ಸಿನಿಮಾಗಳಲ್ಲಿ ಸ್ಟಾರ್‌ಗಳು ಬಳಸುವ ಬಟ್ಟೆಗಳೆಂದರೆ ಅಭಿಮಾನಿಗಳಿಗೆ ತುಂಬಾ ಕ್ರೇಜ್ ಇರುತ್ತದೆ. ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಹಾಕಿಕೊಂಡರೆ ಇನ್ನಷ್ಟು ಕ್ರೇಜ್ ಬೆಳೆಯುತ್ತದೆ. ಸದ್ಯಕ್ಕೆ ಹೀರೋಗಳು ಸಹ ಟ್ರೆಂಡ್ ಸೆಟ್ ಮಾಡಬೇಕೆಂಬ ಉದ್ದೇಶದಿಂದ ಟ್ರೆಂಡಿ ಬಟ್ಟೆಗಳನ್ನು ಹಾಕಿಕೊಂಡು ಅವಕ್ಕೆ ಕ್ರೇಜ್ ತರುತ್ತಿರುತ್ತಾರೆ. ಆಗಿನ ಕಾಲದಲ್ಲಿ ಆರತಿ, ಭಾರತಿ, ಕಲ್ಪನಾರ ಸೀರೆ ಅವರಿಟ್ಟುಕೊಳ್ಳುವ ಕುಂಕುಮವನ್ನು ಫಾಲೋ ಆಗುತ್ತಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ ಮೀಡಿಯಂ ಹೀರೋ ಸಹ ಒಂದೊಂದು ಸಿನಿಮಾಗೆ 10 ಲಕ್ಷಕ್ಕೂ ಹೆಚ್ಚು ಬಟ್ಟೆಗಳನ್ನು ಖರ್ಚು ಮಾಡಿಸುತ್ತಿದ್ದಾನೆ.

ಹೀರೋಯಿನ್ ಸಂಗತಿಗೆ ಬಂದರೆ ಕಾಜಲ್‌ಗಾದರೆ ಒಂದು ಸಿನಿಮಾಗೆ 35 ರಿಂದ 40 ಲಕ್ಷಗಳ ವರೆಗೆ ಬಟ್ಟೆಗೇ ಖರ್ಚಾಗುತ್ತದೆ. ಇದೆಲ್ಲಾ ಸರಿ ಸಿನಿಮಾಗಾಗಿ ಇಷ್ಟೆಲ್ಲಾ ದುಡ್ಡು ಸುರಿದು ಬಟ್ಟೆಗಳನ್ನು ಕೊಳ್ಳುತ್ತಿದ್ದಾರಲ್ಲ, ಸಿನಿಮಾ ಮುಗಿದ ಮೇಲೆ ಈ ಬಟ್ಟೆಗಳನ್ನು ಏನು ಮಾಡುತ್ತಾರೆ? ಕೆಲವು ಮಂದಿ ನಿರ್ಮಾಪಕರು ಗೋಡೌನ್‌ನಲ್ಲಿ ಬಿಸಾಕುತ್ತಾರೆ. ಇನ್ನೂ ಕೆಲವು ನಿರ್ಮಾಪಕರು ಸೆಕೆಂಡ್ಸ್‌ನಲ್ಲಿ ಮಾರುತ್ತಾರೆ. ಸುಮಾರು 50 ಲಕ್ಷದ ಬಟ್ಟೆಗಳನ್ನು 5 ಲಕ್ಷಕ್ಕೆಲ್ಲಾ ಮಾರಿದ ಸಾಕಷ್ಟು ಉದಾಹರಣೆಗಳಿವೆ.

ಅದೇ ರೀತಿ ಸ್ಟಾರ್ ಹೀರೋ ಆದರೆ ಸುಮಾರು 30 ರಿಂದ 40 ಲಕ್ಷಗಳ ತನಕ ಬಟ್ಟೆಗಳಿಗೇ ಖರ್ಚಾಗುತ್ತದೆ. ಹಾಗಾಗಿ ನಿರ್ಮಾಪಕರು ಹೀರೋಗಳ ಜತೆಗೆ ಬಟ್ಟೆಗಳಿಗಾಗಿ ಪ್ಯಾಕೇಜ್ ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೈನರ್‌ಗಳಿಗೆ ಬಜೆಟ್ ತಿಳಿಸಿ ಅಷ್ಟರೊಳಗೆ ಮುಗಿಸಬೇಕೆಂದು ಹೇಳುತ್ತಿದ್ದಾರೆ. ಡಿಸೈನರ್‌ಗಳು ಫಾರಿನ್‌ನಿಂದ ಬ್ರಾಂಡ್ಸ್ ತರಿಸಿ ಡಿಸೈನ್ ಮಾಡುತ್ತಿದ್ದಾರೆ.

ಕೆಲವು ಸಿನಿಮಾ ಕಾಸ್ಟ್ಯೂಮ್ಸ್‌ನವರು ಕೊಂಡು ಬ್ಯಾಕ್ ಗ್ರೌಂಡ್ ಕಲಾವಿದರಿಗೆ ಬಾಡಿಗೆಗೆ ನೀಡುತ್ತಿರುತ್ತಾರೆ. ಇನ್ನು ದೊಡ್ದ ದೊಡ್ದ ಜಾಕೆಟ್, ಶೂಸ್‍ನಂತಹವನ್ನು ಮುಂಬೈನಲ್ಲಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರುತ್ತಿರುತ್ತಾರೆ. ಹೀರೋಯಿನ್ ಸೀರೆಗಳಾದರೂ ಅಷ್ಟೇ.

ಒಂದು ವೇಳೆ ಯಾವುದಾದರೂ ಡ್ರೆಸ್ ಇಷ್ಟವಾದರೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀರೋಯಿನ್ ಸೀರೆ, ಒಡವೆ, ಚಪ್ಪಲಿ ಎಲ್ಲವನ್ನೂ ಸೆಕೆಂಡ್ಸ್‌ನಲ್ಲಿ ಮಾರುತ್ತಾರೆ.ಒಂದು ವೇಳೆ ದೊಡ್ಡ ನಿರ್ಮಾಪಕನಾಗಿದ್ದು ಸದಾ ಸಿನಿಮಾಗಳನ್ನು ನಿರ್ಮಿಸುತ್ತಿದ್ದರೆ ಗೋಡೌನ್‌ನಲ್ಲಿ ಇಟ್ಟುಕೊಂಡು ಅದನ್ನು ಪೋಷಕ ಕಲಾವಿದರಿಗೆ ಉಪಯೋಗಿಸುತ್ತಿತ್ತಾನೆ.