ತಂತ್ರಜ್ಞಾನ

ಹೃದಯಾಘಾತ ಆಗಲಿದೆ ಎಂದು 6 ಗಂಟೆ ಮೊದಲೇ ತಿಳಿದುಕೊಳ್ಳಬಹುದು..!ತಿಳಿಯಲು ಈ ಲೇಖನ ಓದಿ..

418

ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಬದಲಾದ ಜೀವನ ಶೈಲಿ ಕಾರಣ ಯುಕ್ತ ವಯಸ್ಸಿನಲ್ಲೇ ಬಹಳಷ್ಟು ಮಂದಿ ಹೃದಯಾಘಾತದಿಂದ ಮರಣಿಸುತ್ತಿದ್ದಾರೆ.

ಹೃದಯಾಘಾತ ಬಂದವರಿಗೆ ಎಷ್ಟು ಬೇಗ ಚಿಕಿತ್ಸೆ ನೀಡಿದರೆ ಅಷ್ಟು ಬೇಗ ಬದುಕುವ ಸಾಧ್ಯತೆಗಳು ಇರುತ್ತವೆ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿದರೂ ಆ ಮನುಷ್ಯನ ಪ್ರಾಣಕ್ಕೆ ಅಪಾಯ. ಆದರೆ ಆ ಹೃದಯಾಘಾತ ಯಾವ ಸಮಯದಲ್ಲಿ.. ಎಂತಹ ಪರಿಸ್ಥಿತಿಯಲ್ಲಿ ಬರುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ.. ಆದರೆ ಈ ಮಹಾಮಾರಿಯನ್ನು ತಾನು ಕಂಡುಹಿಡಿದ ಸಲಕರಣೆ ಮೂಲಕ ಆರು ಗಂಟೆ ಮೊದಲೇ ಗ್ರಹಿಸಬಹದು ಎನ್ನುತ್ತಿದ್ದಾರೆ 16 ವರ್ಷದ ಬಾಲಕ ಆಕಾಶ್ ಮನೋಜ್.

ತಮಿಳುನಾಡಿನ ಆಕಾಶ್ ಹತ್ತನೇ ತರಗತಿ ಓದುತ್ತಿದ್ದಾನೆ. ಹೃದಯಾಘಾತ ಬರುವ ಸೂಚನೆಯನ್ನು ತಾನು ಕಂಡುಹಿಡಿದ ಹೊಸ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಿದ್ದಾನೆ. ಈ ಸಲಕರಣೆಯನ್ನು ಕಂಡುಹಿಡಿದ ಆಕಾಶ್ ’ಇನ್ನೋವೇಷನ್ ಸ್ಕಾಲರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂ’ ನಡಿ ರಾಷ್ಟ್ರಪತಿ ಕೈಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.

ಈ ಸಂದರ್ಭದಲ್ಲಿ ಆಕಾಶ್ ಮಾತನಾಡುತ್ತಾ.. “ನಿಶ್ವಬ್ದವಾಗಿ ಬರುವ ಹೃದಯಾಘಾತ ಈ ನಡುವೆ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿ ಮೇಲ್ಮೋಟಕ್ಕೆ ಆರೋಗ್ಯವಾಗಿ ಕಾಣಿಸುತ್ತಾರೆ. ಹೃದಯಾಘಾತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳೂ ಅವರಲ್ಲಿ ಕಾಣಿಸಲ್ಲ. ನಮ್ಮ ತಾತ ಆರೋಗ್ಯವಾಗಿ ಕಾಣಿಸುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು. ತಾತನ ಸಾವು ನನ್ನಲ್ಲಿ ತುಂಬಾ ನೋವುಂಟು ಮಾಡಿತು. ಹೃದಯಾಘಾತವನ್ನು ಮೊದಲೇ ಕಂಡುಹಿಡಿಯುವ ಸಲಕರಣೆ ಯಾವುದಾದರೂ ತಯಾರಿಸಬೇಕು ಎಂದುಕೊಂಡೆ. ಹಾಗಾಗಿ ಈ ಸಲಕರಣೆ ಕಂಡುಹಿಡಿದೆ. ಆದರೆ ಇದನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಾಗಿದೆ. ದೇಹದ ಮೇಲೆ ಯಾವುದೇ ಗಾಯ ಮಾಡದಂತೆ ಇದನ್ನು ಉಪಯೋಗಿಸಬಹುದು” ಎಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಸಂದರ್ಭದಲ್ಲಿ ತಿಳಿಸಿದ್ದಾರೆ.

