*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಎಲ್ಲಾ ಚುನಾವಣೆಗೂ ಸ್ಪರ್ಧಿಸುವ ಮೂಲಕ ಎಲೆಕ್ಷಿನ್ ಕಿಂಗ್ ಎಂದು ಖ್ಯಾತಿ ಪಡೆದಿರುವ ಡಾ. ಕೆ.ಪದ್ಮರಾಜನ್ ಮತ್ತೊಂದು ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.

ಮೂಲತಃ ಡಾ. ಕೆ.ಪದ್ಮರಾಜನ್ ತಮಿಳುನಾಡಿನವರಾಗಿದ್ದು, ಭಾರತದಲ್ಲಿ ಎಲ್ಲೇ ಚುನಾವಣಾ ನಡೆದರೂ ಕೂಡ ಇವರು ಪ್ರತಿನಿಧಿಸುತ್ತಾರೆ. ಅದರಲ್ಲೂ ಘಟಾನು ಘಟಿ ರಾಜಕಾರಣಿಗಳು ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ಅವರ ಸ್ಪರ್ಧಿಯಾಗಿ ಇವರು ನಿಲ್ಲುತ್ತಾರೆ.

ಲಿಮ್ಕಾ ದಾಖಲೆ
ಅತೀ ಹೆಚ್ಚು ಭಾರತೀಯ ಚುನಾವಣೆಗಳಲ್ಲಿ ಭಾಗವಹಿಸಿ ಲಿಮ್ಕಾ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿರುವ ಇವರಿಗೆ ‘ಎಲೆಕ್ಷನ್ ಕಿಂಗ್’ ಎಂಬ ಬಿರುದು ಸಹ ಇರುವುದು ವಿಶೇಷ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
ಈಗ ಇವರು ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಾಳಿಯಾಗಿಯೇ ಸ್ಪರ್ಧಿಸುತ್ತಿದ್ದಾರೆ.

ಹೋಮಿಯೋಪತಿ ವೈದ್ಯ
ಸೇಲಂ ಜಿಲ್ಲೆಯಲ್ಲಿ ಹೋಮಿಯೋಪತಿ ವೈದ್ಯರಾಗಿರುವ ಇವರು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಲುವಾಗಿ ಈಗಾಗಲೇ ನಾಮ ಪತ್ರ ಸಲ್ಲಿಸಿದ್ದು, ಇದು ಪದ್ಮರಾಜನ್’ರವರ 191ನೇ ಚುನಾವಣೆಯಾಗಿದೆ.

ಗಿನ್ನಿಸ್ ದಾಖಲೆ
ಈಗಾಗಲೇ ಲಿಮ್ಕಾ ದಾಖಲೆ ತಮ್ಮದಾಗಿಸಿಕೊಂಡಿರುವ ಇವರು, ಕೇವಲ ಗಿನ್ನಿಸ್ ದಾಖಲೆಗಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. 1988ರಿಂದಲೂ ಭಾರತದ ಲೋಕಸಭೆ ಚುನಾವಣಾ ಸೇರಿದಂತೆ ಹಲವಾರು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಇವರು ಎಲ್ಲೂ ಸಹ ಗೆದ್ದಿಲ್ಲ.

ಇವರ ಇನ್ನೊಂದು ವಿಷೆಶವೆಂದ್ರೆ ಹಳ್ಳಿಯಿಂದ ದಿಲ್ಲಿತನಕ ನಡೆಯುವ ಎಲ್ಲಾ ತರದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದು ಕೇವಲ ದಾಖಲೆಗಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.