inspirational

ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು

695

ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.

ಯಾವುದನ್ನೂ ವಿಜೃಂಭಿಸದೆ, ವಾಸ್ತವ ಎಷ್ಟೇ ಕಠೋರವಾಗಿದ್ದರೂ, ಜನರ ನಂಬಿಕೆಗೆ ವಿರುದ್ಧವಾಗಿದ್ದರೂ, ಆಡಳಿತ ಮಾಡುವವರ ಮರ್ಜಿಗೆ ಒಳಗಾಗದೆ ಸತ್ಯದ ಪರ ನಿಷ್ಠೆಯನ್ನು ಹೊಂದಿದ್ದರು. ಆಗಲೂ ಅಪರೂಪಕ್ಕೆ ಕೆಲವು ಭಟ್ಟಂಗಿಗಳು ಇದ್ದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ.

ಅಕ್ಷರಗಳ ಮುಖಾಂತರ ಕ್ರಾಂತಿಯನ್ನೇ ಮಾಡಲಾಯಿತು. ಆಗಲೇ “ಖಡ್ಗಕ್ಕಿಂತ ಲೇಖನಿ ಹರಿತ ” ಎಂಬ ನಾಣ್ಣುಡಿ ನಿಜವಾಗಿ ಆಚರಣೆಯಲ್ಲಿತ್ತು.

ಕೈ ಬರಹದ ಪತ್ರಿಕೋದ್ಯಮ ಓದುಗರ ನರನಾಡಿಗಳಲ್ಲಿ ರೋಮಾಂಚನ ಉಂಟುಮಾಡುತ್ತಿತ್ತು. ಮನಸ್ಸಿಗೆ ನಾಟುತ್ತಿತ್ತು. ತದನಂತರ ಆಧುನಿಕ ಬೆಳವಣಿಗೆಯೊಂದಿಗೆ ಮುದ್ರಣವೂ, ಆಮೇಲೆ ಆಕಾಶವಾಣಿ ಸುದ್ದಿ ಮಾಧ್ಯಮಗಳು, ಟಿವಿ ಮಾಧ್ಯಮಗಳು, ಅಂತರ್ಜಾಲ ವೆಬ್ ಪೋರ್ಟಲ್ ಗಳು ಅಭಿವೃದ್ಧಿ ಹೊಂದಿದವು ಮತ್ತು ಅತ್ಯಂತ ವೇಗವಾಗಿ ಜನಸಮೂಹವನ್ನು ಆಕ್ರಮಿಸಿಕೊಂಡವು.

ಪತ್ರಕರ್ತರೆಂದರೆ ವಿಶೇಷ ಬುದ್ಧಿಶಕ್ತಿಯ ಆಡಳಿತದ ಕಾವಲುಗಾರರು, ಸಮಾಜದ ಮಾರ್ಗದರ್ಶಕರು, ಜನಾಭಿಪ್ರಾಯ ರೂಪಿಸುವ ಚಿಂತಕರು ಎಂದೇ ಭಾವಿಸಲಾಗಿತ್ತು ಮತ್ತು ಅಪಾರ ಗೌರವವನ್ನು ನೀಡಲಾಗುತ್ತಿತ್ತು.

ಆದರೆ, ಅದೇ ಮಾತುಗಳನ್ನು ಈಗಿನ ಟಿವಿ ಮಾಧ್ಯಮಗಳ ಬಗ್ಗೆ ಹೇಳಲು ಸಾಧ್ಯವೇ ?

ಸುದ್ದಿಗಳೊಂದಿಗೆ ಪೆಟ್ರೋಲ್ ಮತ್ತು ಬೆಂಕಿ ಕಡ್ಡಿಯನ್ನು ಜೊತೆಯಲ್ಲಿಯೇ ತಂದಿರುತ್ತಾರೆ.

ಈ ಕ್ಷಣದಲ್ಲಿ ಪಾಕಿಸ್ತಾನದ ಮಾಧ್ಯಮಗಳು ಭಾರತ ಮತ್ತು ಅದರ ಪ್ರಧಾನಿಯನ್ನು ಟೀಕಿಸಲು ಬಳಸದ ಕೆಟ್ಟ ಪದವೇ ಇಲ್ಲ. ಸುಳ್ಳು ಸಹ ಇವರ ಕಾಟಕ್ಕೆ ಅವಮಾನದಿಂದ ನೇಣು ಹಾಕಿಕೊಂಡಿತು.

ಹಾಗೆಯೇ ಭಾರತ ಪತ್ರಕರ್ತರು ಸಹ ಅವರಂತೆಯೇ ವರ್ತಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ವಿಮರ್ಶಾತ್ಮಕ ಸುದ್ದಿಗಳನ್ನು ಮರೆತು ಜನರ ಭಾವನೆಗಳು ಮತ್ತು ಜನಪ್ರಿಯತೆಯ ಬಾಲ ಹಿಡಿದು ಸತ್ಯವನ್ನು ಸಮಾಧಿ ಮಾಡುತ್ತಿವೆ.

ಪ್ರಾಣವನ್ನು ಧೈರ್ಯವಾಗಿ ದೇಶಕ್ಕಾಗಿ ಸಮರ್ಪಿಸುತ್ತಿರುವ ಸೈನಿಕರ ತ್ಯಾಗ ಬಲಿದಾನಗಳ ಈ ಸಂಧರ್ಭದಲ್ಲಿ ಅದಕ್ಕೊಂದು ಅರ್ಥ ನೀಡಿ ಅತ್ಯಂತ ವಿವೇಚನೆಯಿಂದ ವಿಷಯಗಳನ್ನು ವಿಮರ್ಶಿಸಿ ಶಾಂತಿಯ ಸಂದೇಶಗಳನ್ನು ಎರಡೂ ಕಡೆ ಹಬ್ಬಿಸುತ್ತಾ, ಜನಾಭಿಪ್ರಾಯ ರೂಪಿಸಿ,ಆಡಳಿತಗಾರರ ಕಣ್ಣು ತೆರೆಸಿ, ಯುದ್ಧ ಮತ್ತು ಹಿಂಸೆಯ ಭೀಕರ ಪರಿಣಾಮ ಮತ್ತು ಅದರ ನಿರರ್ಥಕತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಂಪೂರ್ಣ ಅದಕ್ಕೆ ವಿರುದ್ಧವಾಗಿ ಮಾಡುತ್ತಿವೆ.

ರಾಜಕಾರಣಿಗಳನ್ನು ಟೀಕಿಸುತ್ತಾ, ಶಾಂತಿ ಸೌಹಾರ್ದತೆಯ ಪ್ರತಿಪಾದಕರನ್ನು ಹೇಡಿಗಳಾಗಿ ಚಿತ್ರಿಸುತ್ತಾ, ಸಂಯಮಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಾ ಇಡೀ ಜನಾಭಿಪ್ರಾಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳತೊಡಗಿದ್ದಾರೆ.

ಇದೇ ನೋಡಿ ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚೆಯಾಗುವ ಅಪಾಯ ಎಲ್ಲರೂ ಊಹಿಸಿದ್ದರು. ಆದರೆ ಅದು ಸರ್ವಾಧಿಕಾರಿಯಾಗಿ ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿ ಆಹುತಿ ತೆಗೆದುಕೊಳ್ಳುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ.

ಸತ್ಯದ ಕತ್ತು ಹಿಸುಕಿ ಅದರ ಸಮಾಧಿಯ ಮೇಲೆ ಸುಳ್ಳಿನ ಅಡಿಪಾಯ ಹಾಕಿ ಭ್ತಮಾಲೋಕದ ಅರಮನೆ ಕಟ್ಟಿ, ಅಮಾನವೀಯ ಬಣ್ಣ ಬಳಿದು ಇಡೀ ಸಮಾಜವನ್ನು ನಿಧಾನವಾಗಿ ವಿಷಪೂರಿತ ಮಾಡುತ್ತಿದೆ.

