ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು.

ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ ಕೂಡ ರಷ್ಮಿಕಾರವರ ಹವಾ ಜೋರಾಗಿಯೇ ಇದೆ.

ಮಂದಣ್ಣ ನಟಿಸಿದ್ದ ತೆಲುಗಿನ ಗೀತಾ ಗೋವಿಂದಂ ಚಿತ್ರ ಭರ್ಜರಿಯಾಗಿ ಕೋಟಿ ಕೋಟಿ ಬಾಚುತ್ತಿದೆ. ಇದರ ಜೊತೆಗೆ ರಶ್ಮಿಕಾ ಅಭಿನಯದ ತೆಲುಗಿನ ಮೊದಲ ಸಿನಿಮಾ ‘ಛಲೋ’ ಅವರಿಗೆ ಸಾಕಷ್ಟು ಹೆಸರು ತಂದಿತು. ಆದರೆ ಇವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರ.
ಈ ಚಿತ್ರದ ಟೀಸರ್ ನೋಡಿ ಅದರಲ್ಲಿನ ರಷ್ಮಿಕಾ ಕಿಸ್ಸಿಂಗ್ ವಿಡಿಯೋದಿಂದ ಹಿಡಿದು ಹಲವು ಸೀನ್ ಗಳ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗರಮ್ ಆಗಿದ್ದರು.
ಇದರ ನಡುವೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ಕಾರಣದಿಂದಾಗಿ ಇಬ್ಬರೂ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಈಗ ಕಾರಣಾಂತರಗಳಿಂದ ಕಿರಿಕ್ ಪಾರ್ಟಿಯ ಕರ್ಣ ಮತ್ತು ಸಾನ್ವಿ ಪರಸ್ಪರ ದೂರವಾಗುತ್ತಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಷ್ಮಿಕಾ ಅಭಿನಯದ ‘ಗೀತ ಗೋವಿಂದಂ’ ಸಿನಿಮಾ ರಶ್ಮಿಕಾಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಇದರ ಬೆನ್ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಗುಸು-ಗುಸು ಆರಂಭವಾಗಿತ್ತು. ಇಬ್ಬರೂ ಬ್ರೇಕ್ ಆಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇದು ಸುಳ್ಳು ಎಂದೇ ಇಬ್ಬರೂ ಹೇಳಿಕೊಂಡಿದ್ದರು. ಆದರೆ, ಈಗ ಅದುವೇ ನಿಜವಾಗಿದೆ. ಎರಡು ಕುಟುಂಬಗಳು ಕುಳಿತು ಮಾತನಾಡಿ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
