ದೇವರು-ಧರ್ಮ

ಶಿವರಾತ್ರಿಯಂದು ಶಿವ ಲಿಂಗವನ್ನು ಹೇಗೆ ಪೂಜಿಸಬೇಕು..?ಹೇಗೆ ಪೂಜಿಸಬಾರದು..?ತಿಳಿಯಲು ಈ ಲೇಖನ ಓದಿ…

1739

ನೀವು ಯಾವುದೇ ದೇವರ ಪೂಜೆಯನ್ನುಮಾಡಿ, ಆದ್ರೆ ಪೂಜೆಯನ್ನುಮಾಡಿ ಮಾಡುವಾಗ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ನಂಬಿಕೆ ಹಾಗೂ ಶ್ರದ್ಧೆ.ಇವೆರಡು ಅಂಶಗಳು ಮನಸ್ಸಿನಲ್ಲಿಲ್ಲದಿದ್ದರೆ ಮಾಡುವ ಪೂಜಾವಿಧಾನಗಳು ವ್ಯರ್ಥವೆನಿಸುತ್ತವೆ…

ಭಾಗವಾನ್ ಶಿವ ಲಿಂಗವನ್ನು ಪೂಜಿಸಲು ಹಲವು ಕ್ರಮಗಳಿವೆ…ಹೇಗೆಂದರೆ ಹಾಗೆ ಪೂಜಿಸುವಂತಿಲ್ಲ…ಹಾಗಾದ್ರೆ ಹೇಗೆ ಪೂಜಿಸಬೇಕು,ಹೇಗೆ ಪೂಜಿಸಬಾರದು ಮುಂದೆ ನೋಡಿ ತಿಳಿಯಿರಿ…

*ಲಿಂಗವನ್ನು ಬಿಲ್ವಪತ್ರೆಯಿಂದ ಪೂಜಿಸಿ..ತುಳಸಿಯಿಂದಲ್ಲ.

*ಶಿವಲಿಂಗಕ್ಕೆ ಹಾಲಿನ ಅಭಿಷೇಕವನ್ನು ಹಾಲಿನ ಪ್ಯಾಕೇಟ್ ನಿಂದಲೇ ಮಾಡಬೇಡಿ..ಹಾಲನ್ನು ಪಾತ್ರೆಯಲ್ಲಿ ಹಾಕಿಕೊಂಡು, ಅಭಿಷೇಕ ಮಾಡಿ.

*ತೆಂಗಿನಕಾಯಿಯನ್ನು ನೈವೇದ್ಯಕ್ಕೆ ಬಳಸಬಹುದು..ಆದರೆ ತೆಂಗಿನಕಾಯಿಯ ನೀರನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಬೇಡಿ.

*ಈಶ್ವರನಿಗೆ ಎಲ್ಲಾ ಹಣ್ಣುಗಳನ್ನು ಅರ್ಪಿಸಬಹುದು..ಆದರೂ ಶಿವನಿಗೆ ಇಷ್ಟವಾದದ್ದು ಮರಸೇಬು ಹಣ್ಣು.

*ಮೊದಲು ಶಿವಲಿಂಗಕ್ಕೆ ಪಂಚಾಮೃತದ ಅಭಿಷೇಕ ಮಾಡಬೇಕು.

*ಶಿವನಿಗೆ ಇಷ್ಟವಾದ ಹೂಗಳು – ಬಿಳಿಬಣ್ಣದ ಹೂವುಗಳು.

*ಶಿವನಿಗೆ ಕೇದಾರ ಮತ್ತು ಚಂಪಾ ಪುಷ್ಪಗಳನ್ನು ಅರ್ಪಿಸಬೇಡಿ.

*ಭಕ್ತರು ಶಿವಲಿಂಗಕ್ಕೆ ಗಂಧವನ್ನು ಹಚ್ಚಬಹುದು , ಕುಂಕುಮವನ್ನಲ್ಲ.

*ಶಿವಲಿಂಗಕ್ಕೆ ಅರ್ಪಿಸಿದ ಅಥವಾ ಹಾಕಿದ ನೈವೇದ್ಯಗಳನ್ನು ತಿನ್ನಬೇಡಿ..ಇವು ಆರೋಗ್ಯಕ್ಕೆ ಮಾರಕ.

*ಅಭಿಷೇಕವನ್ನು ಚಿನ್ನ , ಬೆಳ್ಳಿ ಅಥವಾ ಕಂಚಿನಿಂದ ತಯಾರಿಸಿದ ನಾಗಯೋನಿಯೆಂಬ ಪಾತ್ರದಿಂದಲೇ ಮಾಡಿ..

*ಯಾವಾಗಲೂ ಪೂಜೆಗಳಿಗೆ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸಬೇಡಿ.

*ಶಿವಲಿಂಗವನ್ನು ನಿಮ್ಮ ಮನೆಯಲ್ಲಿಟ್ಟಿದ್ದರೆ , ಪೂಜೆ ಮಾಡುವಾಗ ಅಭಿಷೇಕಕ್ಕೆಂದು ಜಲಧಾರೆ ಎಂಬ ಪಾತ್ರೆಯನ್ನು ಉಪಯೋಗಿಸಿ..ಜಲಧಾರೆಯ ಸಹಾಯವಿಲ್ಲದೇ ಪೂಜೆ ಮಾಡಿದರೆ , ಶಿವಲಿಂಗದಿಂದ ನಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ.

ಇಲ್ಲಿ ಓದಿ :-ಶಿವನ ಈ 5 ವಸ್ತುಗಳು ಕನಸಿನಲ್ಲಿ ಬಂದ್ರೆ ಏನಾಗುತ್ತೆ ಗೊತ್ತಾ..???

ಇನ್ನೂ ಹಲವಾರು ವಿಧಿ-ವಿಧಾನಗಳನ್ನು ಶಿವಪೂಜೆಯಲ್ಲಿ ನಿರ್ದೇಶಿಸಲಾಗಿದೆ.. ಅವುಗಳಲ್ಲಿ ಇವು ಮುಖ್ಯ ಅಂಶಗಳಷ್ಟೇ..!!

ಶಿವಲಿಂಗಕ್ಕೆ ಅರ್ಪಿಸಿದ ಅಥವಾ ಹಾಕಿದ ನೈವೇದ್ಯಗಳನ್ನು ತಿನ್ನಬೇಡಿ..ಇವು ಆರೋಗ್ಯಕ್ಕೆ ಮಾರಕವೆಂದು ಮೇಲೆ ತಿಳಿಸಲಾಗಿದೆ. ಈ ಅಂಶದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಯೆನಾದರೂ ಮೂಡಿದ್ದರೆ ಆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ…

ಶಿವನು ವೈರಾಗ್ಯದ ದೇವತೆಯಾಗಿದ್ದಾನೆ. ಸಾಮಾನ್ಯ ವ್ಯಕ್ತಿಯು ಶಿವನಿಗೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ಅವನಿಗೆ ವೈರಾಗ್ಯ ಬರುವ ಸಾಧ್ಯತೆಯಿರುತ್ತದೆ. ಸಾಮಾನ್ಯ ವ್ಯಕ್ತಿಗೆ ವೈರಾಗ್ಯ ಬೇಕಾಗಿರುವುದಿಲ್ಲ. ಆದುದರಿಂದ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ.ಶೇ. 50 ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಮಟ್ಟವು ಹೆಚ್ಚಿರುವುದರಿಂದ ವೈರಾಗ್ಯ ಲಹರಿಗಳ ಪರಿಣಾಮವು ಅವನ ಮೇಲಾಗುವುದಿಲ್ಲ.

ಅವನಲ್ಲಿ ಮಾಯೆಯಿಂದ ದೂರ ಹೋಗುವ ವಿಚಾರಗಳು ಆಗಲೇ ಪ್ರಾರಂಭವಾಗಿರುತ್ತವೆ. ಅದರಂತೆ ಶೇ. 50ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಯು ಸ್ಥೂಲ ಕರ್ಮಕಾಂಡದ ಆಚೆಗೆ ಹೋಗಿರುವುದರಿಂದ ಅವನಲ್ಲಿ ಮಾನಸ- ಉಪಾಸನೆಯು ಪ್ರಾರಂಭವಾಗಿರುತ್ತದೆ. ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ‘ಶಿವನಿಗೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬೇಕು’ ಎಂಬ ಕರ್ಮಕಾಂಡದ ವಿಚಾರಗಳು ಬರುವ ಸಾಧ್ಯತೆಗಳೇ ಕಡಿಮೆಯಿರುತ್ತವೆ.

ಕೃಪೆ : ಶ್ರೀ ಶಂಕರ ಲಿಂಗೇಶ್ವರ ದೇವಸ್ಥಾನ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • God

    ಧರ್ಮಸ್ಥಳ ಮಂಜುನಾಥನನ್ನು ನೆನೆಯುತ್ತಾ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Monday, November 22, 2021) ಮೇಷರಾಶಿಯಲ್ಲಿ ಹುಟ್ಟಿದವರಲ್ಲಿ ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ….

  • ಸ್ಪೂರ್ತಿ

    ಟೀ ಮಾಡಿಕೊಂಡೇ ಲಕ್ಷಾಂತರ ಹಣ ಮಾಡುತ್ತಿದ್ದಾನೆ ಈತ..!

    ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…

  • ಜ್ಯೋತಿಷ್ಯ

    ಯುವತಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿದ ವೀಡಿಯೋ ವೈರಲ್…..

    ಯುವತಿಯೊಬ್ಬಳು ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ವೀಡಿಯೋವೊಂದು ನಗರದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ಚಲಾಯಿಸಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲಿಂದ ಮೊಬೈಲ‌್ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.  ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಇದು…

  • ತಂತ್ರಜ್ಞಾನ

    ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.