ನಿರೂಪಕರೆಂಬ ಮತಿಹೀನರು ವಿಷಯಗಳ ಆಳ ಅಗಲಗಳ ಬಗ್ಗೆ ಯಾವುದೇ ಜ್ಞಾನ ಇಲ್ಲದವರು ಬಾಯಿಗೆ ಬಂದಂತೆ ಮಾತನಾಡುತ್ತಾ, ಮಾತಿನಲ್ಲೇ ಬೀದಿ ಬದಿಯ ಕುಡುಕರಿಗಿಂತ ಕೆಟ್ಟದ್ದಾಗಿ ವರ್ತಿಸುತ್ತಾ ಸಮೂಹ ಸನ್ನಿಗೆ ಒಳಗಾಗಿದ್ದಾರೆ. ರೌಡಿಗಳು, ಕ್ರಿಮಿನಲ್ ಗಳು ಸಹ ಅಪರಾಧ ಎಸಗುವ ಮುನ್ನ ಹಲವಾರು ಬಾರಿ ಯೋಚಿಸುತ್ತಾರೆ. ಆದರೆ ಈ ಟಿವಿ ಮಾಧ್ಯಮದವರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಪುರಾಣ, ಇತಿಹಾಸ, ರಾಜಕೀಯ, ಆರ್ಥಿಕ, ಸಾಮಾಜಿಕ ಮುಂತಾದ ಯಾವ ವಿಷಯಗಳನ್ನು ತಿಳಿಯದೆ ಈ ಕ್ಷಣದ ಮಾಹಿತಿಯನ್ನೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ.

ಈಗಾಗಲೇ ಅವರ ಬಣ್ಣ ಬಯಲಾಗಿದೆ. ಅದರೂ ಅವರು ಶಿಥಿಲವಾಗುವ ಮುನ್ನ ಮಾಡಬಹುದಾದ ಅಪಾಯಕಾರಿ ಕೆಲಸಗಳ ಪರಿಣಾಮ ಬಹಳ ಕಾಲ ಉಳಿಯುತ್ತದೆ.

ಆದ್ದರಿಂದ ಜನ ಸಾಮಾನ್ಯರಾದ ನಾವುಗಳು ವಿವೇಚನೆಯಿಂದ ತಾಳ್ಮೆಯಿಂದ ಸುದ್ದಿ ಮತ್ತು ಅದರ ಹಿನ್ನೆಲೆಯನ್ನು ಗ್ರಹಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳೋಣ. ಅದರ ಆಧಾರದ ಮೇಲೆ ಚರ್ಚೆ ಮಾಡೋಣವೇ ಹೊರತು ಈ ಟಿವಿ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಜಗಳವೇ ಚರ್ಚೆ ಎಂಬ ತಪ್ಪು ಕಲ್ಪನೆ ತಿರಸ್ಕರಿಸೋಣ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ ಹೆಚ್. ಕೆ.

About the author / 

Chethan Ram

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಜ್ಯೋತಿಷ್ಯ

    ಇಂದು ಭಾನುವಾರ, ಇಂದಿನ ನಿಮ್ಮ ಭವಿಷ್ಯ ಶುಭವೋ ಅಶುಭವೋ, ಹೇಗಿದೆ ನೋಡಿ ತಿಳಿಯಿರಿ

    ಭಾನುವಾರ , 1/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದಾರ್ಶನಿಕ ಸಂತರ ಸಮಾಗಮದಿಂದ ಆಧ್ಯಾತ್ಮ ಜೀವನಕ್ಕೆ ಹೊಸ ಆಯಾಮ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರಕಲಿವೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ. ವೃಷಭ:- ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಸನ್ಮಾರ್ಗದಲ್ಲಿ ಸಾಗುವುದರಿಂದ ಕುಟುಂಬ ಬಾಧ್ಯತೆಗಳ ನಿರ್ವಹಣೆ ಸರಾಗವಾಗಲಿದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿಬರಲಿವೆ….

  • ಸುದ್ದಿ

    1 ರೂಪಾಯಿಗೆ 10 ಕಿ.ಮೀ ಚಲಿಸುವ ಸ್ಕೂಟರ್,!ಇದರ ಬಗ್ಗೆ ನಿಮಗೆ ಗೊತ್ತೇ,ಇಲ್ಲಿದೆ ನೋಡಿ ಮಾಹಿತಿ,.!

    ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಮಧ್ಯೆ, ಜನರು ಆರ್ಥಿಕ ದ್ವಿಚಕ್ರ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಒತ್ತು ನೀಡುತ್ತಿದೆ. ಜಪಾನ್‌ನ ದ್ವಿಚಕ್ರ ವಾಹನ ತಯಾರಕ ಒಕಿನಾವಾ ದ್ವಿಚಕ್ರ ವಾಹನಗಳು ಕೆಲವು ದಿನಗಳ ಹಿಂದೆ ಪ್ರೇಜ್ ಪ್ರೊ(Praise Pro) ಸ್ಕೂಟರ್ ಅನ್ನು ಬಿಡುಗಡೆ ಮಾಡಿದ್ದವು. ಕಂಪನಿಯ ನವೀಕರಿಸಿದ ಪ್ರೇಜ್(Praise) ಆವೃತ್ತಿಯು ಈಗಾಗಲೇ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತಿದೆ. ‘ಪ್ರೇಜ್’ ನಲ್ಲಿದೆ 1000 ವ್ಯಾಟ್ ಸ್ಟ್ರಾಂಗ್ ಮೋಟರ್ : ‘ಪ್ರೇಜ್’ ಒಕಿನಾವಾ…

  • ಕರ್ನಾಟಕ

    ಕಲ್ಲಡ್ಕ ಶಾಲೆಯ ಸ್ವಾಭಿಮಾನಿ ಮಕ್ಕಳ ನೆರವಿಗೆ ನಿಂತ ಹೆಣ್ಣು ಮಗಳು…! ಹೇಗೆ ಎಂದು ತಿಳಿಯಲು ಈ ಲೇಖನ ಓದಿ ….

    ಹೌದು ಸರ್ಕಾರದಿಂದ ಕಲ್ಲಡ್ಕ ಶಾಲೆಗೆ ಸಿಗುತಿದ್ದ ಅನುದಾನ ನಿಲ್ಲಿಸಿದ್ದು ಎಲ್ಲರಿಗೂ ತಿಳಿದೇ ಇದೆ.. ಹೀಗಿರುವಾಗ ಹಲವಾರು ಮಂದಿ ಶಾಲೆಯ ನೆರವಿಗೆ ಬಂದರು..

  • ದೇಶ-ವಿದೇಶ

    ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವ ಮಕ್ಕಳಿಗೆ ಕಾದಿದೆ ಮಾರಿ ಹಬ್ಬ!ಮೋದಿ ಸರ್ಕಾರ ತರಲಿದೆ ಹೊಸ ಕಾನೂನು?

    ಈಗಿನ ಕಾಲದಲ್ಲಿ ಮಕ್ಕಳಿಗೆ ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಗಳನ್ನು ಸಾಕುವುದೇ ದೊಡ್ಡ ಕಷ್ಟವೆನಿಸಿದೆ.ಹಾಗಾಗಿ ತಮ್ಮ ವೃದ್ಧ ತಂದೆ ತಾಯಿಗಳನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವುವರೇ ಹೆಚ್ಚು. ಆದರೆ ಇನ್ನು ಮುಂದೆ ಹಾಗೆ ಮಾಡುವ ಆಗಿಲ್ಲ.

  • ಸುದ್ದಿ

    ಪ್ರೇಯಸಿ ಕೊಕ್ಕರೆಯ ಕಾಲು ಮುರಿದ ಬೇಟೆಗಾರ, ನಂತರ ಗಂಡು ಕೊಕ್ಕರೆ ಮಾಡಿದ ಕೆಲಸ ನೋಡಿ.

    ಮನುಷ್ಯ ಪ್ರೀತಿಗಾಗಿ ಏನು ಮಾಡಲು ಕೂಡ ತಯಾರು ಇರುತ್ತಾನೆ, ಹಾಗೆ ಪ್ರಾಣಿ ಮತ್ತು ಪಕ್ಷಿಗಳು ಕೂಡ, ಬೇಟೆಗಾರನಿಂದ ಕಾಲು ಕಳೆದುಕೊಂಡ ಹೆಣ್ಣು ಕೊಕ್ಕರೆಗಾಗಿ ಈ ಗಂಡು ಕೊಕ್ಕರೆ ಮಾಡಿದ ಕೆಲಸವನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ಕೂಡ ನೀರು ಜಿನುಗುತ್ತದೆ. ಹಾಗಾದರೆ ಈ ಗಂಡು ಕೊಕ್ಕರೆ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಕೊಕ್ಕರೆಯ ಪ್ರೇಮ ಕಥೆ…

  • ಸುದ್ದಿ

    ಪವಿತ್ರ ಲೋಹವಾದ ಬೆಳ್ಳಿಯನ್ನು ಶುಭ ಸಮಾರಂಭಗಳಲ್ಲಿ ಯಾಕೆ ಬಳಸುತ್ತಾರೆ ಗೊತ್ತಾ..?

    ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…