ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿರುವ ಯಾವುದೇ ವ್ಯಕ್ತಿಗೆ ಹಣವಂತನಾಗುವ ಸಮಾನ ಅವಕಾಶವಿದೆ. ಇದಕ್ಕೆ ಸತತ ಪರಿಶ್ರಮ ಹಾಗೂ ಹಣಗಳಿಕೆಯ ಹಂತವನ್ನು ಮೆಟ್ಟಿಲು ಮೆಟ್ಟಿ ಲಾಗಿ ಏರಲು ಉತ್ತಮ ಉದ್ಯೋಗದ ನೆರವು ಬೇಕು. ಇದು ಸ್ವ ಉದ್ಯೊಗವೂ ಆಗಬಹುದು ಅಥವಾ ಅತಿಹೆಚ್ಚು ಗಳಿಕೆ ನೀಡುವ ಇತರ ಉದ್ಯೋಗವೂ ಆಗಬಹುದು.

ಅಂದ ಮಾತ್ರಕ್ಕೆ ಉದ್ಯೋಗ ಮಾಡುವ ಎಲ್ಲರೂ ಭಾರೀ ಹಣ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಈ ಉದ್ಯೋಗವನ್ನು ಮಾಡುವವರಿಗೆ ಅತಿಹೆಚ್ಚು ವೇತನ ನೀಡಬೇಕಾದರೆ ಬೇರಯವ ರಲ್ಲಿ ಇರದ ಬಹಳಷ್ಟು ಗುಣಗಳು, ಕೌಶಲ್ಯ ಹಾಗೂ ಅಪಾರವಾದ ಮಾಹಿತಿ ಇವರಲ್ಲಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಪಡೆದಿರುವುದು ಉತ್ತಮ ವಿಶ್ವವಿದ್ಯಾಲಯದಲ್ಲಿ ಎಂದು ಪ್ರಮಾಣಿ ಸಲೂಬೇಕಾಗುತ್ತದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿಯಾಗ ಬಹುದು. (ವೇತನವನ್ನು ವಾರ್ಷಿಕ ರೂ. ಗಳಲ್ಲಿ ನೀಡಲಾಗಿದೆ

ವೃತ್ತಿಪರ ಕಾರ್ಯನಿರ್ವಾಹಕರು :- ವೃತ್ತಿಪರ ಕಾರ್ಯನಿರ್ವಾಹಕರನ್ನು ಸಂಸ್ಥೆ/ ಕಂಪನಿಗಳ ಆತ್ಮ ಎಂದು ಕರೆಯಬಹುದು. ಸಂಸ್ಥೆ ನಿರ್ವಹಿಸಬೇಕಾದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವುದು ಇವರ ಕಾಯಕ. ಇದಕ್ಕೆ ಪ್ರಾರಂಭಿಕ ಹಂತದಿಂದಲೇ ಕಠಿಣ ಪರಿಶ್ರಮ ಅಗತ್ಯ. ಒಂದು ಬಾರಿ ಪ್ರಾರಂಭಿಕ ಹಂತ ದಾಟಿದ ಬಳಿಕ ಮತ್ತೆ ಹಿಂದಿರುಗಿ ನೋಡುವ ಅವಶ್ಯಕತೆಯೇ ಇಲ್ಲ. ಈ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಪರಿಣಿತಿ ಪಡೆದಂತೆ ಹೆಚ್ಚು ಹೆಚ್ಚು ವೇತನವನ್ನು ನಿರೀಕ್ಷಿಸಬಹುದು. ಪ್ರಾರಂಭಿಕ ಹಂತ – ರೂ. 3,೦೦,೦೦೦, ಮಧ್ಯಮ ಹಂತ – ರೂ. 25,೦೦,೦೦೦, ಅನುಭವಿ ಹಂತ- ರೂ. 8೦,೦೦,೦೦೦

