ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಕಿರುತೆರೆ ಲೋಕದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ.ಆದರೆ ಪುರಾಣಕ್ಕೆ ಸಂಭಂದಿಸಿದಂತೆ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ.ಯಾಕಂದ್ರೆ ಪೌರಾಣಿಕ ಧಾರಾವಾಹಿಗಳನ್ನು ಮಾಡಲು ತುಂಬಾ ಹಣ ಬೇಕಾಗುತ್ತದೆ.ಹಾಗಾಗಿ ಕನ್ನಡದಲ್ಲಿ ಅಲ್ಲೊಂದು ಇನ್ನೊಂದು ಧಾರಾವಾಹಿಗಳು ಮಾತ್ರ ನೋಡಲು ನಮಗೆ ಸಿಗುತ್ತವೆ.

ಅದರಲ್ಲಿ ಒಂದು ಶನಿ ಧಾರವಾಹಿ. ಇದು ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ಧಾರವಾಹಿ. ಇದು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 23ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದು ಅಭೂತಪೂರ್ವ ಯಶಸ್ಸು ಕಾಣುತ್ತಿದೆ.

ಈ ಸೀರಿಯಲ್ ಆರಂಭ ಆದಾಗಿನಿಂದಲೂ ಪ್ರತಿಹಂತದಲ್ಲೂ ಕುತೂಹಲವನ್ನು ಹುಟ್ಟುಸಿಕೊಂಡು ಬರುತ್ತಿದ್ದು, ಈಗಾಗಲೇ ಕಿರುತೆರೆಯಲ್ಲಿ ಯಶಸ್ವಿಯಾಗಿ 100 ಎಪಿಸೋಡ್ ಮುಗಿಸಿದೆ. ಉತ್ತಮ ನಿರೂಪಣೆ, ಕಥೆ, ಪಾತ್ರಗಳು ಈ ಧಾರಾವಾಹಿಯ ಪ್ಲಸ್ ಪಾಯಿಂಟ್ ಆಗಿದ್ದು ಇತರ ಧಾರಾವಾಹಿಗಳಿಗಿಂತ ‘ಶನಿ’ ಮೊದಲ ಸ್ಥಾನದಲ್ಲಿದೆ.

ಶನಿ ಧಾರಾವಾಹಿಯ ಪ್ರಮುಖ ಹೈಲೆಟ್ ಕರ್ಮ ಫಲಧಾತ, ನ್ಯಾಯದ ಅಧಿದೇವತೆ ಭಗವಾನ್ ಶನಿದೇವನ ಪಾತ್ರ.ಈ ಪಾತ್ರವನ್ನು ಮಾಡಿರುವುದು ಸುನಿಲ್ ಎಂಬ ಒಬ್ಬ ಅನಾಥ ಹುಡುಗ ಎಂದರೆ ನೀವ್ ನಂಬೋದಿಲ್ಲ.

ತನ್ನ ತೀಕ್ಷಣ ಕಣ್ಣಿನ ನೋಟ,ಮುಖದ ಗಾಂಬಿರ್ಯ,ಅಮೋಘ ಡೈಲಾಗ್ ಡೆಲಿವರಿ ಜೊತೆಗೆ ಆ ಶನಿ ಮಾಹಾತ್ಮನೆ ತನ್ನ ಮೈ ಮೇಲೆ ಬಂದಿರುವಂತೆ ಅಮೋಘ ಅಭಿನಯ ನೀಡಿ ಕಿರುತೆರೆ ಲೋಕದ ಜನರ ಮನಸ್ಸನ್ನು ಗೆದ್ದಿದ್ದಾನೆ ಈ ಸುನೀಲ್.

ಸಮಾರ್ಗದಲ್ಲಿ ನಡೆ, ಇಲ್ಲದಿದ್ದರೆ ನಾನೇ ನಿಮ್ಗೆ ಸನ್ಮಾರ್ಗ ತೋರಬೇಕಾದಿತು..ಇದು ಶನಿ ಧಾರಾವಾಹಿಯ ಹೈಲೆಟ್ ಡೈಲಾಗ್.
ತನ್ನ ಅಮೋಘ ನಟನೆಯಿಂದಲೇ ಕರುನಾಡ ಜನರ ಮನಸ್ಸನ್ನು ಗೆದ್ದಿರುವ ಸುನೀಲ್ ಬೆಳೆಯುತ್ತಿರುವುದು ಚಾಮರಾಜನಗರದ ಅನಾಥಾಶ್ರಮದಲ್ಲಿ. ಹೌದು ಸುನೀಲ್ ಚಿಕ್ಕಂದಿನಿಂದಲೂ ಬೆಳೆದಿದ್ದು ದೀನ ಬಂಧು ಮಕ್ಕಳ ಆಶ್ರಮದಲ್ಲಿ.ಈ ಆಶ್ರಮವನ್ನು ಕವಿ ಜಿ.ಎಸ್.ಶಿವರುದ್ರಪ್ಪನವರ ಮಗ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ತನ್ನ ಹತ್ತನೆ ತರಗತಿವರಗಿನ ವಿಧ್ಯಾಭ್ಯಾಸವನ್ನು ಆಶ್ರಮದಿಂದಲೇ ಮುಗಿಸಿದ್ದಾನೆ.

ತುಂಬಾ ಚಿಕ್ಕಂದಿನಿಂದಲೇ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನವನ್ನು ಕೂಡ ಕಲಿತಿದ್ದರು.ಶನಿ ಧಾರಾವಾಹಿಯ ಆಡಿಶನ್ ತಂಡದ ಕಣ್ಣಿಗೆ ಬಿದ್ದ ಇವರ ಅಮೋಘ ಅಭಿನಯಕ್ಕೆ ಮನಸೋತ ಶನಿ ಧಾರವಾಹಿ ತಂಡದವರು ಧಾರಾವಾಹಿಯ ಮುಖ್ಯ ಪಾತ್ರ ಭಗವಾನ್ ಶನಿದೇವನ ಪಾತ್ರಕ್ಕೆ ಆಯ್ಕೆ ಮಾಡಿದ್ರು.

ಶನಿ ಪಾತ್ರದಾರಿ ಸುನೀಲ್ ಹೇಳುವ ಪ್ರಖಾರ ಶನಿ ದೇವರ ಅಷ್ಟೇನೂ ಗೊತ್ತಿಲ್ವಂತೆ.ಪಾತ್ರ ಮಾಡುತ್ತಲೇ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.ತನ್ನ ಶೂಟಿಂಗ್ ನಡುವೆಯೂ ಪಿಯು ಓದುತ್ತಿರುವ ಪ್ರತಿಭಾವಂತ ಹುಡುಗ ಸುನೀಲ್’ಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಆ ಭಗವಾನ್ ಶನಿ ಮಹಾತ್ಮನ ಆಶೀರ್ವಾದ ಅವನಿಗೆ ಸಿಗಲಿ ಎಂದು ನಾವು ಕೇಳಿಕೊಳ್ಳೋಣ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾರೇ ನೀನು ಚೆಲುವೆ ಚಿತ್ರವು 1998ರಲ್ಲಿ ಸ್ಯಾಂಡಲ್ ವುಡ್ ಬಿಡುಗಡೆಯಾದ ಚಿತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗು ನಟಿ ಸಂಗೀತ ನಟಿಸಿದ್ದರು. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಅಭಿನಯ ಮಾಡಿ ಮಿಂಚಿದ್ದ ಈ ನಟಿ 2000 ರಲ್ಲಿ ಸರವನ್ ಎಂಬುವವರನ್ನು ಮದುವೆ ಆದರು, ಬಳಿಕ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದರು. ಇವರು ಸಿನಿಮಾದಲ್ಲಿ ಸೌಮ್ಯ ಸ್ವಭಾವದ ಪಾತ್ರಗಳಲ್ಲೇ ಅಭಿನಯ ಮಾಡಿ ಹೆಸರುವಾಸಿಯಾದವರು. ನಿಜಜೀವನದಲ್ಲೂ…
ಸೋಮವಾರ, 23/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಮೇಷ:- ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ…
ಸ್ವಿಟ್ಜರ್ಲ್ಯಾಂಡ್ನ ಈ ಪ್ರಕೃತಿ ಮನೋಹರ ಪಟ್ಟಣಕ್ಕೆ ವಲಸೆ ಬರುವವರಿಗೆ ಅಲ್ಲಿಯ ಸರಕಾರವೇ 60,000 ಡಾ.(ಸುಮಾರು 38.7 ಲ.ರೂ.) ನೀಡುತ್ತದೆ. ಸರಕಾರದ ಈ ಕೊಡುಗೆಗೆ ಕಾರಣವಿದೆ. ಈ ಪಟ್ಟಣದಲ್ಲಿ ಜನಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.
ಮತಗಟ್ಟೆಗೆ ಹೋಗುವ ನಾವು, ನಮಗೆ ಇಷ್ಟವಾದ ಪಕ್ಷಕ್ಕೋ, ಅಭ್ಯರ್ಥಿಗೋ ವೋಟ್ ಹಾಕಿ ಬಂದುಬಿಡ್ತಿವಿ.ಆದರೆ ನಾವು ಹಾಕಿದ ವೋಟ್, ನಾವು ಚುನಾಯಿಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಬಿದ್ದಿದೆಯೇ ಎಂಬುವ ಗ್ಯಾರಂಟಿ ಯಾರು ಕೊಡುತ್ತಾರೆ..? ಹೌದು, ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಹಾಗಾದ್ರೆ ನಾವು ಚುನಾಯಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಮ್ಮ ವೋಟ್ ಬಿದ್ದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ..? ವಿವಿಪ್ಯಾಟ್ ಅಂದ್ರೆ ಏನು..? ವಿವಿಪ್ಯಾಟ್ ಅಂದರೆ “ವೋಟರ್ ವೆರಿಫಯಬಲ್ ಆಡಿಟ್ ಟ್ರಯಲ್” ಎಂದು. ಇದನ್ನು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ಗೆ ಜೋಡಿಸಲಾಗಿರುತ್ತದೆ.ಇದರಿಂದ…
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ.
ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.