್ ಅಟ್ಯಾಕ್‌ಗೂ ಅದೇನೋ ಸಖ್ಯ! ಚಳಿಗಾಲದಲ್ಲಿ, ಅದೂ ನಸುಕಿನಲ್ಲೇ ಹೃದಯಾಘಾತ ಘಟಿಸುತ್ತದೆ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆ
ಆಗುವುದರಿಂದ ಅಪಧಮನಿಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೊಟೀನ್‌ಗಳ ಪ್ರಮಾಣ ಏರುತ್ತದೆ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚು ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದ್ರೋಗಗಳು ಉಲ್ಬಣಿಸುವ ಸಾಧ್ಯತೆ ಅಧಿಕ. ಇವೆಲ್ಲ ಕಾರಣಗಳಿಂದ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಲಭಿಸದೆ ಹೃದಯಾಘಾತ ಆಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದ ಸಿಂಥೇಜಿಕ್ ಡಿಸ್ಟಾರ್ಜ್ ಅಂದರೆ ಅಡ್ರಿನಾಲಿನ್ ಪಂಪಿಂಗ್ ಅಧಿಕವಿರುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆಯುಳ್ಳ ಅಥವಾ ಈಗಾಗಲೇ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಇನ್ನೂ ಹೆಚ್ಚು.
ಅಲ್ಲದೆ, ಚಳಿಗಾಲದಲ್ಲಿ ಸಂಭವಿಸುವ ಹೃದಯಾಘಾತ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ. ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವುದನ್ನು ಗಮನಿಸಿದ್ದೀರಿ. ರಕ್ತದ ಚಲನೆ ಕಡಿಮೆಯಾಗಿ ಕೊಬ್ಬು ಅಧಿಕವಿದ್ದರೆ ಇಂಥ ಅಪಾಯ ದೇಹದೊಳಗೂ ಸಂಭವಿಸೀತು!
ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮತಿಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರವಾಗಿರಬೇಕು. ಆದರೆ, ಚಳಿಯ ದಿನಗಳಲ್ಲಿ ಇದು ಸಾಧ್ಯವಾಗದೆ ಹೋಗಬಹುದು. ಕಿರುನಾಳಗಳ ಒಳಪದರ ಕಿರಿದಾಗಿದ್ದರೆ, ಕೊಬ್ಬಿನ ಕರಣೆ ಕಟ್ಟಿದರಂತೂ ಸಂಚಾರ ಕಠಿಣ. ಆಗಲೂ ಹೃದಯಾಘಾತ ಕಟ್ಟಿಟ್ಟ ಬುತ್ತಿ. ರೋಗಿಗೆ ಶೇ.30 ಮಾರ್ಗ ಕಿರಿದಾಗಿದೆ ಎಂದರೆ, ಅದು ಉಳಿದ ದಿನಗಳಂತಲ್ಲ. ಚಳಿಯಲ್ಲಿ ಅದು ಶೇ.70ಕ್ಕೆ ಸಮ!
ಹೃದಯಾಘಾತ ಸಂಭವಿಸಿದ ಕ್ಷಣಗಳಲ್ಲಿ ಹೃದಯ ಬಡಿತದ ಮೇಲೆ ವಾತಾವರಣದಲ್ಲಿ ಆಗುವ ಏರುಪೇರುಗಳೂ ಪ್ರಭಾವ ಬೀರುತ್ತವೆ. ‘ಡಿ’ ಜೀವಸತ್ವದ ಕೊರತೆಯೂ ಹಾರ್ಟ್ ಅಟ್ಯಾಕ್‌ಗೆ ಕಾರಣ ಆಗಬಹುದು. ಸೂರ್ಯನ ಕಿರಣ ‘ಡಿ’ ಜೀವಸತ್ವದ ಆಕರ. ಚಳಿಗಾಲದಲ್ಲಿ ಮನೆಯೊಳಗೇ ಇದ್ದರೆ, ದೇಹದಲ್ಲಿ ವಿಟಮಿನ್ ‘ಡಿ’ ಉತ್ಪಾದನೆ ಕಡಿಮೆಯಾಗುತ್ತದೆ. ವೈದ್ಯವಿಜ್ಞಾನದ ಸಂಶೋಧನೆಗಳ ಪ್ರಕಾರ, ಎತ್ತರ ಪ್ರದೇಶಗಳ ಜನರಿಗೆ ಹೃದಯಾಘಾತದ ರಿಸ್ಕ್ ಕಡಿಮೆಯಂತೆ.
ಏಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯನ ಕಿರಣಗಳಲ್ಲಿನ ಅಲ್ಟ್ರಾವೈಲೆಟ್ ಪ್ರಮಾಣ ಹೆಚ್ಚಿ, ವಿಟಮಿನ್ ‘ಡಿ’ ಉತ್ಪಾದನೆ ಪ್ರಮಾಣವೂ ಅಧಿಕವಾಗುತ್ತದೆ. ಈ ಕಾರಣದಿಂದಲೇ ರಕ್ತದೊತ್ತಡ ಇಲ್ಲದ, ಕೊಲೆಸ್ಟೆರಾಲ್ ಕಡಿಮೆ ಇರುವ ಕೆಳ ಪ್ರದೇಶದ ಜನರಲ್ಲೂ ಹೃದಯಾಘಾತದ ಪ್ರಮಾಣ ಅಧಿಕವಿರುತ್ತದೆ!
