ಬಳ್ಳಾರಿ ಜಿಲ್ಲೆಯ ಎಸ್‍ಬಿಐ ಬ್ಯಾಂಕ್ ಎಟಿಎಂನಲ್ಲಿ ಹಣದ ಬದಲು ಪೇಪರ್ ಬಂದ ಪ್ರಕರಣಕ್ಕೆ ಸಂಭಂದಿಸಿದಂತೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಇಲ್ಲಿನ ಟ್ಯಾಂಕ್ 1 ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ ನೋಟಿನ ಬದಲು ಪೇಪರ್ ಬಂದ ಘಟನೆ ನಡೆದಿದೆ.

ರಮೇಶ್ ಎನ್ನುವವರು 8000 ರೂಪಾಯಿ ಡ್ರಾ ಮಾಡಿದ್ದು 500 ರೂಪಾಯಿ ಮುಖಬೆಲೆಯ 15 ನೋಟುಗಳ ನಡುವೆ ಅದೇ ಗಾತ್ರದ ಚಲನ್ ಮಾದರಿಯ ಪೇಪರ್‌ವೊಂದು ಬಂದಿದೆ.

ಹಣವನ್ನು ಎಣಿಸಿ ನೋಡುವಾಗ ಪೇಪರ್ ಕಂಡಿದ್ದು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದೋ ಹಣದ ಕಟ್ಟಿನಲ್ಲಿ ಪೇಪರ್ ಇದ್ದ ಕಾರಣ ಹೀಗಾಗಿರಬಹುದು ಎಂದು ಹೇಳಲಾಗಿದೆ.
ಬ್ಯಾಂಕ್ ವತಿಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಗ್ರಾಹಕ ರಮೇಶ್‍ಗೆ 500 ರೂಪಾಯಿ ಹಣ ವಾಪಸ್ ಮಾಡುವ ಭರವಸೆ ನೀಡಿರೋ ಬ್ಯಾಂಕ್ ಸಿಬ್ಬಂದಿ, ಇನ್ನೆಂದೂ ಈ ರೀತಿ ತಪ್ಪಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭಾನುವಾರದಂದು ರಮೇಶ್ ಅವರು ಬಳ್ಳಾರಿಯ ಎಸ್‍ಬಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಗ 500 ರೂ. ಬದಲಾಗಿ ಪೇಪರ್ ಬಂದಿತ್ತು.

ಗ್ರಾಹಕ ರಮೇಶ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ಹಣವನ್ನು ಮರಳಿ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೇ ಗ್ರಾಹಕ ರಮೇಶ್ ಮುಂದೆ ಬ್ಯಾಂಕ್ ಅಧಿಕಾರಿಗಳು ತಪ್ಪೊಪ್ಪಿಕೊಂಡು ಗ್ರಾಹಕನ ಕ್ಷಮೆ ಕೋರಿದ್ದಾರೆ.