ಸುದ್ದಿ

ವಿದ್ಯಾರ್ಥಿಗಳನ್ನೇ ಕಾರ್ಮಿಕರನ್ನಾಗಿ ಬಳಸಿದ ಶಾಲೆ..!

44

ಚೆನ್ನಾಗಿಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ.ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ.

ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ ಬೇಕಾ ದ ಶಿಕ್ಷಕರು, ಸಾವಿರಾರು ರುಪಾಯಿ ಶುಲ್ಕ ಪಡೆಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರನ್ನಾಗಿ ದುಡಿಸಿ ಕೊಂಡಿರುವ ಘಟನೆ ತಾಲೂಕಿನ ಚೇಳೂರು ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.

ಸಾವಿರಾರು ರುಪಾಯಿ ಶುಲ್ಕ ಪಾವತಿಸಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಸೇರಿಸಿದರೆ, ಖಾಸಗಿ ಶಾಲೆಗಳು ಮಕ್ಕಳಿಗೆ ಉತ್ತಮ ವಿದ್ಯೆ ಕಲಿಸುವ ಬದಲಿಗೆ ವಿದ್ಯಾರ್ಥಿ ಗಳಿಂದ ನಾನಾ ಕೆಲಸಗಳನ್ನು ಮಾಡಿಸುವ ಮೂಲಕ ಬಾಲ ಕಾರ್ಮಿಕರನ್ನಾಗಿಸುವ ಕೆಲಸಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರ್ಯಾಕ್ಟರ್‌ಗೆ ಜಲ್ಲಿ ತುಂಬಿದ ಮಕ್ಕಳು:ಶಾಲೆ ಆವ ರಣದಲ್ಲಿರುವ ಜಲ್ಲಿ ಕಲ್ಲುಗಳನ್ನು ವಿದ್ಯಾರ್ಥಿಗಳಿಂದ ಟ್ರ್ಯಾಕ್ಟರ್‌ಗೆ ತುಂಬಿಸುವ ಕೆಲಸಕ್ಕೆ ಮುಂದಾಗುವ ಮೂಲಕ ಶಿಕ್ಷಣ ಇಲಾಖೆ ನಿಯಮಾವಳಿ ಗಳನ್ನು ಉಲ್ಲಂಘಿಸಿರುವ ಚೇಳೂರಿನ ಅರವಿಂದ ಖಾಸಗಿ ಶಾಲೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕಟ್ಟಡ ನಿರ್ಮಾಣಕ್ಕೂ ಬಳಕೆ ಆರೋಪ:ಈ ಶಾಲೆಯಲ್ಲಿ ಹೊಸದಾಗಿ ಮೂರು ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಅಗತ್ಯವಿರುವ ಜಲ್ಲಿ, ಇಟ್ಟಿಗೆ, ಮರಳು ಮುಂತಾದವುಗಳನ್ನು ಶಾಲೆ ಆವರಣದಲ್ಲಿ ಶೇಖರಣೆ ಮಾಡಲಾಗಿತ್ತು.

ಕಟ್ಟಡ ನಿರ್ಮಾಣದ ಕೆಲಸದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗು ತ್ತಿದೆಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

    ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…

  • inspirational

    ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್

    ವಿಶ್ವದ ನಂಬರ್ 1 ಶ್ರೀಮಂತ ಎಂಬ ಅಗ್ಗಳಿಕೆ ಈಗ 72 ವರ್ಷದ ಬರ್ನಾರ್ಡ್ ಅರ್ನಾಲ್ಟ್ ಪಾಲಾಗಿದೆ. LVMH ಅಧ್ಯಕ್ಷ, ಸಿಇಒ ಅರ್ನಾಲ್ಟ್ ಬಗ್ಗೆ ಮಾಹಿತಿ ಇಲ್ಲಿದೆ. Published On – 25 May 2021 ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ ನಂಬರ್ 1 ಶ್ರೀಮಂತ ಸ್ಥಾನದಲ್ಲಿದೆ. ಫೋರ್ಬ್ಸ್ ಅಂಕಿ- ಅಂಶದ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ 18,620 ಕೋಟಿ ಅಮೆರಿಕನ್ ಡಾಲರ್. ಇಷ್ಟು ಹಣ ಇದ್ದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಗುತ್ತದೆ ಎಂಬ ಕುತೂಹಲ ನಿಮಗೆ…

  • ಸುದ್ದಿ

    ಸೊಪ್ಪು ಮಾರುವ ಹುಡುಗನನ್ನು ಲವ್ ಮಾಡಿ ಮದುವೆಯಾದ ಚೈತ್ರಾ ಕೋಟೂರ್ ;ಇವರು ಹೇಳಿದ ಈ ಕಥೆ ನಿಜಾನಾ?

