News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
inspirational, ಆಧ್ಯಾತ್ಮ, ದೇವರು, ದೇವರು-ಧರ್ಮ

ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ

200

ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ…‌‌‌ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ..

ರೈತನೊಬ್ಬ ಉರುಳಿಗೆ ತಲೆಕೊಟ್ಟಾಗ…….‌,
ಗೃಹಿಣಿಯೊಬ್ಬಳು ಬೆಂಕಿಗೆ ಆಹುತಿಯಾದಾಗ………,
ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………,
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ……….,
ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾದಾಗ…………‌‌,
ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ………………,
ವಂಚಕರು ವಿಧಾನಸೌಧ – ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ…………,

ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ……‌..,
ಭ್ರಷ್ಟ ರು ಅಧಿಕಾರ ನಡೆಸುವಾಗ……….,
ಕಾಮಿಗಳು ಕಾವಿ ತೊಟ್ಟಿರುವಾಗ……….,
ಅನ್ನ ತಿನ್ನುವವರು ದೇಶದ್ರೋಹಿಗಳಾದಾಗ…….‌…‌,
ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ………,
ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ…………,
ತಿನ್ನುವ ಆಹಾರಕ್ಕೆ ಕಲಬೆರಕೆ ಮಾಡುತ್ತಿರುವಾಗ……..,
ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ…………,
ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ……..,
ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ – ಜಾಗರಣೆ ಮಾಡುತ್ತಿರುವಾಗ…..‌,

ನೆನಪಾಗುವೆ ನೀನು ಶಿವ…….ಆದರೆ,………….
ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ…..
ಅಥವಾ,ನೀನು ಬರುವೆಯೆಂದು ಶತಶತಮಾನಗಳಿಂದ ಕಾಯುತ್ತಿರುವ ಮೂರ್ಖ ನಾನೋ……….

ಒಂದಂತು ನಿಜ…ನೀನು ಪ್ರತ್ಯಕ್ಷವಾಗುವವರೆಗೂ, ನಿನ್ನನ್ನು ನಂಬುವುದಿಲ್ಲ.
ನೀನು ಎಷ್ಟೇ ದೊಡ್ಡವನಾಗಿರು, ನೀನು ಎಷ್ಟೇ ಎತ್ತರದಲ್ಲಿರು, ನೀನು ಎಷ್ಟೇ ಶಕ್ತಿವಂತನಾಗಿರು,
ನೀನು ಎಷ್ಟೇ ಬುದ್ದಿವಂತನಾಗಿರು, ನನ್ನಂತ ಸಾಮಾನ್ಯನ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಿ ಸರಳವಾಗಿ ಸಹಜವಾಗಿ ಮಾರ್ಗದರ್ಶನ ಮಾಡುವವರೆಗೂ ,

ನೀನೊಂದು ಭ್ರಮೆ, ನೀನೊಂದು ಕಲ್ಪನೆ, ನೀನೊಂದು ಶಿಲೆ, ನೀನೊಂದು ಗೊಂಬೆ, ನೀನೊಂದು ಭಾವ,
ನೀನೊಂದು ತರ್ಕ, ನೀನೊಂದು ಸಂಕೇತ, ನೀನೆಂದಿಗೂ ವಾಸ್ತವವಾಗಲಾರೆ.
ಎಚ್ಚರಿಕೆ…

( ಇದು ಕೇವಲ ಶಿವನಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳ ಎಲ್ಲಾ ದೇವರೆಂಬ ಭಾವಗಳಿಗೂ ಅನ್ವಯ.)
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