ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವರ್ಷಗಳ ಹಿಂದಷ್ಟೇ ಒಂದು ಸಿನಿಮಾ ಬಂದಿತ್ತು. ಅದರಲ್ಲಿ ನಮ್ಮ ಕನ್ನಡದ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದರು.ಆ ಸಿನಿಮಾದ ಸ್ಟೋರಿ ಹೀಗಿತ್ತು…

ಯುವಕ ಎಷ್ಟು ಹಿಂದೆ ಬಿದ್ದರೂ ಯುವತಿಗೆ ಇಷ್ಟವಿದ್ದರೂ ಲವ್‌ಗೆ ಓಕೆ ಹೇಳದಿರುವುದು…ಅಷ್ಟರಲ್ಲಿ ವಿಲನ್ ಎಂಟರ್ ಆಗಿ ಯುವಕನನ್ನು ಸಾಯಿಸುತ್ತಾನೆ…

ನಂತರ ಆ ಯುವಕ ನೊಣವಾಗಿ ಬದಲಾಗುವುದು…ವಿಲನ್‌ನಿಂದ ಯುವತಿಯನ್ನು ಕಾಪಾಡುವುದು…ಸಿನಿಮಾದ ಕತೆ.

ಅದರಲ್ಲಿ ಸತ್ತು ಹೋದ ಹೀರೋ ನೊಣವಾಗಿ ಮರುಜನ್ಮ ಪಡೆಯುತ್ತಾನೆ. ಆದರೆ ನಿಜಜೀವನದಲ್ಲಿ ಯಾವುದೇ ಕಾರಣಕ್ಕೂ ಆ ರೀತಿ ನಡೆಯಲ್ಲ. ಕೇವಲ ಕನಸಿನಲ್ಲಿ ಮಾತ್ರ ಈ ರೀತಿಯ ಘಟನೆಗಳು ಸಂಭವಿಸುತ್ತಿರುತ್ತವೆ.
ಆದರೆ ಥೈಲ್ಯಾಂಡ್ ಮೂಲದ ಈ ಯುವಕನ ವಿಷಯದಲ್ಲಿ ಇದೇ ನಡೆದಿದೆಯಾ..? ಎಂದರೆ… ಅದಕ್ಕೆ ಉತ್ತರ ಹೌದು ಎಂದೇ ಅನ್ನಿಸುತ್ತದೆ..! ಬೇಕಿದ್ದರೆ ಆತನ ಕಥೆಯನ್ನು ನೀವೂ ಓದಿ..!

ಥೈಲ್ಯಾಂಡ್‌ನಲ್ಲಿನ ಕಾಂಚನಾಬೌರಿ ಎಂಬ ಪ್ರದೇಶದ ವಾರ್ರಾನನ್ ಸರಸಲಿನ್ ಎಂಬ ಯುವಕ ಒಬ್ಬ ಯುವತಿಯನ್ನು ಗಾಢವಾಗಿ ಪ್ರೀತಿಸಿದ. ಆದರೆ….ಆಕೆ ಐದು ವರ್ಷಗಳ ಹಿಂದೆ ಮೃತಪಟ್ಟಳು.

ಇದರಿಂದ ವಾರ್ರಾನನ್ ಬಹಳಷ್ಟು ಭಯಪಟ್ಟ. ಪ್ರೇಯಸಿ ವಿಷಯದಲ್ಲಿ ಬಹಳಷ್ಟು ಕೃಷವಾದ. ಆದರೆ ಆ ರೀತಿ ಆತ ಕಾಲ ತಳ್ಳುತ್ತಿರಬೇಕಾದರೆ ಒಂದು ದಿನ ಸಡನ್ ಆಗಿ 10 ಅಡಿ ಉದ್ದದ ನಾಗರಹಾವು ಆತನ ಬಳಿಗೆ ಬಂತು. ಅದನ್ನೂ ನೋಡುತ್ತಿದ್ದಂತೆ ಎಲ್ಲರ ತರಹ ಆತನಿಗೂ ಶಾಕ್ ಆಯಿತು…ಆ ಬಳಿಕ ಆ ಹಾವು ಆತನ ಜತೆಗೆ ಸ್ನೇಹದಿಂದ ಇರುವುದನ್ನು ನೋಡಿ ಆತನಿಗೆ ಅಚ್ಚರಿಯಾಯಿತು. ಹಾಗಾಗಿ ಸತ್ತು ಹೋದ ತನ್ನ ಪ್ರೇಯಸಿ ಮತ್ತೆ ಹಾವಿನ ರೂಪದಲ್ಲಿ ಮರಳಿ ಬಂದಿದ್ದಾಳೆ ಎಂದು ಭಾವಿಸಿದ. ಆ ಹಾವಿನೊಂದಿಗೆ ಬದುಕಲು ಆರಂಭಿಸಿದ.

