inspirational, ಸಂಬಂಧ

ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನನ್ನು ತಿರಸ್ಕರಿಸುವುದಕ್ಕೆ ತೆಗೆದುಕೊಳ್ಳುವ ಸಮಯ ಕೇವಲ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

322

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ.ಆದ್ರೆ ಈಗಂತೂ ಜೀವನ ಸಂಗಾತಿ ಹುಡುಕುವುದು ಅಷ್ಟೋಂದು ಸುಲಭವಲ್ಲ.

ಜೀವನ ಸಂಗಾತಿಯ ಆಯ್ಕೆಗೆ ತಲೆಕೆಡಿಸಿಕೊಳ್ಳುವವರು ಎಷ್ಟು ಜನರಿಲ್ಲ? ಸುಂದರವಾಗಿದ್ದರೆಅನುಕೂಲವಿಲ್ಲ, ಅನುಕೂಲತೆಯಿದ್ದರೆ ಹುಡುಗ ಚೆನ್ನಾಗಿಲ್ಲ, ಎರಡೂ ಇದ್ದರೂ ಕುಟುಂಬದ ಹಿನ್ನೆಲೆಸರಿಯಿಲ್ಲ, ಎಲ್ಲವೂ ಸರಿ ಇದ್ದರೆ ಜಾತಕ ಆಗಿ ಬರೋಲ್ಲ…

ಮದುವೆ ಮಾಡೋದಂದ್ರೆ ಸುಲಭಾನಾ? ಎಲ್ಲವೂ ಸರಿ ಇರಬೇಕಂದ್ರೆ ಮದುವೆನೇ ಆಗಲ್ಲ, ರಾಜಿ ಆಗ್ಲೇ ಬೇಕು ಎಂದುಕೊಂಡೇ ಯಾರೋ ಒಬ್ಬರನ್ನು ಒಪ್ಪಿಕೊಳ್ಳುವುದುನಂತರದ ಮಾತು. ಆದರೆ ಹೀಗೆ ವರಾನ್ವೇಷಣೆಯ ಪ್ರಕ್ರಿಯೆಯಲ್ಲಿ ಹುಡುಗಿಯರು ಹಾಕುವ ಷರತ್ತುಳು, ವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಹುಡುಗನನ್ನು ಹುಡುಕುವ ಪಾಲಕರ ಗೋಳನ್ನು ನೋಡಿದರೆ ಅಯ್ಯೋ ಎನ್ನಿಸಬಹುದು!

ಆದರೆ ಸಾಕಷ್ಟು ಷರತ್ತು, ಬೇಡಿಕೆಗಳೆಲ್ಲ ಇದ್ದಾಗ್ಯೂ ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಥವಾ ಅವನ್ನು ತಿರಸ್ಕರಿಸು ವುದಕ್ಕೆತೆಗೆದುಕೊಳ್ಳುವ ಸಮಯ ಕೇವಲ ಹದಿನೈದು ನಿಮಿಷವಂತೆ!

ಭವಿಷ್ಯ ಪೂರಾ ಜೊತೆಯಾಗಿರಬೇಕಾದ ವ್ಯಕ್ತಿಯ ಬಗ್ಗೆ ಹದಿನೈದು ನಿಮಿಷ ಮಾತ್ರವೇ ಯೋಚಿಸ್ತಾರಾ? ಹೌದು ಎನ್ನುತ್ತದೆ ವಾಷಿಂಗ್ಟನ್ನಿನ ಮನಃಶಾಸ್ತ್ರಜ್ಞರ ತಂಡ. ಮನಸ್ಸಿನಲ್ಲಿತನ್ನನ್ನು ವರಿಸುವ ಹುಡುಗನ ಬಗ್ಗೆ ಎಷ್ಟೇ ಕನಸುಗಳಿದ್ದರೂ, ಗಂಭೀರವಾಗಿ ಜೀವನ ಸಂಗಾತಿಯ ಆಯ್ಕೆಯ ಬಗ್ಗೆ ಯೋಚಿಸುವಾಗ ಮಾತ್ರ ಮಹಿಳೆ ಹೆಚ್ಚುಯೋಚಿಸುವುದಿಲ್ಲವಂತೆ.

ತನ್ನೆಲ್ಲ ನಿರೀಕ್ಷೆಯೊಂದಿಗೆ ಕ್ರಮೇಣ ಕೊಂಚ ರಾಜಿಯಾಗುತ್ತ, ತನ್ನಿಂದಲೂ ತನ್ನ ಸಂಗಾತಿ ಇಂಥವನ್ನೆಲ್ಲ ನಿರೀಕ್ಷಿಸು ತ್ತಾನಲ್ಲ ಎಂಬ ಸತ್ಯವನ್ನು ಅರಿಯುತ್ತಾಳಂತೆ.ಕೊರತೆಗಳನ್ನು ಸರಿಪಡಿಸಿಕೊಂಡು, ಪರಸ್ಪರರ ಅಭಿರುಚಿಗಳನ್ನು ಗೌರವಿಸಿಕೊಂಡು ಬದುಕಿದರೆ ಇಬ್ಬರ ನಿರೀಕ್ಷೆಯೂ ನಿಜವಾಗುತ್ತೆ ಎಂಬುದು ಕ್ರಮೇಣಅರ್ಥವಾಗುತ್ತದೆಯಂತೆ. ಆದರೆ ಈ ಎಲ್ಲ ಜ್ಞಾನೋದಯಕ್ಕೂ ಮುನ್ನ ಆಕೆ ಭವಿಷ್ಯದ ಬಗ್ಗೆ ಯೋಚಿಸಲು ತೆಗೆದುಕೊಳ್ಳುವ ಸಮಯ ಮಾತ್ರ ತೀರಾ ಕಡಿಮೆ ಎನ್ನಿಸುತ್ತದಲ್ಲವೇ!?

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