ಬ್ಯಾಂಕ್ ಹೂಡಿಕೆದಾರ:
ಈ ವೃತ್ತಿಯಲ್ಲಿರುವವರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಹಣ ಪಡೆಯುವಿಕೆ ಹಾಗೂ ಹೂಡಿಕೆಯ ಬಗ್ಗೆ ಸಲಹೆ ನೀಡುತ್ತಾರೆ. ಇವರು ಸತತವಾಗಿ ಮಾರುಕಟ್ಟೆಯ ಏರಿಳಿತ ಗಳನ್ನು ಅಭ್ಯಸಿಸುತ್ತಾ ಗ್ರಾಹಕರ ಮನೋಭಾವವನ್ನೂ ಪರಿಗಣಿಸಿ ಸಂಸ್ಥೆಗೆ ಲಾಭ ತರುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಇವರಿಗೆ “Money Man” ಎಂಬ ಅನ್ವರ್ಥ ನಾಮವನ್ನೂ ನೀಡಲಾಗಿದೆ. ಪ್ರಾರಂಭಿಕ ಹಂತ- ರೂ. 12,೦೦,೦೦೦, ಮಧ್ಯಮ ಹಂತ – ರೂ. 3೦,೦೦,೦೦೦, ಅನುಭವಿ ಹಂತ- ರೂ.5೦,೦೦,೦೦೦+

ಚಾರ್ಟರ್ಡ್ ಅಕೌಂಟೆಂಟ್:
ಇವರು ಒಂದುಸಂಸ್ಥೆಯ ಲೆಕ್ಕಪತ್ರ ಹಾಗೂ ವ್ಯಾಪಾರದ ಮೇಲೆ ಹಿಡಿತವನ್ನಿರಿಸಿ ಕೊಂಡಿರುತ್ತಾರೆ. ಇವರು ತಮ್ಮ ಕೆಲಸದ ಬಗ್ಗೆ ಜಾಗರೂಕರಾಗಿದ್ದು, ಸಂಸ್ಥೆಯ ಹಣದ ವಿಲೇವಾರಿ ಹಾಗೂ ಆದಾಯದ ಬಗ್ಗೆ ವಿವರಗಳನ್ನು ನೀಡುವಂತಿರಬೇಕು ಹಾಗೂ ಸದಾ ಉತ್ತಮವಾಗಿ ಕಾಣಿಸಿಕೊಳ್ಳುವಂತಿರಬೇಕು. ಈ ವೃತ್ತಿ ಭಾರತದಲ್ಲಿ ಅತಿ ಗೌರವಾತ ಹಾಗೂ ಹೆಚ್ಚಿನ ಆದಾಯ ತರುವಂತದ್ದಾಗಿದೆ. ಪ್ರಾರಂಭಿಕ ಹಂತ – ರೂ. 5,5೦,೦೦೦, ಮಧ್ಯಮ ಹಂತ – ರೂ. 12,8೦,೦೦೦, ಅನುಭವಿ ಹಂತ – ರೂ. 25,7೦,೦೦೦
ತೈಲ ಮತ್ತು ನೈಸರ್ಗಿಕ ಅನಿಲ ವಿಭಾಗದ ವೃತ್ತಿಪರರು:
ಈ ವಿಭಾಗ ಇದುವರೆಗೆ ಎಂದೂ ಬತ್ತದ ಲಾಭದ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ವಿಭಾಗದಲ್ಲಿರುವ ಕೆಲವು ವೃತ್ತಿಗಳು ಹೆಚ್ಚಿನ ವೇತನ ನೀಡುತ್ತವೆ. ಉದಾಹರಣೆಗೆ ಭೂ ಗರ್ಭ ಶಾಸ್ತ್ರಜ್ಞ, ಸಾಗರ ಅಭಿಯಂತರ ಇತ್ಯಾದಿ. ಅನುಭವಿ ಹಂತ – ರೂ. 15-2೦ ಲಕ್ಷ ನಿವ್ವಳ ಹಾಗೂ ಸಂಸ್ಥೆಯಿಂದ ಸಿಗುವ ಎಲ್ಲಾ ಸವಲತ್ತುಗಳು