ನಿತ್ಯ ತಾನು ಎಲ್ಲಿಗೆ ಹೋದರೂ ಹಾವನ್ನು ಸಹ ಅಲ್ಲಿಗೆ ಕರೆದೊಯ್ಯುತ್ತಾರೆ. ಮನೆಯಲ್ಲಿ ಯಾವುದೇ ಕೆಲಸ ಮಾಡುತ್ತಿದ್ದರೂ ಹಾವು ಆತನ ಜತೆಗೆ ಇರುತ್ತದೆ. ಆತನನ್ನು ಏನೂ ಮಾಡಲ್ಲ. ಟಿವಿ ನೋಡುತ್ತದೆ. ಆಟ ಆಡುತ್ತಿದ್ದರೆ ಗಮನಿಸುತ್ತದೆ. ಜಿಮ್‍ಗೆ ಹೋದರೆ ಜತೆಯಾಗಿ ಹೋಗುತ್ತದೆ.

ಈ ಹಿನ್ನೆಲೆಯಲ್ಲಿ ಆತನ ಜತೆಗೆ ಇರುವ ಹಾವನ್ನು ನೋಡಿ ಎಲ್ಲರೂ ಭಯಬೀಳಲು ಆರಂಭಿಸಿದರು. ಆದರೆ ಆತನಿಗೆ ಮಾತ್ರ ಯಾವುದೇ ಭಯ ಇಲ್ಲ. ತನ್ನ ಪ್ರೇಯಸಿ ಜತೆಗೆ ಕಳೆದಂತೆ ಕಳೆಯುತ್ತಿದ್ದಾನೆ. ತನ್ನ ಜತೆಗೆ ಆ ಹಾವನ್ನೂ ಮಲಗಿಸಿಕೊಳ್ಳುತ್ತಾನೆ. ಅದೇನೇ ಇರಲಿ ಹಾವು ಎಂದರೆ ವಿಷಕಾರಿ ಎಂದು, ಅದರಿಂದ ಯಾವಾಗ ಬೇಕಾದರೂ ಅಪಾಯ ತಪ್ಪಿದ್ದಲ್ಲ ಎಂದು ಅಕ್ಕಪಕ್ಕದವರು ವಾರ್ರಾನನ್‌ಗೆ ಹೇಳುತ್ತಿದ್ದಾರೆ.
ಆದರೂ ಆ ಮಾತುಗಳನ್ನು ಆತ ಪರಿಗಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಜೀವನ ಭವಿಷ್ಯತ್ತಿನಲ್ಲಿ ಹೇಗಿರುತ್ತದೋ ಕಾದು ನೋಡಿದರೆ ಗೊತ್ತಾಗುತ್ತದೆ. ಈಗ ಹೇಳಿ “ಈಗ” ಸೀನ್ ರಿಪೀಟ್ ಆದಂತೆ ಅಲ್ಲವೇ..?
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…
ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯ ಹಿನ್ನಲೆಯಲ್ಲಿ ಬಾಹುಬಲಿ 2 ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗವ ಬಗ್ಗೆಯೇ ಹಲವು ಪ್ರಶ್ನೆಗಳು ಎದ್ದಿದ್ದವು. ಕಡೆಗೂ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ತಮ್ಮ ಹೇಳಿಕೆಯ ಕುರಿತು ಕ್ಷಮೆಯಾಚಿಸಿದ ಬಳಿಕ ಚಿತ್ರ ಬಿಡುಗೆಡೆಯಾಗಿ ಚಿತ್ರಮಂದಿಗಳು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಕೊಂಡಿದ್ದವು.
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದಲ್ಲ ಒಂದು ದಿನ ಇದು ಕಾಡುತ್ತದೆ. ಕಿವಿನೋವು ಬರಲು ಹಲವು ಕಾರಣಗಳಿದ್ದು, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಕಿವಿ ನೋವಿಗೆ…
ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.
ಭಾರತ ಸ್ವತಂತ್ರ ಪಡೆದ ನಂತರ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎಂಎನ್ಎಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು…
ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