ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ ರವರು ಜೆಡಿಎಸ್ನಿಂದ ಹೊರಬಂದಿರೋದು ಎಲ್ಲರೂ ಜನತಾ ಪರಿವಾರದವರು. ಅವರನ್ನೆಲ್ಲಾ ಸರಿಯಾಗಿ ಗೌರವದಿಂದ ನಡೆಸಿಕೊಂಡಿದಿದ್ದರೆ ಯಾರೂ ಪಕ್ಷ ಬಿಡುತ್ತಿರಲಿಲ್ಲ, ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಜೆಡಿಎಸ್ ಪಕ್ಷದ ಹಳೆ ವಿಚಾರದ ಬಗ್ಗೆ ಮಾತನಾಡಿದ ಇವರು, ಸದೃಢವಾಗಿರುವವರನ್ನು, ಪಕ್ಷ ಕಟ್ಟಿದವರನ್ನು, ಹಾಗೂ ಹೆಚ್ಚು ಮಾತನಾಡುವವರನ್ನು ಹಂತಹಂತವಾಗಿ ಹೊರಗೆ ಹಾಕಿದ್ರು. ಜನತಾದಳದ ನಾಯಕರನ್ನು ಒಟ್ಟಿಗೆ ಇಟ್ಟುಕೊಂಡಿದಿದ್ರೆ ಬೇರೆಯವರನ್ನು ಆಶ್ರಯಿಸಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬರುತ್ತಿರಲಿಲ್ಲ. ಸಿದ್ದರಾಮಯ್ಯ, ದೇಶಪಾಂಡೆಯಂಥ ನಾಯಕರನ್ನು ಸರಿಯಾಗಿ ನಡೆಸಿಕೊಂಡಿದ್ರೆ ಇಷ್ಟು ಹೊತ್ತಿಗಾಗಲೇ 2-3 ಬಾರಿ ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಈ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅವರೇ ಕುಳಿತುಕೊಂಡು ಆಲೋಚನೆ ಮಾಡಲಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇನ್ನು ಬಿಜೆಪಿ ಅವರ ಪರಿವರ್ತನಾ ಬಗ್ಗೆ ಮಾತನಾಡಿದ ಇವರು, ಮಾಗಡಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಏನೂ ವಿಶೇಷತೆ ಇಲ್ಲ. ಇಲ್ಲಿ ಬಿಜೆಪಿಗೆ ಜನಬೆಂಬಲ ಇಲ್ಲ ಎಂದು ಹೇಳಿದ್ದಾರೆ.ಹೆಚ್ಚು ಎಂದರೆ ಬೆರಳಿಣಿಕೆಯ ಮತ ಬರಬಹುದು. ಆದರೆ, ಬಿಜೆಪಿ ಗೆಲ್ಲಲು ಅಸಾಧ್ಯ ಎಂದು ಶಾಸಕ ಬಾಲಕೃಷ್ಣ ತಿಳಿಸಿದ್ದಾರೆ. ಸಿ ಪಿ ಯೋಗೇಶ್ವರ್ ರವರು ಚುನಾವಣೆಯಲ್ಲಿ ಸ್ಪರ್ದಿಸಬಹುದು ಆದರೆ ಗೆಲ್ಲುವುದು ಅಸಾಧ್ಯದ ಮಾತು ಎಂದು ತಿಳಿಸಿದರು. ಇನ್ನು ಸದ್ಯದಲ್ಲೇ ನಾನು ಹಾಗು ಉಳಿದ ರೆಬೆಲ್ ಶಾಸಕರು ಎಲ್ಲರು ಕೂಡ, ಬಜೆಟ್ ಅಧಿವೇಶನ ಮುಗಿದ ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ತಿಳಿಸಿದರು.

ಈಗೆ ಕುಮಾರಸ್ವಾಮಿ ಹಾಗು ದೇವೇಗೌಡ ವಿರುದ್ಧ ಆಕ್ರೋಶವ್ಯಕ್ತ ಪಡಿಸಿರುವ ಬಾಲಕೃಷ್ಣ ರವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡ ಇದೇ ಕಾರಣಕ್ಕೆ, ನಮ್ಮಂತೆಯೇ ಪಕ್ಷದಿಂದ ಹೊರಬಂದಿರುವುದು ಎಂದು ತಿಳಿಸಿದ್ದಾರೆ. ಇಂದು ಏನಾದರು ಅವರು ಪಕ್ಷದಲ್ಲಿದ್ದಿದ್ದರೆ, ಇಂದು ಪಕ್ಷ ಇನ್ನು ಬೆಳೆಯುತಿತ್ತು. ಮೊದಲು ನಾಯಕರನ್ನು ಹೇಗೆ ನಡೆಸುಕೊಳ್ಳಬೇಕೆಂದು ಕುಮಾರಸ್ವಾಮಿ ಹಾಗು ದೇವೇಗೌಡ್ರು ಅರಿಯಲಿ ಎಂದು ತಮ್ಮೆಲ್ಲ ಆಕ್ರೋಶವನ್ನು ವ್ಯಥಾ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್(100) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಮ್ಮ ತಾಯಿ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾಗಿ ಪ್ರಧಾನಿ ಮೋದಿ ಟ್ಟಿಟ್ ಮೂಲಕ ತಿಳಿಸಿದ್ದಾರೆ. ಹೀರಾ ಬೆನ್ ಕಳೆದೆರಡು ದಿನದಿಂದ ಅಹ್ಮದಾಬಾದ್ ನ ಯುನ್ ಮೆಹ್ತಾ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಎರಡು ದಿನಗಳ ಹಿಂದೆ ಅವರನ್ನು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯದಲ್ಲಿ…
ಜೆಡಿಎಸ್ ಪ್ರಭಾವ ಮತ್ತು ಅತಿಹೆಚ್ಚು ಒಕ್ಕಲಿಗ ಜಾತಿ ಬೆಂಬಲ ಈ ಭಾರಿ ಜೆಡಿಎಸ್? ಅಥವಾ ಕಳೆದ ಭಾರಿಯ ರೀತಿ ಈ ಭಾರಿಯೂ ಪಕ್ಷೇತರ ನ?
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(12 ಡಿಸೆಂಬರ್, 2018) ನಿಮ್ಮ ಬದ್ಧತೆಗಳು ಮತ್ತುಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸ್ನೇಹಿತರ ಸಮಸ್ಯೆಗಳು ನಿಮಗೆ ಕೆಟ್ಟದೆನಿಸುವಂತೆ ಮಾಡಬಹುದು. ಪ್ರಣಯ ಸಂಬಂಧದಲ್ಲಿ…
ಮಾನವ ರಕ್ತಕ್ಕೆ ಪರ್ಯಾಯವಾಗಿ ಬೇರೊಂದಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಮಾನವ ದೇಹದ ತೂಕದಲ್ಲಿ ಪ್ರತಿಶತ 7 ರಷ್ಟು ರಕ್ತದ ಭಾಗವಾಗಿರುತ್ತದೆ. ವಯಸ್ಕರೊಬ್ಬರ ದೇಹದಲ್ಲಿ 10 ರಿಂದ 12 ಯುನಿಟ್ ರಕ್ತ ಇರುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶವನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತದೆ.
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…