ಯುವತಿಯೊಬ್ಬಳು ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ವೀಡಿಯೋವೊಂದು ನಗರದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ಚಲಾಯಿಸಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲಿಂದ ಮೊಬೈಲ‌್ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.
ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಇದು ಬೆಳಗಾವಿಯಲ್ಲಿಯೇ ನಡೆದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಯುವತಿಯು ನಗರದ ಚನ್ನಮ್ಮ ವೃತ್ತದಿಂದ ಕ್ಲಬ್ ರೋಡ್‍ಕಡೆ ಬಂದು ಅಲ್ಲಿಂದ ಒಬ್ಬಳೇ ಸ್ಕೂಟಿ ಚಲಾಯಿಸಿಕೊಂಡು ಹಿಂಡಲಗಾ ಕಡೆ ತೆರಳಿದ್ದಾಳೆ ಎನ್ನಲಾಗಿದ್ದು, ವಿಡಿಯೋ ಗಮನಿಸಿದರೆ, ಡ್ರಗ್ಸ್ ಅಮಲಿನಲ್ಲಿ ಬೆಟ್ಟಿಂಗ್ ಕಟ್ಟಿ ಯುವತಿ ಮತ್ತು ಗೆಳೆಯರ ಗುಂಪೊಂದು ಈ ರೀತಿ ವರ್ತಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯುವತಿ ನಗ್ನವಾಗಿ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ಕುರಿತಂತೆ ಪೋಲಿಸರು ತೀರ್ವವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ವಿವಿಧ ಪ್ರದೇಶದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಈ ವಿಡಿಯೋ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಪ್ರದೇಶದಲ್ಲಿ ನಡೆದ ವಿಡಿಯೋವನ್ನು ಬೆಳಗಾವಿಯಲ್ಲಿ ನಗರದಲ್ಲಿಯೇ ನಡೆದಿದೆ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆಯೋ ಎಂದು ಪೋಲಿಸರು ಪರೀಶೀಲನೆ ಮಾಡುತ್ತಿದ್ದಾರೆ.
ಕೆಲ ಸೆಕೆಂಡುಗಳ ಈ ವಿಡಿಯೊದಲ್ಲಿ ಮರಾಠಿ ಭಾಷೆಯ ಸಂಭಾಷಣೆ ಕೇಳುತ್ತಿದೆ. ಬೆಳಗಾವಿಯ ಯಾವ ದೃಶ್ಯವೂ ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ವೀಡಿಯೋ ಮಾಡಿದವರೂ ಯಾರು ಎನ್ನುವುದು ಪತ್ತೆಯಾಗಿಲ್ಲ. ಅದು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದಲ್ಲಿ ನಡೆದ ಘಟನೆ ಎಂದೂ ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಸದ್ಯ ವೀಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ದಾಖಲಿಸಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ ಕುಮಾರ ತಿಳಿಸಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು…
ಟೆಕ್ ವಲಯದಲ್ಲಿ ಭಾರೀ ಹೆಸರು ಮಾಡಿರುವ ‘ಆಸೂಸ್’ ಕಂಪನಿಯು ಇತ್ತೀಚಿಗೆ ವಿಶ್ವ ಮೊಬೈಲ್ ಮಾರುಕಟ್ಟೆಗೆ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಸಖತ್ ಸುದ್ದಿ ಮಾಡಿತ್ತು. ವಿಶೇಷ ಫ್ಲಿಪ್ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ಈಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಮುಂದಾಗಿದ್ದು, ಆದರೆ ದೇಶಿಯ ಮಾರುಕಟ್ಟೆಯಲ್ಲಿ ಅದರ ಹೆಸರು ಬದಲಾಗಲಿದೆ. ಅದಕ್ಕಾಗಿ ಬಿಡುಗಡೆಯ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿದೆ ಹೌದು, ಆಸೂಸ್ ಕಂಪನಿಯು ತನ್ನ ಹೊಸ ‘ಝೆನ್‌ಫೋನ್ 6’ ಸ್ಮಾರ್ಟ್‌ಫೋನ್…
ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಸಮ್ಮಾನ್’ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಅಂತಿಮ ದಿನವಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದ ರೈತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಈ ಯೋಜನೆಯನ್ವಯ ರೈತರಿಗೆ ಒಟ್ಟು ಮೂರು ಕಂತುಗಳಲ್ಲಿ 6000 ರೂ. ಸಹಾಯ ಧನ ನೀಡಲಾಗುತ್ತಿದ್ದು, ಫಲಾನುಭವಿಗಳು ನಾಡಕಚೇರಿ, ಅಟಲ್ ಜನ ಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಲಭ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ರೈತರ ಖಾತೆಗೆ ನೇರವಾಗಿ ಹಣ ಬರಲಿದ್ದು,…
ಅರಿಶಿನ ಬೆರೆತ ಹಾಲು ಭಾರತೀಯರಿಗೆ ಅಪರಿಚಿತವೇನಲ್ಲ. ಯಾವಾಗ ಶೀತ ಕೆಮ್ಮು ನೆಗಡಿ ಜ್ವರ ಬಂತೋ ನಮ್ಮ ಹಿರಿಯರು ಮೊದಲಾಗಿ ಅರಿಶಿನ ಪುಡಿ ಹಾಕಿ ಕುದಿಸಿದ ಹಾಲನ್ನು ಬಿಸಿಬಿಸಿಯಾಗಿ ಕುಡಿಸುತ್ತಿದ್ದರು. ಈ ಹಾಲು ನಮಗೆ ಔಷಧಿಯ ರೂಪದಲ್ಲಿ ಪರಿಚಿತವೇ ಹೊರತು ತೂಕ ಇಳಿಸುವ ಉಪಾಯದ ರೂಪದಲ್ಲಲ್ಲ! ನಮಗೆ ಕಾಣದ ಈ ಗುಣವನ್ನು ವಿದೇಶೀಯರು ಈಗಾಗಲೇ ಕಂಡುಕೊಂಡು ವ್ಯಾಪಾರ ಪ್ರಾರಂಭಿಸಿಬಿಟ್ಟಿದ್ದಾರೆ. ‘ಟರ್ಮರಿಕ್ ಲ್ಯಾಟೇ’ ಅಥವಾ “ಗೋಲ್ಡನ್ ಮಿಲ್ಕ್” ಎಂಬ ಅಂದ ಚೆಂದದ ಆಕರ್ಷಕ ಹೆಸರುಗಳನ್ನಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಚೆಂದದ ಹೆಸರಿಗೆ…
ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು. ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ…
ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….