News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ರಾಜಕೀಯ

ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಬರಲು ಕಾರಣವೇನು…?ರೆಬೆಲ್ ಶಾಸಕ ಬಾಲಕೃಷ್ಣರವರು ಕೊಟ್ಟ ಹೇಳಿಕೆ..!

117

ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕೃಷ್ಣ ರವರನ್ನು ಕುಮಾರಸ್ವಾಮಿ ರವರು ಪಕ್ಷದ್ರೋಹಿ ಎಂದು ಎಚ್​ಡಿಕೆ ಆರೋಪವಾರಿಸಿದರು…

ಈ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ ರವರು ಜೆಡಿಎಸ್​ನಿಂದ ಹೊರಬಂದಿರೋದು ಎಲ್ಲರೂ ಜನತಾ ಪರಿವಾರದವರು. ಅವರನ್ನೆಲ್ಲಾ ಸರಿಯಾಗಿ ಗೌರವದಿಂದ ನಡೆಸಿಕೊಂಡಿದಿದ್ದರೆ ಯಾರೂ ಪಕ್ಷ ಬಿಡುತ್ತಿರಲಿಲ್ಲ, ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಜೆಡಿಎಸ್ ಪಕ್ಷದ ಹಳೆ ವಿಚಾರದ ಬಗ್ಗೆ ಮಾತನಾಡಿದ ಇವರು, ಸದೃಢವಾಗಿರುವವರನ್ನು, ಪಕ್ಷ ಕಟ್ಟಿದವರನ್ನು, ಹಾಗೂ ಹೆಚ್ಚು ಮಾತನಾಡುವವರನ್ನು ಹಂತಹಂತವಾಗಿ ಹೊರಗೆ ಹಾಕಿದ್ರು. ಜನತಾದಳದ ನಾಯಕರನ್ನು ಒಟ್ಟಿಗೆ ಇಟ್ಟುಕೊಂಡಿದಿದ್ರೆ ಬೇರೆಯವರನ್ನು ಆಶ್ರಯಿಸಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬರುತ್ತಿರಲಿಲ್ಲ. ಸಿದ್ದರಾಮಯ್ಯ, ದೇಶಪಾಂಡೆಯಂಥ ನಾಯಕರನ್ನು ಸರಿಯಾಗಿ ನಡೆಸಿಕೊಂಡಿದ್ರೆ ಇಷ್ಟು ಹೊತ್ತಿಗಾಗಲೇ 2-3 ಬಾರಿ ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಈ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅವರೇ ಕುಳಿತುಕೊಂಡು ಆಲೋಚನೆ ಮಾಡಲಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಬಿಜೆಪಿ ಅವರ ಪರಿವರ್ತನಾ ಬಗ್ಗೆ ಮಾತನಾಡಿದ ಇವರು, ಮಾಗಡಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಏನೂ ವಿಶೇಷತೆ ಇಲ್ಲ. ಇಲ್ಲಿ ಬಿಜೆಪಿಗೆ ಜನಬೆಂಬಲ ಇಲ್ಲ ಎಂದು ಹೇಳಿದ್ದಾರೆ.ಹೆಚ್ಚು ಎಂದರೆ ಬೆರಳಿಣಿಕೆಯ ಮತ ಬರಬಹುದು. ಆದರೆ, ಬಿಜೆಪಿ ಗೆಲ್ಲಲು ಅಸಾಧ್ಯ ಎಂದು ಶಾಸಕ ಬಾಲಕೃಷ್ಣ ತಿಳಿಸಿದ್ದಾರೆ. ಸಿ ಪಿ ಯೋಗೇಶ್ವರ್ ರವರು ಚುನಾವಣೆಯಲ್ಲಿ ಸ್ಪರ್ದಿಸಬಹುದು ಆದರೆ ಗೆಲ್ಲುವುದು ಅಸಾಧ್ಯದ ಮಾತು ಎಂದು ತಿಳಿಸಿದರು. ಇನ್ನು ಸದ್ಯದಲ್ಲೇ ನಾನು ಹಾಗು ಉಳಿದ ರೆಬೆಲ್ ಶಾಸಕರು ಎಲ್ಲರು ಕೂಡ, ಬಜೆಟ್ ಅಧಿವೇಶನ ಮುಗಿದ ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ರವರು ಪಕ್ಷದಿಂದ ಹೊರಬಂದಿದ್ದು ಇದೇ ಕಾರಣಕ್ಕೆ…

ಈಗೆ ಕುಮಾರಸ್ವಾಮಿ ಹಾಗು ದೇವೇಗೌಡ ವಿರುದ್ಧ ಆಕ್ರೋಶವ್ಯಕ್ತ ಪಡಿಸಿರುವ ಬಾಲಕೃಷ್ಣ ರವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡ ಇದೇ ಕಾರಣಕ್ಕೆ, ನಮ್ಮಂತೆಯೇ ಪಕ್ಷದಿಂದ ಹೊರಬಂದಿರುವುದು ಎಂದು ತಿಳಿಸಿದ್ದಾರೆ. ಇಂದು ಏನಾದರು ಅವರು ಪಕ್ಷದಲ್ಲಿದ್ದಿದ್ದರೆ, ಇಂದು ಪಕ್ಷ ಇನ್ನು ಬೆಳೆಯುತಿತ್ತು. ಮೊದಲು ನಾಯಕರನ್ನು ಹೇಗೆ ನಡೆಸುಕೊಳ್ಳಬೇಕೆಂದು ಕುಮಾರಸ್ವಾಮಿ ಹಾಗು ದೇವೇಗೌಡ್ರು ಅರಿಯಲಿ ಎಂದು ತಮ್ಮೆಲ್ಲ ಆಕ್ರೋಶವನ್ನು ವ್ಯಥಾ ಪಡಿಸಿದ್ದಾರೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