ಆಗಲಿದೆ ಎಂದು

’ರಕ್ತದಲ್ಲಿರುವ ಎಫ್‍ಎಬಿಪಿ3 ಎಂಬ ಸಣ್ಣ ಪ್ರೋಟೀನ್ ಬಳಸಿಕೊಂಡು ಹೃದಯಾಘಾತದ ಅಪಾಯವನ್ನು ತಿಳಿದುಕೊಳ್ಳಬಹುದು’ ಎಂದು ಆಕಾಶ್ ತಿಳಿಸಿದ್ದಾನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಈ ಸಲಕರಣೆ ಅದೆಷ್ಟೋ ಉಪಯುಕ್ತವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಮೊದಲೇ ಗ್ರಹಿಸಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದ್ದಾನೆ ಆ ಬಾಲಕ. ಈ ಸಲಕರಣೆಯನ್ನು ತಜ್ಞರ ಸಹಾಯದಿಂದ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತೆ ಮಾಡಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು..!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟೈಗರ್ ಪ್ರಭಾಕರ್ ಅವರ ಮೂರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ.

    ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ…

  • ದೇಶ-ವಿದೇಶ

    ಸೇನೆಯ ಮೇಲೆ ಕಲ್ಲು ತೂರಾಟ, ನಡೆಸಿದ ಯುವಕನಿಗೆ 10 ಲಕ್ಷ ಪರಿಹಾರ..!

    ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

  • ಜೀವನಶೈಲಿ

    ಖಾಲಿ ಹೊಟ್ಟೆಯಲ್ಲಿ ಚಹಾ(ಟೀ) ಕುಡಿದರೆ ಏನಾಗುತ್ತೆ ಗೊತ್ತಾ?

    ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.

  • ಸ್ಪೂರ್ತಿ

    ಅತಿ ಚಿಕ್ಕ ವಯಸ್ಸಿನಲ್ಲಿ ಐ.ಎ.ಏಸ್ ಅಧಿಕಾರಿ ಅಗಿ ಚರಿತ್ರೆ ಸೃಷ್ಟಿಸಿದ ಯುವಕ. ಈ ಸುದ್ದಿ ನೋಡಿ.

    ಮಹಾರಾಷ್ಟ್ರ ರಾಜ್ಯದ ಜಲ್ನಾ ಹಳ್ಳಿಯಲ್ಲಿ ಒಬ್ಬ ಸಾಮಾನ್ಯ ಅಟೋ ಚಾಲಕನ ಮಗನಾದಅನ್ಸರ್ ಅಹಮದ್ ಷೇಕ್ 2015 ವರ್ಷ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 371 ರ್ಯಾಂಕ್ ಸಾಧಿಸಿ ದೇಶದಲ್ಲಿ ಅತಿ ಚಿಕ್ಕ ಅಂದರೆ 21 ವಯಸ್ಸಿನಲ್ಲಿ ಐ.ಎ.ಏಸ್ ಅಧಿಕಾರಿ ಅಗಿ ಚರಿತ್ರೆ ಸೃಷ್ಟಿಸಿದ್ದಾರೆ. 2013 ರಲ್ಲಿ ನಡೆದ ಐ.ಏ.ಎಸ್ಪರೀಕ್ಷೆಯಲ್ಲಿ ರೋಮನ್ ಸೈನಿ ಅನ್ನುವ ಯುವಕ 22 ನೆ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು ಅವರ ದಾಖಲೆಯನ್ನು ಅನ್ಸರ್ ಹಿಂದೆ ಹಾಕಿದರು. ಮಧ್ಯಮಗಳೊಂದಿಗೆ ಮಾತಾನಾಡಿತ್ತ ಅನ್ಸರ್ ಹೇಳಿದರು. ತಾನು ಪಶ್ಚಿಮ ಬಂಗಾಳ…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(1 ಜನವರಿ 2019) ನಿಮ್ಮ ಪ್ರೀತಿ ಒಂದು ಹೊಸ ಎತ್ತರವನ್ನು…