ಸಿನಿಮಾ

ಸೆಂಚುರಿ ಸ್ಟಾರ್ ಶಿವಣ್ಣನ ವಿರುದ್ದ, ಹುಚ್ಚ ವೆಂಕಟ್ ತಿರುಗಿ ಬಿದ್ದಿದೇಕೆ.!

332

‘ನನ್ ಎಕ್ಕಡ’ ಡೈಲಾಗ್’ನಿಂದ್ಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಹ್ಯಾಟ್ರಿಕ್ ಹಿರೋ, ಸೆಂಚುರಿ ಸ್ಟಾರ್ ಶಿವಣ್ಣ ವಿರುದ್ದ ವೀಡಿಯೋ ಮೂಲಕ ತಿರುಗಿ ಬಿದ್ದಿದ್ದಾರೆ.

ಅಸಲಿಗೆ ಅಲ್ಲಿ ನಡೆದಿದ್ದೇನು…

ಶಿವಣ್ಣನನ್ನು ಭೇಟಿ ಮಾಡಲೆಂದು ಹುಚ್ಚ ವೆಂಕಟ್ ಶಿವಣ್ಣನ ಮನೆಯ ಬಳಿ ಹೋಗಿದ್ದರಂತೆ.. ಆದರೆ ಮನೆಯಲ್ಲಿ ಶಿವಣ್ಣ ಇರಲಿಲ್ಲವಂತೆ.ಶಿವಣ್ಣನನ್ನು ಭೇಟಿಯಾಗಲು ಬಿಡದೇ ಡ್ರೈವರ್ ಹಾಗೂ ಸೆಕ್ಯುರಿಟಿ ಹುಚ್ಚ ವೆಂಕಟ್ ರನ್ನು ಅವಮಾನ ಮಾಡಿದರಂತೆ..ಇವರಿಗೆ ಕುಡಿಯಲು ಒಂದು ಗ್ಲಾಸ್ ನೀರೂ ಕೊಡದೆ ಅವಮಾನ ಮಾಡಿದ್ದಾರೆಂದು,ಕೋಪಗೊಂಡ ಹುಚ್ಚ ವೆಂಕಟ್.. ಶಿವಣ್ಣನ ಮನೆಯ ಮುಂದೆಯೇ ನಿಂತುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ..

ಹುಚ್ಚ ವೆಂಕಟ್ ವಿಡಿಯೋದಲ್ಲಿ ಹೇಳಿದ್ದೇನು…

ಶಿವರಾಜ್ ಕುಮಾರ್ ಅವರೇ ನಾನು ಎರಡು ದಿನಗಳಿಂದ ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದೇನೆ.ಆದರೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ನಿಮ್ಮ ಡ್ರೈವರ್ ಹತ್ತಿರ ನಂಬರ್ ತೆಗೆದುಕೊಂಡೆ,ಆದ್ರೆ ಅವರು ರಿಸೀವ್ ಮಾಡ್ದೆ ಫೋನ್ ಕಟ್ ಮಾಡ್ತಾನೆ.ನಾನು ವಿಷ್ಣು ಅವರನ್ನು ಬಿಟ್ರೆ ಬೇರೆ ಯಾರನ್ನು ಇಷ್ಟ ಪಟ್ಟಿಲ್ಲ. ಆದ್ರೆ ನಿಮ್ಮನ್ನು ನೋಡಲು ಬಂದೆ ಆದರೆ ನಿಮ್ಮ ಡ್ರೈವರ್ ಒಂದು ಲೋಟ ನೀರು ಸಹ ಕೊಡದೆ ಅವಮಾನ ಮಾಡಿದ್ದಾನೆ ಎಂದೆಲ್ಲಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಮೊದಲು ಟಗರು ಸಿನಿಮಾದಲ್ಲಿ ಶಿವಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂಬ ಕಾರಣಕ್ಕೆ ನಿರ್ದೇಶಕರಾದ ಸೂರಿ ರವರಿಗೆ ಹುಚ್ಚ ವೆಂಕಟ್ ಬಾಯಿಗೆ ಬಂದ ಹಾಗೆ ಬೈದಿದ್ದ ಕಾರಣ ಹುಚ್ಚ ವೆಂಕಟ್ ರನ್ನು ಶಿವಣ್ಣ ಭೇಟಿಯಾಗಿಲ್ಲವೆಂದು ತಿಳಿದು ಬಂದಿದೆ..

ಈ ಮೊದಲು ಬಿಗ್ ಬಾಸ’ನಲ್ಲಿ ಸುದೀಪ್ ರವರ ವಿರುದ್ದ ತಿರುಗಿ ಬಿದ್ದು ಸುದೀಪ್ ಅಭಿಮಾನಿಅಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಶಿವಣ್ಣನ ವಿರುದ್ದ ಮಾತನಾಡಿ ಶಿವಣ್ಣ ನ ಅಭಿಮಾನಿಗಳಿಗೆ ಕೋಪ ಬರೆಸುವ ಹಾಗೆ ಮಾಡಿದ್ದಾರೆ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