    ಬಿಗ್ ಬಾಸ್ ಸೀಸನ್ ನಲ್ಲಿ ತುಂಬಾ ವಿಚಿತ್ರವಾದ ಸ್ಪರ್ದಿ ಎಂದರೆ ಅವರು ಚೈತ್ರಾ ಕೋಟೂರ್‌ .ಚೈತ್ರಾ ಕೋಟೂರ್‌ಗೆ ಈ ನವೆಂಬರ್ ಬಂದರೆ  ಮದುವೆಯಾಗಿ ಮೂರು ವರ್ಷ ಆಗುತ್ತಂತೆ. ಆ ಹುಡುಗ ಸೊಪ್ಪು ಮಾರುತ್ತಿದ್ದಾನಂತೆ. ಶಾಸ್ತ್ರೋಕ್ತವಾಗಿ ಮದುವೆಯಾಗಿಲ್ವಂತೆ, ಸೈನ್ ಮಾಡಿ ಮದುವೆಯಾಗಿದ್ದಾರಂತೆ. ವ್ಯಕ್ತಿತ್ವ ನೋಡಿ ಮದುವೆಯಾಗಬೇಕು. ಸೊಪ್ಪು ಮಾರುವವರಿಗೆ, ತರಕಾರಿ ಮಾರುವವರಿಗೂ ಕೂಡ ಓದಿರುವವರನ್ನು ಮದುವೆಯಾಗಬೇಕು ಎಂಬ ಆಸೆ ಇರತ್ತೆ ಎಂದಿದ್ದಾರೆ ಚೈತ್ರಾ ಕೋಟೂರ್‌. ಸೊಪ್ಪು ಮಾರುವವನ ಮೇಲೆ ಚೈತ್ರಾಗೆ ಲವ್ ಆಗಿದ್ದೇಗೆ?ಮಾರ್ಕೆಟ್‌ ವಿಚಾರವಾಗಿ ಚೈತ್ರಾರಿಗೆ ಶೈನ್ ಶೆಟ್ಟಿ, ಸುಜಾತಾ…

  • India, nation, ಆಧ್ಯಾತ್ಮ

    ಅದ್ಭುತ ವಾಸ್ತುಶಿಲ್ಪದ ಅಕ್ಷರ್ಧಮ್ ಮಂದಿರ

    ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು  ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….

  • ತಂತ್ರಜ್ಞಾನ

    ಕರ್ನಾಟಕ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಕೇವಲ ಅರ್ಧಗಂಟೆಯ ದಾರಿಯಾಗಿಬಿಡುತ್ತದೆ…!ತಿಳಿಯಲು ಈ ಲೇಖನ ಓದಿ ..

    ಜಗತ್ತಿನಲ್ಲೇ ಅತ್ಯಂತ ವೇಗದ ಸಂಚಾರ ವ್ಯವಸ್ಥೆ ಎಂದೇ ಪರಿಚಿತವಾಗಿರುವ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಜತೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಟೆಕ್‌ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ವರ್ಜಿನ್‌ ಹೈಪರ್‌ಲೂಪ್‌ ಒನ್‌ ಜತೆ ಒಡಂಬಡಿಕೆಗೆ ಸಹಿ ಮಾಡಿದ್ದಾರೆ.

  • ಉಪಯುಕ್ತ ಮಾಹಿತಿ

    ನಿಜವಾದ ಬಡವ, ಶ್ರೀಮಂತ ಎಂದ್ರೆ ಯಾರೂ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಬಡತನ ಅನ್ನೋದು ಮನಸ್ಸಿನಲ್ಲಿ ಇದೆಯಾ ಅಥವಾ ಆಸ್ತಿಯಲ್ಲಿ ? ದುಡ್ಡಿನ ಓಟದಲ್ಲಿ ನಾವು ಯಾರು ಎಂಬುದನ್ನು ನಾವೇ ಮರೆತಿದ್ದೇವೆ. ಬಡವರು ಯಾರು? ಶ್ರೀಮಂತರು ಯಾರು? ಈ ಲೇಖನ ಓದಿ ನೀವೆ ನಿರ್ಧರಿಸಿ ಹೇಳಿ.