ಜ್ಯೋತಿಷ್ಯ

ಶುಭ ಶುಕ್ರವಾರದ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

292

ಇಂದು ಶುಕ್ರವಾರ, 02/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ವ್ಯವಹಾರಸ್ಥರಿಗೆ ವ್ಯವಹಾರ ಉತ್ತಮವಾಗಿರುವುದು. ಉತ್ತಮ ಕೆಲಸಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ.ಆರೋಗ್ಯದಲ್ಲಿ ಸುಧಾರಣೆ. ಅನಿರೀಕ್ಷಿತ ಅತಿಥಿಗಳ ಆಗಮನ. ಮಕ್ಕಳ ವಿಷಯದಲ್ಲಿತುಸು ಜಾಗ್ರತೆ ಇರಲಿ. ಆರ್ಥಿಕವಾಗಿ ಉನ್ನತಿ ಇರುತ್ತದೆ.

ವೃಷಭ:-

ನೌಕರಸ್ಥರಿಗೆ ಶುಭ ದಿನ.ಸಹೋದರನ ಆಗಮನದಿಂದಾಗಿ ಮನೆಯಲ್ಲಿ ಸಂಭ್ರಮ. ವಿವಿಧ ಮೂಲಗಳಿಂದ ಧನಾಗಮನ. ಆರೋಗ್ಯ ಸುಧಾರಿಸುವುದು.

ಮಿಥುನ:

ಕಾರ್ಯವಿಘ್ನದಿಂದ ಕಿರಿಕಿರಿ. ಧನಾತ್ಮಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ.ಜಗಳದ ದಿನಗಳ ನಂತರ, ನೀವು ಮತ್ತು ನಿಮ್ಮ ಸಂಗಾತಿ ಮತ್ತೆ ಪರಸ್ಪರರ ಪ್ರೇಮದಲ್ಲಿ ಬೀಳುತ್ತೀರಿ.ಮಕ್ಕಳ ವಿಚಾರದಲ್ಲಿ ನೆಮ್ಮದಿ.

ಕಟಕ :-

ಸ್ತ್ರೀಯರಿಗೆ ರೋಗಬಾಧೆ, ಗುತ್ತಿಗೆ ಕೆಲಸದಿಂದ ಬಾಕಿ ಹಣ ಪಡೆದುಕೊಳ್ಳುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿಹಣದ ಕೊರತೆಯು ಕಂಡು ಬರುವುದು.ಸಂತಾನ ಸಂಬಂಧ ದುಃಖವಾದೀತು. ಹಣಕಾಸಿನ ದೃಢತೆಯಿಂದಾಗಿ ಮಾನಸಿಕ ನೆಮ್ಮದಿ.

 ಸಿಂಹ:

ಹಣಕಾಸಿನ ವಿಷಯದಲ್ಲಿಕೊರತೆಯಿಲ್ಲ. ಕಷ್ಟನಷ್ಟಗಳು ಕಡಿಮೆಯಾದರೂ ಅನಾವಶ್ಯಕವಾಗಿ ಉದ್ವೇಗ ಸ್ಥಿತಿ ಇರುತ್ತವೆ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ.ಹೊಸ ಉದ್ಯೋಗಾವಕಾಶದಿಂದಾಗಿ ಜೀವನಶೈಲಿಯಲ್ಲಿ ಬದಲಾವಣೆ.

ಕನ್ಯಾ :-

ಪೂರ್ವ ಸಿದ್ಧತೆ ಇಲ್ಲದೆ ಯಾವುದೇ ಕೆಲಸಗಳಿಗೆ ಕೈಹಾಕಬೇಡಿ. ಹಂತಹಂತ ಮುಂದುವರಿದಂತೆ ಅಭಿವೃದ್ಧಿ. ರೋಗ ವೃದ್ಧಿ, ಚರ್ಮ ವ್ಯಾಧಿ, ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ.

ತುಲಾ:

ಹಿರಿಯರ ಸಲಹೆಗಳಿಗನುಸಾರವಾಗಿ ನಡೆಯುವುದರಿಂದ ಯಶಸ್ಸು. ಸ್ವಲ್ಪ ರೋಗ ಬಾಧೆ.ಮನೆಯಲ್ಲಿ ಸುಖ ನೆಮ್ಮದಿ ಹಂತ ಹಂತವಾಗಿ ಕಂಡು ಬರುತ್ತದೆ. ನಿಮ್ಮ ಖರ್ಚುಗಳು ನಿಮ್ಮ ಬಜೆಟ್ ಅನ್ನು ಮೀರಬಹುದು

ವೃಶ್ಚಿಕ :-

ಪ್ರತಿಫಲವನ್ನು ಅಪೇಕ್ಷಿಸದೇ ನಿಮ್ಮ ಕೆಲಸ ನೀವೂ ಮಾಡಿ. ಗೆಳೆಯರ ನೆರವಿನಿಂದ ವೃತ್ತಿ ಜೀವನದಲ್ಲಿ ಏಳಿಗೆ. ದೇಹಾರೋಗ್ಯದಲ್ಲಿ ಜಾಗ್ರತೆ.ಸಾಂಸಾರಿಕ ನೆಮ್ಮದಿಯ ದಿನವಾಗಿದ್ದು, ಸಂಗಾತಿಯಿಂದ ಉತ್ತಮ ಸಹಕಾರ. ಹಲವಾರು ರೀತಿಯಲ್ಲಿ ಧನವ್ಯಯ

ಧನಸ್ಸು:

ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯಿಂದ ಯಶಸ್ಸು. ಸಾಕಷ್ಟು ನೋವು ಜೊತೆಗೆ ಉದ್ಯೋಗ ಲಾಭ.ಬಂಧುಗಳಿಂದ ವಿಶೇಷ ರೀತಿಯಲ್ಲಿ ಸಹಕಾರ.ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ. ದಾಂಪತ್ಯದಲ್ಲಿ ಸಾಮರಸ್ಯ. ಸಾಂಸಾರಿಕ ನೆಮ್ಮದಿ.

ಮಕರ :-

ಕೆಲಸದ ಸ್ಥಳದಲ್ಲಿಹೆಚ್ಚಿನ ಒತ್ತಡ. ಮನಸ್ಸಿಗೆ ನೋವು.  ಗೃಹ ವಾಹನಾದಿಗಳಲ್ಲಿ ನೆಮ್ಮದಿ.ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು. ವೃತ್ತಿರಂಗದಲ್ಲಿ ಆಗಾಗ ಆಸಮಾಧಾನ. ವ್ಯವಹಾರದ ಬೇರೆ ಮಾರ್ಗ ಕಂಡುಕೊಳ್ಳುವಿರಿ.ಗಂಡ,ಹೆಂತಿ ವೈಮನಸ್ಯ.

ಕುಂಭ:-

ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಬಂಧುಗಳು ಕೆಲಸಗಳ ನಿಮಿತ್ತ ಸಹಕಾರ ಬೆಂಬಲ. ವೈವಾಹಿಕ ಭಾಗ್ಯಕ್ಕೆ ಪ್ರಸ್ತಾವ. ವಾಹನ ಖರೀದಿಗೆ ಅನುಕೂಲ. ಲಾಭದಿಂದ ಸಂತಸ.

ಮೀನ:-

ಹಣಕಾಸು ಬರುವುದು. ಉದ್ಯೋಗ ವ್ಯವಹಾರಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ. ತಂದೆಯಿಂದ ಆಪಾದನೆ.ಆತುರದ ನಿರ್ಧಾರದಿಂದ ಸಮಸ್ಯ.ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ನೋಡಿ ಬಹುಮುಖ್ಯವಾದ ಮಾಹಿತಿ….!

    ನೀವು ಪಡಿತರಚೀಟಿ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಅನಗತ್ಯವಾಗಿ ಪೂರೈಕೆ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜೂನ್ 1ರಿಂದ ಎರಡು ತಿಂಗಳುಗಳ ಕಾಲ ಇ-ಕೆವೈಸಿ ವಿಧಾನದ ಮೂಲಕ ಆಧಾರ್ ದೃಢೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದರನ್ವಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಕುಟುಂಬ ಸದಸ್ಯರು ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ. ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅಂತಹವರ ಹೆಸರಿನಲ್ಲಿ ಮಾತ್ರ ಪಡಿತರ ವಿತರಿಸಲಾಗುತ್ತದೆ. ವೃದ್ಧರು, ಕುಷ್ಠರೋಗಿಗಳು, ವಿಶೇಷ ಚೇತನರು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಇ –…

  • ಸುದ್ದಿ

    ಟೀ ಕುಡಿಯಲು ಬಂದಾಗ ಹುಚ್ಚ ವೆಂಕಟ್ ಮೇಲೆ ಹಲ್ಲೆ. ಯುವಕರ ವಿರುದ್ಧಐಪಿಸಿ ಸೆಕ್ಷನ್ ಪ್ರಕರಣ.

