ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏರೋ ಇಂಡಿಯಾ 2019ರ ಏರ್ ಶೋ ನೋಡಲು ರಾಜಧಾನಿ ಬೆಂಗಳೂರಿನ ಯಲಹಂಕಕ್ಕೆ ಆಗಮಿಸಿದ್ದರು, ಎಲ್ಲರೂ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ವೈಮಾನಿಕ ಪ್ರದರ್ಶನವನ್ನು ನೋಡುವಲ್ಲಿ ಮುಳುಗಿ ಹೋಗಿದ್ದರು, ಆದರೆ ನೋಡು ನೋಡುತ್ತಿದ್ದಂತೆಯೇ ಕಣ್ಣ ಮುಂದೆಯೇ ಕಷ್ಟ ಪಟ್ಟು ತೆಗೆದುಕೊಂಡಿದ್ದ ಕಾರುಗಳು ಭಸ್ಮವಾದವು.

ಏರ್ ಶೋ ನಡೆಯುತ್ತಿದ್ದ ಸಂದರ್ಭದಲ್ಲೇ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಗೇಟ್ ನಂಬರ್ 5 ರ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ 10 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಕಾರ್ ಪಾರ್ಕಿಂಗ್ ಗೇಟ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಕಾರ್ ಮಾಲಿಕರು ತಮ್ಮ ತಮ್ಮ ಕಾರ್ ಬಳಿ ಓಡಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರನ್ನು ಕಾರ್ ಬಳಿ ಬಿಟುತ್ತಿಲ್ಲವಾದ್ದರಿಂದ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದವೂ ಏರ್ಪಟ್ಟಿದೆ..

ಮೊದಲನೇ ಹಂತದ ವಿಮಾನ ಹಾರಾಟ ಮುಕ್ತಾಯಗೊಂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹುಲ್ಲಿಗೆ ಕೆಲ ಕಿಡಿಗೇಡಿಗಳು ಸಿಗರೇಟ್ ಹಾಕಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಲಹಂಕದ ಮೈದಾನದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದು, ಈಗಾಗಲೇ ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುನಿತಾ ಮಂಜುನಾಥ್ ರವರ ನೂತನ ಪ್ರಯತ್ನದ ಫಲವಾಗಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ತುಂಬಾ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು..
ಒಂದಿಲ್ಲೊಂದು ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಈಗ ತಮ್ಮ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡುವಂತೆ ನಮ್ಮ ರಾಜ್ಯದ ದಂಡನಾಯಕರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ. ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ. ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ…
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…
ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗೆಯೇ ಕೊಬ್ಬನ್ನು ಕರಗಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ, ಒಂದೊಂದು ಹಣ್ಣಿನಲ್ಲಿ ಒಂದೊಂದು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ನಮಗೆ ಸಿಗುತ್ತದೆ . ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅದರ ಲಾಭಗಳು ನಮಗೆ ಸಿಗುತ್ತದೆ. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುತ್ತದೆ. ಹಾಗೆಯೆ ಅದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು…
ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ ಶಾಕ್ ಆಗಿತ್ತು. ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ. ಚೈತ್ರಾ ಡ್ರೆಸ್ಸಿಂಗ್ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ…