ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.
ಆದರೀಗ ಉತ್ತರ ಪ್ರದೇಶದಲ್ಲಿ ಬಿನ್ನವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಬಾರಾಂಬರಿ ಜಿಲ್ಲೆಯಲ್ಲಿ ಮದುವೆಯೊಂದು ನಡೆದಿದ್ದು, ಇಲ್ಲಿದ್ದ ವರ 80ರ ಹರೆಯದವರು ಹಾಗೂ ವಧುವಿಗೆ 70 ವರ್ಷ.
ಆದರೆ ಈ ಮದುವೆ ಇಷ್ಟೊಂದು ಚರ್ಚೆಗೀಡಾಗಲು ಕಾರಣವಾಗಿದ್ದೇನೆಂದರೆ ವಧು- ವರರಿಬ್ಬರೂ ಪ್ರೇಮಿಗಳಾಗಿದ್ದು, ಕಳೆದ 50 ವರ್ಷಗಳಿಂದ ಜೊತೆಗಿದ್ದರು ಅಂದರೆ ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದರು.
ವರದಿಯನ್ವಯ ಬಾನುಪುರದಲ್ಲಿ ವಾಸವಿರುವ ಸುಕುಮಾರ್ ಹಾಗೂ ರಜ್’ಪತಾ ದೇವಿ ಇಬ್ಬರ ನಡುವೆ ಯುವ ಪ್ರಾಯದಲ್ಲೇ ಪ್ರೇಮಾಂಕುರವಾಗಿತ್ತು. ಆದರೆ ಆ ಸಮಯದಲ್ಲಿ ಸುಕುಮಾರ್ ತುಂಬಾ ಬಡವನಾಗಿದ್ದು, ರಜ್’ಪತಾಳೊಂದಿಗೆ ಮದುವೆಯಾಗುವಷ್ಟು ಹಣವೂ ಆತನ ಬಳಿ ಇರಲಿಲ್ಲ. ಹೀಗಾಗಿ ಇಬ್ಬರೂ ಮದುವೆಯಾಗದೆ ಜೊತೆಗಿರಲು ನಿರ್ಧರಿಸಿದ್ದಾರೆ. ಬಳಿಕ ದಿನಗೂಲಿ ಕೆಲಸ ಮಾಡಿ ಬಹಳ ಕಷ್ಟದಿಂದ ಜೀವನ ಸಾಗಿಸಿದ್ದಾರೆ. ಈ ವೇಳೆ ಇವರ ಕುಟುಂಬ ವೃದ್ಧಿಸಿದ್ದು, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಮಕ್ಕಳು ಕುಟುಂಬದ ಭಾಗವಾಗಿದ್ದಾರೆ.
ಬಿಡುವಿಲ್ಲದ ಜೀವನದಲ್ಲಿ ಇಬ್ಬರಿಗೂ ತಾವಿನ್ನೂ ಮದುವೆಯಾಗಿಲ್ಲ ಎಂಬ ವಿಚಾರವೇ ಮರೆತು ಹೋಗಿದೆ. ಇಂದು ಇವರ ಮಕ್ಕಳಿಗೂ ಮಕ್ಕಳಾಗಿವೆ, ಅಂದರೆ ಸುಕುಮಾರ್ ಹಾಗೂ ರಾಜ್’ಪತಾ ದೇವಿ ಇಬ್ಬರೂ ಅಜ್ಜ- ಅಜ್ಜಿ ಆಗಿದ್ದಾರೆ.
ತಮ್ಮ ಜೀವನದ ಬಗ್ಗೆ ಮಾತನಾಡಿರುವ ಸುಕುಮಾರ್ ‘ತನ್ನ ಹಾಗೂ ರಾಜ್’ಪತಾ ನಡುವಿನ ಸಂಬಂಧ ಅದೆಷ್ಟು ಗಟ್ಟಿಯಾಗಿದೆ ಎಂದರೆ ಯಾವತ್ತೂ ನಮ್ಮ ಜೀವನದ ಹಾಗೂ ಸಮಾಜದಲ್ಲೆದುರಾದ ಸಮಸ್ಯೆಗಳು ನೆನಪಿಲ್ಲ’ ಎಂದಿದ್ದಾರೆ.
ಕೆಲ ತಿಂಗಳ ಹಿಂದೆ ಇಬ್ಬರೂ ತಮ್ಮ ಪರಿವಾರದೊಂದಿಗೆ ಕುಳಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಜ್’ಪತಾ ‘ಈಗ ನಮ್ಮ ಕುಟುಂಬ ಪೂರ್ಣವಾಗಿದೆ, ಜೀವನದ ಅಂತಿಮ ಹಂತದಲ್ಲಿದ್ದೇವೆ ಹೀಗಿರುವಾಗ ನಾವ್ಯಾಕೆ ಮದುವೆಯಾಗಿ ನಮ್ಮ ಪ್ರೀತಿಯನ್ನು ಸಮಾಜದೆದುರು ತೆರೆದಿಡಬಾರದು ಎಂದು ತಮ್ಮ ಮನದ ಮಾತನ್ನು’ ತಿಳಿಸಿದ್ದಾರೆ.
ಇದನ್ನು ಆಲಿಸಿದ ಮಕ್ಕಳು ತಾಯಿಯ ಇಚ್ಛೆಯನ್ನು ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದಾರೆ. ಮಕ್ಕಳೆಲ್ಲಾ ಸೇರಿ ತಂದೆ ಸುಕುಮಾರ್’ನನ್ನು ಜೀವನದ ಈ ಹಂತದಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪಿಸಿ, ಅದ್ಧೂರಿಯಾಗಿ ತಂದೆ ತಾಯಿಗೆ ಮದುವೆ ಮಾಡಿಸಿದ್ದಾರೆ. ಈ ಮದುವೆಯಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರೂ ಪಾಲ್ಗೊಂಡಿದ್ದರು.
ಇನ್ನು ಇವರಿಬ್ಬರ ಕುರಿತಾಗಿ ಮಾತನಾಡಿದ ಗ್ರಾಮಸ್ಥರು ‘ಇಬ್ಬರೂ ನಿಜವಾದ ಪ್ರೇಮಿಗಳು. ಇವರು ಜೀವನ ನಡೆಸಿದ ರೀತಿ ನೋಡಿದರೆ ಇವರಿಬ್ಬರಿಗೆ ಮದುವೆಯಾಗಿಲ್ಲ ಎಂಬುವುದು ಗೊತ್ತೇ ಆಗುತ್ತಿರಲಿಲ್ಲ. ನಿಜಕ್ಕೂ ಇವರ ಪ್ರೀತಿ ಎಲ್ಲಾ ಪ್ರೇಮಿಗಳಿಗೆ ಆದರ್ಶವಾಗಿದೆ’ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು. ಆದರೆ…
ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ…
ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ…
ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ 4ದಿನ ಮಳೆ ಕಾಟದಿಂದಾಗಿ ದಿನದಾಟ ಆರಂಭ ವಾಗಿಲ್ಲ ಈ ಪಂದ್ಯದಲ್ಲಿ ಜಯವನ್ನು ಸಾಧಿಸಲು ದಕ್ಷಿಣ ಆಫ್ರಿಕಾಕ್ಕೆ 122ರನ್ ಅಗತ್ಯ ಇದೆ.ಮಳೆಯಿಂದಾಗಿ ಭಾರತ ತಂಡಕ್ಕೆ ಜಯಗಳಿಸುವ ಅವಕಾಶವನ್ನು ಒದಗಿಸುತ್ತದೆ.ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ 202ರನ್ ಗಳಿಸಿತು.ದಕ್ಷಿಣ ಆಫ್ರಿಕಾ 229ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 266ರನ್ಗಳಿಸಿತು.ಭಾರತ ದಕ್ಷಿಣ ಆಫ್ರಿಕಾಕ್ಕೆ 240ಗುರಿ ನೀಡಿದೆ.ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 118/2 ಗಳಿಸಿದೆ
ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ಎಚ್ಚರಿಕೆ ನೀಡಿದೆ.ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್ಎಟಿಎಫ್ ಅಲ್ಲಿ…
ಈಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಗಲ್ಲಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯದ್ದೇ ಮಾತುಕತೆ. ಅಷ್ಟೇ ಅಲ್ಲದೇ ಯಾವ ಪಕ್ಷ ಗೆಲ್ಲುತ್ತೆ? ಯಾರು ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ?ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ ಎಂಬ ವಾದ ವಿವಾದಗಳು ಜೋರಾಗಿಯೇ ನಡೆಯುತ್ತಿವೆ. ಈಗ ಹಾಲಿ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ಪ್ರಧಾನಿ ರೇಸ್ ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರ ಎಂಬುದರ ಬಗ್ಗೆ ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು ಮತದಾರ ಪ್ರಭು ಏನು…