ವಾಣಿಜ್ಯ ವಿಶ್ಲೇಷಕರು (ಬಿಸಿನೆಸ್ ಅನಾಲಿಸ್ಟ್):
ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರು ವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆಅತಿ ಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ. ಈ ವೃತ್ತಿಯಲ್ಲಿರುವವರು ವಾಣಿಜ್ಯದ ಅಂಕಿ ಅಂಶಗಳನ್ನು ಗಣಿತದ ಸೂತ್ರಗಳ ಮೂಲಕ ವಿವರಿಸಬಲ್ಲವರಾಗಿರಬೇಕು ಹಾಗೂ ನಿತ್ಯವೂ ಬದಲಾಗುವ ತಂತ್ರಜ್ಞಾನವನ್ನು ತಮ್ಮ ವಾಣಿಜ್ಯ ವಹಿವಾಟಿನ ಏಳಿಗೆಗೆ ಹೇಗೆ ಬಳಸಿಕೊಳ್ಳ ಬಹುದು ಎಂಬುದನ್ನು ಎಲ್ಲರಿ ಗಿಂತ ಮೊದಲು ಅರಿತು ಅಳವಡಿಸಿ ಕೊಳ್ಳುವುದು ಇವರ ವೃತ್ತಿಯ ಪ್ರಮುಖಸವಾಲಾಗಿದೆ. ಅಂದಾಜು ವೇತನ: ಪ್ರಾರಂಭಿಕ ಹಂತ: ರೂ. 6,೦೦,೦೦೦

ವೈದ್ಯಕೀಯ ವೃತ್ತಿಪರರು:
ಈ ವೃತ್ತಿಯಲ್ಲಿ ಹಿಂಜರಿತ ಎಂಬುದೇ ಎಲ್ಲ. ಎಲ್ಲಿಯವರೆಗೆ ಮನುಷ್ಯರು ಇರುತ್ತಾರೋ ಅಲ್ಲಿಯವರೆಗೆ ಈ ವೃತ್ತಿಯಲ್ಲಿ ಗಳಿಕೆ ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಗೌರವಾನ್ವಿತ ಹಾಗೂ ಆದ್ಯತೆಯ ವೃತ್ತಿಯಾದ ವೈದ್ಯ ವೃತ್ತಿಯಲ್ಲಿ ಜನರು ವೈದ್ಯೋ ನಾರಾಯಣಃ ಹರಿ ಎಂದೇ ಪರಿಗಣಿಸುತ್ತಾರೆ. ಈ ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿ ವೇತನ ಕಡಿಮೆ ಇದ್ದರೂ ದಿನಗಳೆದಂತೆ ವೇತನವೂ ಏರುತ್ತಾ ಹೋಗುತ್ತದೆ. ಸಾಮಾನ್ಯ ನೈಪುಣ್ಯತೆ – ರೂ. 4,8೦,೦೦೦, ಸಾಮಾನ್ಯ ಶಸ್ತ್ರ ಚಿಕಿತ್ಸಕ- ರೂ. 8,1೦,೦೦೦, ವೃತ್ತಿಪರ ವೈದ್ಯ- ರೂ.17,೦೦,೦೦೦

ವೈಮಾನಿಕ ವೃತ್ತಿ :
ಈ ವೃತ್ತಿಯಲ್ಲಿರುವವರಿಗೆ ಆದಾಯದ ಮಿತಿ ಆಗಸವೇ ಸರಿ. ಈ ವೃತ್ತಿಯಲ್ಲಿ ನೈಪುಣ್ಯತೆ ಪಡೆದವರು ವಾರ್ಷಿಕ ಇಪ್ಪತ್ತು ಲಕ್ಷದಷ್ಟು ವೇತನ ಪಡೆಯುತ್ತಾರೆ. ಸರಾಸರಿ ವೇತನ: ಕಮರ್ಷಿಯಲ್ ಪೈಲಟ್: ರೂ. 2೦,೦೦,೦೦೦, ಹೆಲಿಕಾಪ್ಟರ್ ಪೈಲಟ್- ರೂ. 18,೦೦,೦೦೦, ವಿಮಾನ ದುರಸ್ತಿ ಸಿಬ್ಬಂದಿ- ರೂ. 9,8೦,೦೦೦
ಕಾನೂನು ವೃತ್ತಿಪರರು :
ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರಾಗುವ ಅವಕಾಶ ತಾನೇ ತಾನಾಗಿ ಒದಗಿ ಬಂದಾಗ ಇದನ್ನು ಹಲವರು ನಿರಾಕರಿಸಿದ್ದಾರೆ. ಏಕೆಂದರೆ ವೃತ್ತಿಪರ ವಕೀಲರಾಗಿ ಗಳಿಸುದಷ್ಟು ವೇತನ ಉಚ್ಛನ್ಯಾಯಾಧೀಶರಿಗೆ ದೊರಕುವುದಿಲ್ಲ. ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಈ ವೃತ್ತಿಯಲ್ಲಿ ಪಳಗುತ್ತಾ ಹೋದಂತೆ ಪ್ರತಿವಾದಕ್ಕೂ ಹೆಚ್ಚು ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು. ಸರಾಸರಿ ವೇತನ: ಕಾರ್ಪೋರೇಟ್ (ಸಂಸ್ಥೆಗೆ ಮೀಸಲಾದ) ವಕೀಲರು- 6,1೦,೦೦೦, ಹಿರಿಯ ಅಟಾರ್ನಿ – 9,5೦,೦೦೦,

