ಸುದ್ದಿ

ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ ಮಾದರಿಯಾದ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

82

ಚುನಾಯಿತರಾದ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಎಷ್ಟರ ಮಟ್ಟಿಗೆ ಭೇಟಿ ನೀಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ ಇಲ್ಲೊಬ್ಬರು ಶಾಸಕರಿದ್ದಾರೆ.. ತಮ್ಮ ಕ್ಷೇತ್ರದ ಜನರ ಜೊತೆ ಸಾಮಾನ್ಯ ಜನರಂತೆ ಬೆರೆತು ಕ್ಷೇತ್ರದ ಹಾಗು ಹೋಗುಗಳ ಬಗ್ಗೆ ಸ್ವತಃ ತಾವೇ ಖುದ್ದಾಗಿ ವಿಚಾರಿಸುತ್ತಿರುತ್ತಾರೆ..

ಹೌದು ಇವರು ಮತ್ಯಾರು ಅಲ್ಲ ಅಭಿವೃದ್ಧಿ ಹೊಂದಿದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..

ಈಗಾಗಲೇ ಪ್ರತಿಭೆಗಳಿಗಾಗಿ ತಮ್ಮ ಕ್ಷೇತ್ರದಲ್ಲಿ ಮಾಡಿಕೊಟ್ಟಿರುವ ಅನುಕೂಲಗಳು ಲೆಕ್ಕವಿಲ್ಲ.. ಶಾಸಕರ ಅನುದಾನ ದಲ್ಲಿ 7.75 ಕೋಟಿ ಹಣವನ್ನು ಶಿಕ್ಷಣದ ಉದ್ದೇಶಕ್ಕಾಗಿ ಖರ್ಚು ಮಾಡಿರುವುದು ಇವರ ಕೆಲಸಕ್ಕೊಂದು ಕೈಗನ್ನಡಿ ಎನ್ನಬಹುದು..

 

ಇದೀಗ ಸರ್ಕಾರಿ ಶಾಲೆಯ ಮಕ್ಕಳನ್ನು ಭೇಟಿ ಮಾಡಿ ಶಾಲೆಯ ಸೌಲಭ್ಯಗಳ ಕುರಿತು ಸಂವಾದ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ..‌ ಯಾವ ಅಧಿಕಾರಿಗಳಿಗೂ ಕೆಲಸ ವಹಿಸದೆ.. ಸ್ವತಃ ತಾವೇ ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳ ವಿಧ್ಯಾಭ್ಯಾಸದ ಕುರಿತು ವಿಚಾರಿಸಿ.. ಸೌಲಭ್ಯಗಳ ಬಗ್ಗೆ ಮಕ್ಕಳ ಬಳಿಯೇ ಸಂವಾದ ನಡೆಸಿದ್ದಾರೆ..

ಡಾ. ಅಶ್ವತ್ಥ್ ನಾರಾಯಣ್ ರವರು ಮಾಡುತ್ತಿರುವ ಈ ಪ್ರಶಂಸನೀಯ ಕೆಲಸವನ್ನು ಬಯೋಕಾನ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಕಿರಣ್ ಮಜುಮ್ದಾರ್ ಶಾ ರವರು ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ..

 

ಈಗಾಗಲೇ ಅಂತರಾಷ್ಟ್ರೀಯ ಮಟ್ಟದ ಅನೇಕ ಸ್ಟೇಡಿಯಂಗಳು ಮಲ್ಲೇಶ್ವರಂ ನಲ್ಲಿ ತಲೆ ಎತ್ತಿ ನಿಂತಿದೆ.. ಆಗಿಂದಾಗ್ಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ಕೂಡ ಅಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ..

ಡಾ.ಅಶ್ವತ್ಥ್ ನಾರಾಯಣ್ ರವರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಯ ಮೇಲಿರುವ ಕಾಳಜಿಗೆ ನಮ್ಮ ಕಡೆಯಿಂದ ಧನ್ಯವಾದಗಳು..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ಕದ್ದು ನೋಡಲು ಬಂದವ ಜೈಲು ಸೇರಿದ ಆರೋಪಿ……!

    ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ…

  • India, nation, ಆಧ್ಯಾತ್ಮ

    ಅದ್ಭುತ ವಾಸ್ತುಶಿಲ್ಪದ ಅಕ್ಷರ್ಧಮ್ ಮಂದಿರ

    ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು  ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….

  • ಸುದ್ದಿ

    ಕೌನ್ ಬನೇಗಾ ಕರೋಡ್‍ಪತಿ ಹಾಟ್ ಸೀಟ್‌ನಲ್ಲಿ ನಮ್ಮ ಹೆಮ್ಮೆಯ ಕನ್ನಡತಿ.!ಯಾರು ಅಂತ ಗೊತ್ತಾದರೆ ಶಾಕ್ ಆಗ್ತೀರಾ…

    ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್‌ಪತಿ 11’ರ (ಕೆಬಿಸಿ) ಹಾಟ್ ಸೀಟ್‌ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್‌ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್‌ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ….

  • ತಂತ್ರಜ್ಞಾನ

    10ನೇ ತರಗತಿ ಬಾಲಕನ 5 ಕೋಟಿ ಒಪ್ಪಂದ !ಈ ಲೇಖನಿ ಓದಿ ಶಾಕ್ ಆಗ್ತೀರಾ…

    ವಯಸ್ಸಿಗೂ ಬುದ್ದಿವನ್ತಿಕೆಗೂ ಏನೂ ಸಂಭಂದವಿಲ್ಲ ಅಂತಾರೆ. ಇಂತಹವರನ್ನೂ ನೋಡಿಯೇ ಇಂತಹ ಮಾತು ಹೇಳಿದ್ದಾರೆ ಅನಿಸುತ್ತದೆ. ಏಕೆಂದರೆ, ನೀವು ಶಾಕ್ ಆಗ್ತೀರ, ಇನ್ನೂ ಹತ್ತನೇ ತರಗತಿ ಓದುತ್ತಿರುವ ಹರ್ಷವರ್ಧನ್ ಜಾಲಾ ಏರೋಬಾಟಿಕ್ಸ್ 7 ಟೆಕ್ ಸೊಲ್ಯೂಷನ್ಸ್ ಎಂಬ ಸಂಸ್ಥೆಯ ವ್ಯವಸ್ಥಾಪಕ, ಸಿಇಓ.

  • ಜೀವನಶೈಲಿ

    ಭಗವಾನ್ ಶ್ರೀ ಕೃಷ್ಣನ ಈ 8 ಉಪದೇಶಗಳನ್ನು ಅನುಸರಿಸಿದ್ರೆ, ಜೀವನ ತುಂಬಾ ಸರಳ..!

    ಮಹಾಭಾರತದ ಒಂದು ಯುದ್ದದ ಸನ್ನಿವೇಶದಲ್ಲಿ ಅರ್ಜುನನು, ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಾನ್ ಶ್ರೀ ಕೃಷ್ಣನು, ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸುತ್ತಾನೆ.

  • ಜ್ಯೋತಿಷ್ಯ

    ಶ್ರೀ ಸಾಯಿಬಾಬಾನನ್ನ ನೆನೆಯುತ್ತ ನಿಮ್ಮ ದಿನದ ರಾಶಿ ಭವಿಷ್ಯವನ್ನು ತಿಳಿಯಿರಿ

    ಮೇಷ ರಾಶಿ ಭವಿಷ್ಯ (Saturday, December 11, 2021) ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳು ಮಾಡಬಹುದು. ಆದರೆ ಒತ್ತಡವನ್ನು ನಿಭಾಯಿಸಲು ಆಸಕ್ತಿದಾಯಕವಾದದ್ದನ್ನೇನಾದರೂ ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿಕೊಳ್ಳಿ. ತಮ್ಮ ವ್ಯಾಪರಕ್ಕಾಗಿ ಮನೆಯಿಂದ ಹೊರಗೆ ಹೋಗಿರುವ ವ್ಯಾಪಾರಿಗಳು, ತನ್ನ ಹಣವನ್ನು ಜಾಗರೂಕವಾಗಿಡಿ, ಹಣದ ಕಳ್ಳತನವಾಗುವ ಸಾಧ್ಯತೆ ಇದೆ. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ತನ್ನ ಪ್ರೀತಿಪಾತ್ರರಿಂದ ದೂರವಿರುವ…