ಸುದ್ದಿ

ಮೊಬೈಲ್ ನಂಬರ್ ಬದಲಿಸುವ ಮುನ್ನ ಹೆಚ್ಚರ!..ಈ ಸುದ್ದಿ ತಿಳಿದರೆ ನಡುಕ ಹುಟ್ಟಿಸುತ್ತಿದೆ!

76

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ.

ಹೌದು, ಅಶ್ರಫ್ ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕುಶಾಲನಗದ ಬ್ಯಾಂಕ್ ಒಂದರ ಖಾತೆಗೆ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದರು. ಇದಾದ ಕೆಲದಿನಗಳ ನಂತರ ಆ ಮೊಬೈಲ್ ನಂಬರ್ ಅನ್ನು ಬಳಸದೇ ಬಿಟ್ಟು, ಬೇರೊಂದು ಮೊಬೈಲ್ ನಂಬರ್ ಹೊಂದಿರುವ ಸಿಮ್ ಬಳಸಲು ಶುರು ಮಾಡಿದರು. ಹೀಗೆ ಮಾಡಿದಾಗ ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಮತ್ತೋರ್ವರಿಗೆ ನೀಡಿ ಟೆಲಿಕಾಂ ಸೇವಾ ಸಂಸ್ಥೆ ಕೈತೊಳೆದುಕೊಂಡಿದೆ. ಇದಾದ ನಂತರ ಅಶ್ರಫ್ ಅವರಿಗೆ ಸಮಸ್ಯೆಗಳು ಶುರುವಾಗಿವೆ. ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಟೆಲಿಕಾಂ ಕಂಪೆನಿಯು ದಾವಣಗೆರೆಯ ಭರತ್ ಎಂಬ ಮತ್ತೋರ್ವ ವ್ಯಕ್ತಿಗೆ ನೀಡಿದೆ.

ಈ ನಂಬರ್ ಅನ್ನು ಪಡೆದುಕೊಂಡಿರುವ ಭರತ್‌ ಹೊಸ ಸಿಮ್ ಹಾಕಿಕೊಂಡಾಗ ಆಶ್ರಫ್ ಬ್ಯಾಂಕಿಂಗ್ ಸಂದೇಶಗಳು ಮೊಬೈಲ್​ಗೆ ಬರುತ್ತಿದ್ದವು. ಇದನ್ನು ಬಳಸಿಕೊಂಡ ಭರತ್, ನಂತರ ಮೊಬೈಲ್​ಗೆ ಪೇಟಿಎಂ ವ್ಯಾಲೆಟ್ ಆಕ್ಟಿವ್ ಮಾಡಿಕೊಂಡಿದ್ದ. ಆಶ್ರಫ್ ಬ್ಯಾಂಕ್ ಖಾತೆ ದಕ್ಕೆ ಸಿಂಕ್ ಆಗಿತ್ತು. ಬಳಿಕ ಭರತ್ ಪೇಟಿಎಂ ವ್ಯಾಲೆಟ್​ನಿಂದ ತನ್ನ ಬ್ಯಾಂಕ್ ಖಾತೆಗೆ 4 ದಿನಗಳಲ್ಲಿ 79,994 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ.

ಇದರಿಂದ ಗಾಬರಿಗೊಂಡ ಆಶ್ರಫ್ ಅವರು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್ ಆಧಾರದ ಮೇಲೆ ಭರತ್​ನನ್ನು ಬಂಧಿಸಿದ್ದಾರೆ. ಆದರೆ, ಎಲ್ಲ ಪ್ರಕರಣದಲ್ಲೂ ಆರೋಪಿ ಹೀಗೆ ಸಿಕ್ಕಿಕೊಳ್ಳುವುದು ಕಷ್ಟವೇ ಸರಿ. ಹಾಗಾಗಿ, ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲಾ ಖಾತೆಗಳ ಬಗ್ಗೆ ಎಚ್ಚರ ವಹಿಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲ ಸಂಪರ್ಕವನ್ನು ಕಡಿತ ಮಾಡಿ ಬಳಿಕವೇ ಹೊಸ ಗ್ರಾಹಕನಿಗೆ ಮಾರಾಟ ಮಾಡಬೇಕು ಎಂಬ ಕಾನೂನನ್ನು ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಿಂಕ್ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಬ್ಯಾಂಕಿಂಗ್ ಸೇವೆಗೆ ಮೊಬೈಲ್ ನಂಬರ್ ಕಡ್ಡಾಯ.ಈ ಸೇವೆಗಳನ್ನು ಪಡೆಯುವಾಗ ಮೊಬೈಲ್​ಗೆ ಬರುವ ಒನ್ ಟೈಮ್ ಪಾಸ್​ವರ್ಡ್(ಒಟಿಪಿ) ಅತಿ ಮುಖ್ಯವಾಗಿರುತ್ತವೆ. ಇದರ ಮೇಲೆ ನೀವು ನಿಗಾ ವಹಿಸದೆ ಇದ್ದರೆ ಬ್ಯಾಂಕ್ ಖಾತೆ ಖಾಲಿ ಆಗಲಿದೆ. ಹಾಗಾಗಿ, ನೀವು ಎಚ್ಚರ.!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಆಂಜನೇಯಸ್ವಾಮಿ ಕೃಪೆಯಿಂದ ಈ ರಾಶಿಗಳಿಗೆ ರಾಜಯೋಗ ಕಟ್ಟಿಟ್ಟಬುತ್ತಿ..ನಿಮ್ಮ ರಾಶಿ ಇದೆಯಾ ನೋ

