ಶಬರಿಮಲೆ ಸನ್ನಿಧಾನಕ್ಕೆ ಮಹಿಳೆಯರು ಪ್ರವೇಶಿಸಿದ್ದು, ಇದರಿಂದ ಒಳ್ಳೆದಾಯ್ತಲ್ಲ, ಹಠ ತೊಟ್ಟವರಿಗೆ ಸಮಾಧಾನ ಆಯ್ತಲ್ಲವೇ ಎಂದು ಪರೋಕ್ಷವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕ್ಷೇತ್ರದ ಆಚಾರ, ಸಂಪ್ರದಾಯ ಪಾಲಿಸುವುದು ಮುಖ್ಯ. ಬ್ರಹ್ಮಚರ್ಯ, ಸಂಯಮ ಸಾಧಿಸಿ ವ್ರತಾಚರಣೆ ಮಾಡಿ ಕ್ಷೇತ್ರಕ್ಕೆ ತೆರಳುತ್ತಾರೆ. ಈಗೆಲ್ಲ ಬೆಳಗ್ಗೆ ಮಾಲೆ ಹಾಕಿ ಮಧ್ಯಾಹ್ನ ಸನ್ನಿಧಾನಕ್ಕೆ ಹೋಗುವ ಆಚಾರ ಇದೆ. ಹೀಗಾಗಿ ಇಂತಹ ಅಪಚಾರಗಳಾಗುತ್ತಿದೆಎಂದು ಡಾ. ವೀರೇಂದ್ರ ಹೆಗ್ಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಬುಧವಾರ ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.
44 ವರ್ಷ ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣಾರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…
ತಾಮ್ರದ ಬಾಟೆಲ್ನಲ್ಲಿ ನೀರು ಕುಡಿಯುತ್ತಿದ್ದಿರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಿ ಏಕೆಂದರೆ ಇದು ನಿಮ್ಮ ಹಾಗು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಸುದ್ದಿ ಓದಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ. ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ…
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.
ನೀವು ಬ್ರೆಜಿಲ್ಗೆ ಪ್ರವಾಸ ಹೋಗುವ ಪ್ಲಾನ್ ಹಾಕಿಕೊಂಡಿದ್ದೀರಾ? ಹಾಗಿದ್ದರೆ ನಿಮಗೆ ವೀಸಾದ ಅವಶ್ಯಕತೆ ಇಲ್ಲ. ಹೀಗೊಂದು ಹೊಸ ಘೋಷಣೆಯನ್ನು ಬ್ರೇಜಿಲ್ ಸರ್ಕಾರ ಮಾಡಿದೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವೀಸಾ ನಿಯಮದಲ್ಲಿ ಬದಲಾವಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬ್ರೆಜಿಲ್ಗೆ ಪ್ರವಾಸ ಹಾಗೂ ಉದ್ಯಮ ದೃಷ್ಟಿಯಿಂದ ಭೇಟಿ ನೀಡುವ ಭಾರತ ಹಾಗೂ ಚೀನಾ ನಾಗರಿಕರಿಗೆ ವೀಸಾದ ಅವಶ್ಯಕತೆ ಇಲ್ಲ ಎಂದು ಜೈರ್ ಹೇಳಿದ್ದಾರೆ. ಇದರಿಂದ ಭಾರತ-ಬ್ರೆಜಿಲ್ ಸಂಬಂಧ ಮತ್ತಷ್ಟು ವೃದ್ಧಿಯಾಗುವ ಸಾಧ್ಯತೆ ಇದೆ. ಜೈರ್ ಚೀನಾ ಪ್ರವಾಸದ…
ಅದು ಆಸ್ಟ್ರೇಲಿಯಾದ ಅರಣ್ಯ. ಅದೆಷ್ಟೋ ವನ್ಯಸಂಕುಲಕ್ಕೆ ಈ ಕಾಡೇ ಆಶ್ರಯ ತಾಣ. ಇಂತಹ ಕಾನನದಲ್ಲಿ 55 ವರ್ಷದ ಮಹಿಳೆಯೊಬ್ಬರು ಗೊತ್ತಾಗದೇ ದಾರಿ ತಪ್ಪಿದ್ದರು…! ಬರೋಬ್ಬರಿ ಮೂರು ದಿನಗಳ ಕಾಲ ಇವರು ಕಾಡಿನಲ್ಲಿ ದಾರಿ ತಪ್ಪಿ ಭಯದಲ್ಲೇ ಅಲೆದಾಡುತ್ತಿದ್ದರು. ಅಂತಹ ಸಮಯದಲ್ಲಿ ಮಹಿಳೆ ಪತ್ತೆಯಾಗಿದ್ದು ಇದೊಂದು ಸಂಕೇತದಿಂದ ಆ ಸಂಕೇತವಾದರೂ ಏನು ಗೊತ್ತಾ,… ಈಕೆ ಡೆಬೊರಾ ಪಿಲ್ಗ್ರಿಮ್. ಕಾಡಂಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಇವರು ಸಾಗುತ್ತಿದ್ದರು. ಒಬ್ಬರೇ ಇದ್ದರು. ಹೀಗೆ ಸಾಗುವಾಗ ಅಕಸ್ಮಾತ್ ದಾರಿ ತಪ್ಪಿದ್ದರು. ಹೀಗಾಗಿ,…
ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…