ಚಳಿಗಾಲದಲ್ಲಿ ಎಲ್ಲರೂ ಆಲಸಿಗಳೇ.
ಮಧುಮೇಹ ರೋಗವು ಈ ಕಾಲದಲ್ಲಿ ಉಲ್ಬಣಿಸುತ್ತದೆ. ಸ್ಥೂಲ ಕಾಯಗಳನ್ನು ಕಂಡರೆ ಹೃದಯಾಘಾತಕ್ಕೆ ಎಲ್ಲಿಲ್ಲದ ಪ್ರೀತಿ! ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ವೈರಸ್‌ಗಳು ಹೆಚ್ಚು ಕ್ರಿಯಾಶೀಲಗೊಳ್ಳುವುದೂ ಇದೇ ವೇಳೆಯೇ. ಚಳಿಯಲ್ಲಿ ಕುರುಕಲು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಇದೂ ಹೃದಯದ ಆರೋಗ್ಯಕ್ಕೆ ಮಾರಕ ಆಗಬಹುದು.
ಆಘಾತ ತಪ್ಪಿಸಲು ಇಷ್ಟು ಮಾಡಿ
– ತೀರಾ ನಸುಕಿನಲ್ಲಿ ವಾಕಿಂಗ್‌ಗೆ ಹೋಗಬೇಡಿ. ಹಾಗೆಂದು ಸುಮ್ಮನೆ ಹೊದ್ದು ಮಲಗ್ಬೇಡಿ.
– ಚಳಿಗಾಲದಲ್ಲಿ ಹೆಚ್ಚು ಆ್ಯಕ್ಟಿವ್ ಇರಿ.
– ಬೆಚ್ಚಗಿನ ಬಟ್ಟೆ ಧರಿಸಿ.
– ಬಿಪಿ, ಶುಗರ್ ಕಂಟ್ರೋಲ್‌ನಲ್ಲಿರಲಿ.
– ಶ್ವಾಸಕೋಶದ ಸಮಸ್ಯೆ ಕಂಡು ಬಂದಲ್ಲಿ, ಸೂಕ್ತ ಚಿಕಿತ್ಸೆ ಪಡೆಯಿರಿ..
– ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
– ಲಘು ಆಹಾರ ಸೇವಿಸಿ. ಕೊಬ್ಬು ಹೆಚ್ಚಿರುವ, ಮದ್ಯ, ಧೂಮಪಾನ ವರ್ಜಿಸಿ.
– ಕೋಣೆಯೊಳಗೆ ತಣ್ಣನೆ ಗಾಳಿ ಸುಳಿಯದಂತೆ ಎಚ್ಚರ ವಹಿಸಿ.
Published by
Mayoon N / Biotechnologist / Director of DRM Career Build Center, Kolar
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ತಂಡದ ಆಟಗಾರರಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿ ಇರುವ ಆಟಗಾರ ಅಂದರೆ ವಿರಾಟ್ ಕೊಹ್ಲಿ ಎಂದು ಹೇಳಿದರೆ ತಪ್ಪಾಗಲ್ಲ, ಸದ್ಯದ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯ ಮೇಲೆ ಸಾಧನೆಯನ್ನ ಮಾಡುತ್ತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಪ್ರಥಮ ಸ್ಥಾನದಲ್ಲಿ ಇದ್ದಾರೆ, ಇನ್ನು ಪ್ರಪಂಚದ ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಬಿಟ್ಟರೆ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಆಟಗಾರ ಅಂದರೆ ಅದೂ ವಿರಾಟ್ ಕೊಹ್ಲಿ ಮಾತ್ರ. ಒಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಆಟವಾಡುತ್ತಿದ್ದಾರೆ ಅಂದರೆ ರನ್ ಗಳ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನೂರಕ್ಕೆ ನೂರರಷ್ಟು ಯಶಸ್ಸು ನಿರೀಕ್ಷಿಸಿ ನಂತರ ಬೇಸರ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಕಾರ್ಯಗಳು ಯಶಸ್ಸಿನತ್ತ ಪಯಣಿಸುವವು. ಬಂಧುವರ್ಗ ಮತ್ತು ಸ್ನೇಹಿತವರ್ಗವೂ ನಿಮ್ಮನ್ನು ಪ್ರಶಂಸಿಸುವರು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ…
ಉಡುಪಿಯಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ 2020-21ರಲ್ಲಿ 1 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಹೊಸ cochinshipyard.com ನೇಮಕಾತಿ 2020-21 ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿಯಲ್ಲಿ 2020-21 ರ ಕ್ರೇನ್ ಆಪರೇಟರ್ ಹುದ್ದೆಗೆ ಪ್ರಕಟಿಸಲಾದ ಉದ್ಯೋಗ ಅಧಿಸೂಚನೆ ಮೆಕ್ಯಾನಿಕ್ ಮೋಟಾರು ವಾಹನಕ್ಕಾಗಿ ಕೊಚ್ಚಿನ್ ಶಿಪ್‌ಯಾರ್ಡ್ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳನ್ನು ಓದಿ. ಟೆಬ್ಮಾ ಶಿಪ್‌ಯಾರ್ಡ್ಸ್ ಲಿಮಿಟೆಡ್ ನೇಮಕಾತಿ 2020 ರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ ಟೆಬ್ಮಾ ಶಿಪ್‌ಯಾರ್ಡ್ಸ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಾಹಕ…
ದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.
ಹೊಳೆ ನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ. ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆ ಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದ್ದಾರೆ. ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್…
ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ.