ಮನರಂಜನೆ

ಶನಿ ಸಿರಿಯಲ್’ನ ಪಾತ್ರದಾರಿ ಈ ಹುಡುಗ ಯಾರು ಗೊತ್ತಾ..?ಈ ಹುಡುಗನ ರಿಯಲ್ ಸ್ಟೋರಿ ಕೇಳಿದ್ರೆ ನೀವ್ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ಓದಿ ಮತ್ತೆ ಮರೆಯದೇ ಶೇರ್ ಮಾಡಿ…

2219

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ.ಆದರೆ ಪುರಾಣಕ್ಕೆ ಸಂಭಂದಿಸಿದಂತೆ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ.ಯಾಕಂದ್ರೆ ಪೌರಾಣಿಕ ಧಾರಾವಾಹಿಗಳನ್ನು ಮಾಡಲು ತುಂಬಾ ಹಣ ಬೇಕಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಅಲ್ಲೊಂದು ಇನ್ನೊಂದು ಧಾರಾವಾಹಿಗಳು ಮಾತ್ರ ನೋಡಲು ನಮಗೆ ಸಿಗುತ್ತವೆ.

ಅದರಲ್ಲಿ ಒಂದು ಶನಿ ಧಾರವಾಹಿ. ಇದು ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ಧಾರವಾಹಿ. ಇದು ಈಗಾಗಲೇ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 23ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಅಭೂತಪೂರ್ವ ಯಶಸ್ಸು ಕಾಣುತ್ತಿದೆ.

ಯಶಸ್ವಿ 100 ಎಪಿಸೋಡ್…

ಈ ಸೀರಿಯಲ್ ಆರಂಭ ಆದಾಗಿನಿಂದಲೂ ಪ್ರತಿಹಂತದಲ್ಲೂ ಕುತೂಹಲವನ್ನು ಹುಟ್ಟುಸಿಕೊಂಡು ಬರುತ್ತಿದ್ದು, ಈಗಾಗಲೇ ಕಿರುತೆರೆಯಲ್ಲಿ ಯಶಸ್ವಿಯಾಗಿ 100 ಎಪಿಸೋಡ್ ಮುಗಿಸಿದೆ. ಉತ್ತಮ ನಿರೂಪಣೆ, ಕಥೆ, ಪಾತ್ರಗಳು ಈ ಧಾರಾವಾಹಿಯ ಪ್ಲಸ್‌ ಪಾಯಿಂಟ್‌ ಆಗಿದ್ದು ಇತರ ಧಾರಾವಾಹಿಗಳಿಗಿಂತ ‘ಶನಿ’ ಮೊದಲ ಸ್ಥಾನದಲ್ಲಿದೆ.

ಶನಿ ಪಾತ್ರದಾರಿ ಅನಾಥ ಹುಡುಗ…

ಶನಿ ಧಾರಾವಾಹಿಯ ಪ್ರಮುಖ ಹೈಲೆಟ್ ಕರ್ಮ ಫಲಧಾತ, ನ್ಯಾಯದ ಅಧಿದೇವತೆ ಭಗವಾನ್ ಶನಿದೇವನ ಪಾತ್ರ.ಈ ಪಾತ್ರವನ್ನು ಮಾಡಿರುವುದು ಸುನಿಲ್ ಎಂಬ ಒಬ್ಬ ಅನಾಥ ಹುಡುಗ ಎಂದರೆ ನೀವ್ ನಂಬೋದಿಲ್ಲ.

ಅಮೋಘ ಅಭಿನಯ…

ತನ್ನ ತೀಕ್ಷಣ ಕಣ್ಣಿನ ನೋಟ,ಮುಖದ ಗಾಂಬಿರ್ಯ,ಅಮೋಘ ಡೈಲಾಗ್ ಡೆಲಿವರಿ ಜೊತೆಗೆ ಆ ಶನಿ ಮಾಹಾತ್ಮನೆ ತನ್ನ ಮೈ ಮೇಲೆ ಬಂದಿರುವಂತೆ ಅಮೋಘ ಅಭಿನಯ ನೀಡಿ ಕಿರುತೆರೆ ಲೋಕದ ಜನರ ಮನಸ್ಸನ್ನು ಗೆದ್ದಿದ್ದಾನೆ ಈ ಸುನೀಲ್.

ಸಮಾರ್ಗದಲ್ಲಿ ನಡೆ, ಇಲ್ಲದಿದ್ದರೆ ನಾನೇ ನಿಮ್ಗೆ ಸನ್ಮಾರ್ಗ ತೋರಬೇಕಾದಿತು..ಇದು ಶನಿ ಧಾರಾವಾಹಿಯ ಹೈಲೆಟ್ ಡೈಲಾಗ್.

ಸುನೀಲ್ ಬೆಳೆದಿದ್ದು ಈ ಅನಾಥಾಶ್ರಮದಲ್ಲಿ…

ತನ್ನ ಅಮೋಘ ನಟನೆಯಿಂದಲೇ ಕರುನಾಡ ಜನರ ಮನಸ್ಸನ್ನು ಗೆದ್ದಿರುವ ಸುನೀಲ್ ಬೆಳೆಯುತ್ತಿರುವುದು ಚಾಮರಾಜನಗರದ ಅನಾಥಾಶ್ರಮದಲ್ಲಿ. ಹೌದು ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು ದೀನ ಬಂಧು ಮಕ್ಕಳ ಆಶ್ರಮದಲ್ಲಿ.ಈ ಆಶ್ರಮವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರ ಮಗ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ತನ್ನ ಹತ್ತನೆ ತರಗತಿವರಗಿನ ವಿಧ್ಯಾಭ್ಯಾಸವನ್ನು ಆಶ್ರಮದಿಂದಲೇ ಮುಗಿಸಿದ್ದಾನೆ.

ಯಕ್ಷಗಾನ…

ತುಂಬಾ ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನವನ್ನು ಕೂಡ ಕಲಿತಿದ್ದರು.ಶನಿ ಧಾರಾವಾಹಿಯ ಆಡಿಶನ್ ತಂಡದ ಕಣ್ಣಿಗೆ ಬಿದ್ದ ಇವರ ಅಮೋಘ ಅಭಿನಯಕ್ಕೆ ಮನಸೋತ ಶನಿ ಧಾರವಾಹಿ ತಂಡದವರು ಧಾರಾವಾಹಿಯ ಮುಖ್ಯ ಪಾತ್ರ ಭಗವಾನ್ ಶನಿದೇವನ ಪಾತ್ರಕ್ಕೆ ಆಯ್ಕೆ ಮಾಡಿದ್ರು.

ಶನಿ ಮಹಾತ್ಮನ ಬಗ್ಗೆ ಗೊತ್ತಿಲ್ಲ…

ಶನಿ ಪಾತ್ರದಾರಿ ಸುನೀಲ್ ಹೇಳುವ ಪ್ರಖಾರ ಶನಿ ದೇವರ ಅಷ್ಟೇನೂ ಗೊತ್ತಿಲ್ವಂತೆ.ಪಾತ್ರ ಮಾಡುತ್ತಲೇ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.ತನ್ನ ಶೂಟಿಂಗ್ ನಡುವೆಯೂ ಪಿಯು ಓದುತ್ತಿರುವ ಪ್ರತಿಭಾವಂತ ಹುಡುಗ ಸುನೀಲ್’ಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಆ ಭಗವಾನ್ ಶನಿ ಮಹಾತ್ಮನ ಆಶೀರ್ವಾದ ಅವನಿಗೆ ಸಿಗಲಿ ಎಂದು ನಾವು ಕೇಳಿಕೊಳ್ಳೋಣ…

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