ಮಾರ್ಕೆಟಿಂಗ್ (ಮಾರುಕಟ್ಟೆ ಪ್ರವೀಣ):
ಯಾವುದೇ ವಹಿವಾಟಿನಲ್ಲಿ ಉತ್ಪನ್ನ ಅಥವಾ ಸೇವೆ ಮಾರಾಟ ವಾಗಿ ಹೋದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಈ ವೃತ್ತಿಯಲ್ಲಿರುವವರು ಗ್ರಾಹಕರ ಅಂತಃಕರಣವನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯ ಅಂತರಾಳವನ್ನು ಅರಿತು ಗ್ರಾಹಕರು ಈ ಉತ್ಪನ್ನಗಳಿಗೆ ಒಲವು ನೀಡುವಂತೆ ಉತ್ಪನ್ನ ಅಥವಾ ಸೇವೆಗಳನ್ನು ಬದಲಾವಣೆಗೊಳಪಡಿಸುವುದು ಸಹಾ ಇವರಿಗೆ ಕಾರ್ಯಗತ ವಾಗಿರಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 1,5೦,೦೦೦, ಮಧ್ಯಮ ಹಂತ- ರೂ. 5,೦೦,೦೦೦, ಅನುಭವಿ ಹಂತರೂ. 1೦,೦೦,೦೦೦+

ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು:
ಇದೊಂದು ನಿತ್ಯಹರಿದ್ವರ್ಣದ ಉದ್ಯೋಗವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೇ ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 3,5೦,೦೦೦, ಮಧ್ಯಮ ಹಂತ- ರೂ. 8,3೦,೦೦೦, ಅನುಭವಿ ಹಂತ ರೂ. 15,5೦,೦೦೦
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(6 ಡಿಸೆಂಬರ್, 2018) ಸ್ನೇಹಿತರು, ವ್ಯಾಪಾರ ಪಾಲುದಾರರು ಹಾಗೂ ಸಂಬಂಧಿಗಳ ಜೊತೆ ವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಿ – ಅವರು ನಿಮ್ಮ…
ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಆಗಿದ್ದೇನು?: ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ…
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು, ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಜನ ಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರಿಗೆ ಮನಸ್ಥೈರ್ಯ ಮೂಡಿಸುವುದು, ಪ್ರೇರೆಪಿಸುವುದು ಅಗತ್ಯವಾಗಿ ಆಗಬೇಕಿದೆ. ಮನುಷ್ಯನ ಜೀವಕ್ಕಿರುವಷ್ಟೇ ಮಹತ್ವ ರಕ್ತದಾನಕ್ಕೂ ಇದೆ.
ಭಾರತದಲ್ಲಿ ಅನೇಕ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳ ರಹಸ್ಯಗಳನ್ನು ಇಲ್ಲಿಯವರೆಗೆ ಯಾರೂ ಬಹಿರಂಗಪಡಿಸಿಲ್ಲ. ಇಂದು ನಾವು ನಿಮಗೆ ಕೇರಳದ ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಈ ದೇವಾಲಯವನ್ನು ನೀವು ನೋಡಿರದಿದ್ದರೂ, ಅದರ ಹೆಸರನ್ನು ಖಂಡಿತ ಕೇಳಿರುತ್ತೀರಿ. ಏಕೆಂದರೆ ಈ ದೇವಾಲಯವು ಕೆಲವು ನಿಗೂಢತೆಗಳಿಗೆ ಮತ್ತು ಅದರ ಸಂಪತ್ತಿಗೆ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಆದ್ದರಿಂದ ಇದನ್ನು ಭಾರತದ ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯದಲ್ಲಿ ಅನೇಕ ರಹಸ್ಯ ನೆಲಮಾಳಿಗೆಗಳಿವೆ. ಅವುಗಳಲ್ಲಿ ಕೆಲವು ತೆರೆದಿವೆ. ಆ ಮಳಿಗೆಗಳಿಂದ ಕೋಟ್ಯಂತರ…