    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಈಗ ಆರೋಪಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗಿದೆ. ಇದರ ಹಿನ್ನೆಲೆ ನಟ ನವರಸನಾಯಕ ಜಗ್ಗೇಶ್ ಪೊಲೀಸರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಂಡ್ಯದ ಗ್ರಾಮಾಂತರ ಪೊಲೀಸರು ಇದರ ವಿರುದ್ಧ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಟ್ವೀಟ್ ಮಾಡಿದ ನವರಸ ನಾಯಕ ಜಗ್ಗೇಶ್ ಅವರು, ವೆಂಕಟ್ ಮೇಲೆ ಕೈಮಾಡಿದವರ ಮೇಲೆ ದಾಖಲು ಮಾಡಿದ ಮಂಡ್ಯ ರವರಿಗೆ ಕಲಾಪ್ರೇಮಿಗಳು ಧನ್ಯವಾದ…

  • ಸುದ್ದಿ

    ವಿದ್ಯಾರ್ಥಿಗಳನ್ನೇ ಕಾರ್ಮಿಕರನ್ನಾಗಿ ಬಳಸಿದ ಶಾಲೆ..!

    ಚೆನ್ನಾಗಿಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ.ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ ಬೇಕಾ ದ ಶಿಕ್ಷಕರು, ಸಾವಿರಾರು ರುಪಾಯಿ ಶುಲ್ಕ ಪಡೆಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರನ್ನಾಗಿ ದುಡಿಸಿ ಕೊಂಡಿರುವ ಘಟನೆ ತಾಲೂಕಿನ ಚೇಳೂರು ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಸಾವಿರಾರು ರುಪಾಯಿ ಶುಲ್ಕ ಪಾವತಿಸಿ ಖಾಸಗಿ…

  • ರೆಸಿಪಿ

    ಈ ಸುಡುವ ಬೇಸಿಗೆಯಲ್ಲಿ ಉಷ್ಣತೆ ಕಡಿಮೆಮಾಡಲು, ಈ ಪಾನೀಯಗಳನ್ನು ಸೇವಿಸಿ.

    ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ…

  • ಸುದ್ದಿ

    ಜಾತಿ ವಿಚಾರ ಮಾತನಾಡಿದ ಜೆಡಿಎಸ್ ಶಿವರಾಮೇಗೌಡರಿಗೆ ಟಾಂಗ್ ಕೊಟ್ಟ MTB ನಾಗರಾಜ್..!

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೌದು, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ರಾಜಕಾರಣದ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಗೌಡ್ತಿಯಲ್ಲ, ನಾಯ್ಡು ಎಂದು ಮಾತಿನುದ್ದಕ್ಕೂ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು. ಇದೀಗ ಶಿವರಾಮೇಗೌಡ ಮಾಡ್ತಿರೋ ಜಾತಿ ರಾಜಕಾರಣಕ್ಕೆ ಸಚಿವ ಎಂಟಿಬಿ ನಾಗರಾಜ್‍ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್‍, ಯಾವುದೇ ಹೆಣ್ಣಿಗೂ ಮದುವೆಯಾಗಿ ಒಂದು…

  • ದೇವರು-ಧರ್ಮ

    ಹಾಸನಾಂಬೆಯ ಕಾಣಿಕೆ ಹುಂಡಿ ಎಣಿಕೆ ವೇಳೆ ಸಿಕ್ಕಿದ್ದೇನು ಗೊತ್ತಾ..?

    ಹಾಸನಾಂಬೆಯ ದೇವಾಲಯ ಬಾಗಿಲು ಬುಧವಾರ ಮುಚ್ಚಲಾಗಿದ್ದು, 13 ದಿನಗಳ ದರ್ಶನ ನಂತರ ನಿನ್ನೆ ಮಧ್ಯಾಹ್ನ 1.20 ಕ್ಕೆ  ದೇವಾಲಯದ ಬಾಗಿಲು ಮುಚ್ಚಲಾಗಿದೆ. ಇಂದು ಹುಂಡಿ ಎಣಿಕೆ ಕಾರ್ಯ ನಡೆಯಲಿದೆ. ಹಾಸನಾಂಬೆಗೆ ಭಕ್ತರಿಂದ ವಿಶಿಷ್ಟ ಮನವಿ ಪತ್ರಗಳು ಬಂದಿದ್ದು, ಹಲವು ಬೇಡಿಕೆಗಳನ್ನು ಭಕ್ತರು ಪತ್ರದಲ್ಲಿ ನಮೂದಿಸಿದ್ದಾರೆ, ಹಳೇ ನೋಟುಗಳು ಸಿಕ್ಕಿದೆ. ಅದರಲ್ಲೂ ಬ್ಯಾನ್ ಆಗಿರುವ ಹಳೆಯ ಸಾವಿರ ರೂಪಾಯಿ ಮುಖಬೆಲೆಯುಳ್ಳ ನೋಟುಗಳು ಜಾಸ್ತಿ ಪತ್ತೆಯಾಗಿದೆ. ಅಲ್ಲದೇ, ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಬರೆದು ವೆರೈಟಿ ವೆರೈಟಿ ಪತ್ರಗಳು, ಲವ್…