ಜೀವನಶೈಲಿ

ಸುಲಭವಾಗಿ ನಿಮ್ಮ ಜೀನ್ಸ್ ಪ್ಯಾಂಟ್ ವಾಶ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

374

ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ ಜೀನ್ಸ್ ಪ್ಯಾಂಟನ್ನು ತೊಳೆಯದೆ ಪದೇ ಪದೇ ಧರಿಸಬಹುದು. ಆದ್ರೆ ಈ ಜೀನ್ಸ್ ತೊಳೆಯೋದು ಮಾತ್ರ ಕಷ್ಟದ ಕೆಲಸ.

ಕೆಲಮೊಮ್ಮೆ ನಾವು ಮಾಡುವ ತಪ್ಪಿನಿಂದ ಜೀನ್ಸ್ ಬಣ್ಣ ಬೇಗ ಮಾಸುತ್ತದೆ. ಹರಿದು ಹೋಗುವ ಛಾನ್ಸ್ ಕೂಡ ಇದೆ. ನಾವು ಹೇಳುವ ಉಪಾಯ ಅನುಸರಿಸಿದ್ರೆ ಜೀನ್ಸ್ ಬಣ್ಣವನ್ನು ಹಾಗೇ ಉಳಿಸಿಕೊಂಡು ಹೋಗಬಹುದು.ನೀವು ವಾಷಿಂಗ್ ಮಷಿನ್ ಗೆ ಜೀನ್ಸ್ ಹಾಕ್ತೀರಾ ಎಂದಾದ್ರೆ ಮೃದು ಬಟ್ಟೆ ವಾಷ್ ಮಾಡುವ ಬಟನ್ ಒತ್ತಿ. ಆಗ ಜೀನ್ಸ್ ಬಣ್ಣ ಬೇಗ ಮಾಸುವುದನ್ನು ತಪ್ಪಿಸಬಹುದು.

ಡಿಟ ರ್ಜೆಂಟ್ಆಯ್ಕೆಯಲ್ಲಿ ಎಚ್ಚರ ಇರಲಿ. ತೀವ್ರವಲ್ಲದ ಡಿಟರ್ಜೆಂಟ್ ಬಳಸಿ. ಇದರಲ್ಲಿ ಕಾಸ್ಟಿಕ್ ಸೋಡಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಜೀನ್ಸ್ ಗೆ ಒಳ್ಳೆಯದು.

ತಣ್ಣನೆಯ ನೀರಿನಲ್ಲಿ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಿ. ಯಾವುದೇ ಕಾರಣಕ್ಕೂ ಬಿಸಿ ನೀರನ್ನು ಉಪಯೋಗಿಸಬೇಡಿ. ಇದರಿಂದ ಬಣ್ಣ ಮಾಸುವುದಲ್ಲದೇ, ಜೀನ್ಸ್ ಬಟ್ಟೆ ಬೇಗ ಹರಿದು ಹೋಗುವ ಸಾಧ್ಯತೆ ಇದೆ.

ಜೀನ್ಸನ್ನು ಯಾವಾಗಲೂ ಉಲ್ಟಾ ಮಾಡಿ ತೊಳೆಯಿರಿ. ಇದರಿಂದ ಬಟ್ಟೆ ಡ್ಯಾಮೇಜ್ ಆಗುವುದನ್ನು ತಪ್ಪಿಸಬಹುದು. ಪ್ರತಿ ಜೀನ್ಸ್ ನಲ್ಲಿ ಹೇಗೆ ತೊಳೆಯಬೇಕೆಂಬ ಬಗ್ಗೆ ಸೂಚನೆಗಳಿರುತ್ತವೆ. ಹಾಗೇ ಜೀನ್ಸ್ ಬಟ್ಟೆಗಳನ್ನು ತೊಳೆಯಿರಿ. ಪ್ರತ್ಯೇಕವಾಗಿ ಜೀನ್ಸ್ ತೊಳೆಯಿರಿ. ನಿಮ್ಮ ಬೇರೆ ಬಟ್ಟೆಯ ಬಣ್ಣ ಜೀನ್ಸ್ ಗೆ ತಗಲುವ ಸಾಧ್ಯತೆ ಇರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