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ  ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ    ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ  ನುಡಿದಂತೆ ನಡೆಯುವುದು ಮೇಷ ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಕಾನೂನು

    ಬಿಪಿಎಲ್ ಪಡಿತರ ಚೀಟಿದಾರರಿಗೆ ಸಚಿವ ‘ಯು.ಟಿ.ಖಾದರ್’ ತಿಳಿಸಿರುವ ಸಿಹಿ ಸುದ್ದಿ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

  • ವಿಚಿತ್ರ ಆದರೂ ಸತ್ಯ

    ಈ ವ್ಯಕ್ತಿಗೆ ಬರೋಬ್ಬರಿ 19 ಸಲಿ ಸರ್ಜರಿ ಮಾಡಿದರು ಸರಿ ಆಗಿಲ್ಲ..! ಇತನ ವಿಚಿತ್ರ ಕಾಯಿಲೆ ಏನು ಗೊತ್ತಾ..?

    ಕಳೆದ ಕೆಲ ವರ್ಷಗಳಿಂದ ಎಪಿಡರ್ಮೋಡೈಸ್ ಪ್ಲಾಸಿಯಾ ವೆರುಸಿಫಾರ್ಮ್ (ಟ್ರೀ ಮ್ಯಾನ್ ರೋಗ) ಎಂಬ ವಿಚಿತ್ರವಾದ ಚರ್ಮದ ಕಾಯಿಲೆಗೆ ತುತ್ತಾಗಿ ಕೈಯ್ಯಾರೆ ಊಟ ಅಥವಾ ಬೇರೆ ಕೆಲಸ ಮಾಡಲು ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ 27 ವರ್ಷದ ಅಬುಲ್ ಬಜಂದಾರ್‌ಗೆ ಬರೋಬ್ಬರಿ 19 ಶಸ್ತ್ರ ಚಿಕಿತ್ಸೆ ಮಾಡಿದ್ರೂ ತೊಂದರೆ ನಿವಾರಣೆ ಆಗಿಲ್ಲ.

  • ಜ್ಯೋತಿಷ್ಯ

    ಗುರು ರಾಯರನ್ನು ನೆನೆಯುತ್ತಾ ಗುರುವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 24 ಜನವರಿ, 2019 ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ನೀವು…

  • ಸುದ್ದಿ

    “ನಮ್ಮದು ಮಾಟಮಂತ್ರ ಮಾಡೋ ಕುಟುಂಬ ಅಲ್ಲ, ನನಗಿನ್ನೂ ಹುಚ್ಚು ಹಿಡಿದಿಲ್ಲ” ; ಅಚ್ಚರಿಯ ಹೇಳಿಕೆ ಕೊಟ್ಟ ಕುಮಾರಸ್ವಾಮಿ….!

    ಮಾಟಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದೇ ಹಾಗಿದ್ದರೆ ಜನರ ಬಳಿ ಏಕೆ ಹೋಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಶ್ನಿಸಿದರು.ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಈ ಸದನವು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟಸಭೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸಿದ ಮುಖ್ಯಮಂತ್ರಿಗಳು, ನಮ್ಮ ಕುಟುಂಬ ಮಾಟಮಂತ್ರ ಮಾಡುವ ಕುಟುಂಬವಲ್ಲ ಎಂದು ಹೇಳಿದರು. ಆಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಗ್ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೀಡಿದ್ದ…

  • ಸುದ್ದಿ

    ನಮ್ಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು – ವೈರಲ್ ಫೋಟೋ ಹಿಂದಿನ ಸತ್ಯಾಂಶ…!

    ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ…