ಸೌಂದರ್ಯ

ಮೊಣಕೈ ಕಪ್ಪು ಕಲೆ ಹೋಗಲಾಡಿಸಲು ಏನು ಮಾಡಬೇಕು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

829

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ ಡ್ರೆಸ್ ತೊಟ್ಟಾಗ ಇದು ನಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಂತಾಗುತ್ತದೆ. ಅನೇಕರು ಇದೇ ಕಾರಣಕ್ಕೆ ಶಾರ್ಟ್ ಸ್ಕರ್ಟ್ ಹಾಕೋದಿಲ್ಲ. ಫುಲ್ ಸ್ಲೀವ್ ಇರುವ ಡ್ರೆಸ್ ಇಷ್ಟಪಡ್ತಾರೆ.

ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದೆ ಎನ್ನುವ ಕಾರಣಕ್ಕೆ ನೀವು ಮುಜುಗರಪಟ್ಟುಕೊಳ್ಳಬೇಕಾಗಿಲ್ಲ. ಮನೆ ಮದ್ದಿನ ಮೂಲಕ ಕೆಲವೇ ದಿನಗಳಲ್ಲಿ ಮೊಣಕೈ ಹಾಗೂ ಮೊಣಕಾಲಿನ ಸೌಂದರ್ಯವನ್ನು ನೀವು ಹೆಚ್ಚಿಸಿಕೊಳ್ಳಬಹುದು.

ಸೌತೆಕಾಯಿಯ 3-4 ಚೂರುಗಳನ್ನು ತೆಗೆದುಕೊಳ್ಳಿ. ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಾಕಿ 10-15 ನಿಮಿಷ ಸರಿಯಾಗಿ ಉಜ್ಜಿ. ಐದು ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆಯಿರಿ.

ನಂತ್ರ ಒಂದು ಪಾತ್ರೆಗೆ ಅಡುಗೆ ಸೋಡಾ ಹಾಕಿ. ಅದಕ್ಕೆ ಸ್ವಲ್ಪ ಹಾಲನ್ನು ಹಾಕಿ. ಇದನ್ನು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಗೆ ಹಾಕಿ ಮೃದುವಾಗಿ ಉಜ್ಜಿ. ಇದನ್ನು ತೊಳೆದ ನಂತ್ರ 2 ಚಮಚ ಈರುಳ್ಳಿ 2 ಚಮಚ ಲಿಂಬೆ ರಸ, ಅರ್ಧ ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಇದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ. ಇದನ್ನು ಮೂರು ನಾಲ್ಕು ದಿನ ಟ್ರೈ ಮಾಡಿ. ಸುಂದರ ಮೊಣಕೈ-ಮೊಣಕಾಲು ನಿಮ್ಮದಾಗಿಸಿಕೊಳ್ಳಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ನಿಮಿಷ್ಟದ ದೇವರನ್ನು ನೆನಯುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….

  • ಸುದ್ದಿ

    ಅ.17ರಿಂದ ಹಾಸನಾಂಬ ಜಾತ್ರೆ ; 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ….!

    ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್‌, ಅಪರ ಜಿಲ್ಲಾಧಿಕಾರಿ ನಾಗರಾಜ್‌, ತಹಸೀಲ್ದಾರ್‌…

  • ಆರೋಗ್ಯ, ಉಪಯುಕ್ತ ಮಾಹಿತಿ

    ಸೀಬೆಹಣ್ಣಿನಲ್ಲಿರುವ ಆರೋಗ್ಯದ ಗುಟ್ಟು ತಿಳಿದರೆ ನೀವು ಅಚ್ಚರಿ ಪಡುತ್ತೀರಿ! ಈ ಅರೋಗ್ಯ ಮಾಹಿತಿ ನೋಡಿ.

    ಸೀಬೆ ಹಣ್ಣು “ಬಡವರ ಸೇಬು” ಎಂದರೆ ಅತಿಶಯೋಕ್ತಿಯೇನಲ್ಲ. ಇದರಲ್ಲಿರುವ ಪೌಷ್ಟಿಕಾಂಶ ಗಳನ್ನು ಅವಲೋಕಿಸಿದಾಗ, ಸೇಬಿನ ಗುಣಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಹಣ್ಣಾಗಿದೆ. ಸೀಬೆ ಹಣ್ಣಿನ ತವರು ಅಮೆರಿಕ ಆದರೆ ಇದರ ಪ್ರಸ್ತುತ ಎಲ್ಲಾ ಕಡೆಗಳಲ್ಲೂ ಬೆಳೆಯಲಾಗುತ್ತದೆ. ಸೀಬೆ ಹಣ್ಣಿನ – ಬೇರು, ಎಲೆ, ಹೂವು, ಕಾಯಿ, ಹಣ್ಣು ಇವುಗಳೆಲ್ಲವೂ ಉಪಯುಕ್ತ ಭಾಗಗಳಾಗಿವೆ. ಪೋಷಕಾಂಶಗಳು(100 ಗ್ರಾಂ ಸೀಬೆಹಣ್ಣಿನಲ್ಲಿ ದೊರೆಯುವ ಪೌಷ್ಟಿಕಾಂಶಗಳು ಹೀಗಿವೆ) ತೇವಾಂಶ-85.3ಸಸಾರಜನಕ- 0.1 ಗ್ರಾಂಮೇದಸ್ಸು – 0.2 ಗ್ರಾಂಖನಿಜಾಂಶ – – 0.6 ಗ್ರಾಂಕಾರ್ಬೋಹೈಡ್ರೇಟ್ಸ್…

  • ಸುದ್ದಿ

    ರಾತ್ರಿ ಉಳಿದ ಅನ್ನ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ..!

    ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ. ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ…

  • ಹಣ ಕಾಸು

    ಈ ಗಿಡದ ಬಗ್ಗೆ ಈ 7 ವಿಷಯಗಳು, ನಿಮಗೆ ಗೊತ್ತಿದ್ರೆ, ನಿಮ್ಮ ಮನೆಗೆ ಒಳ್ಳೆಯದಾಗುತ್ತೆ!

    ಮನಿ ಪ್ಲಾಂಟ್ ಅನ್ನೊದು ಸಾಮಾನ್ಯವಾಗಿ ಮನೆಯಲ್ಲಿಡೋ ಒಂದು ಗಿಡ. ಇದನ್ನು ಬೆಳ್ಸೋದು ಅಷ್ಟೇನ್ ಕಷ್ಟ ಅಲ್ಲ ಬಿಡಿ. ದಿನನಿತ್ಯ ಅದರ ಕಡೇ ಸ್ವಲ್ಪ ಕಣ್ಣಾಯ್ಸಿ ನೋಡಿಕೊಳ್ಳಬೇಕು. ವಾಸ್ತು ಶಾಸ್ತ್ರ ಮತ್ತು ಚೀನಾದ ಪೆಂಗ್ ಶು ಪ್ರಕಾರ ಮನಿ ಪ್ಲಾಂಟ್ನಿಂದ ಮನೆಯಲ್ಲಿ ಅದ್ರಷ್ಟ ತಾನಾಗೇ ತಾನೇ ಬದ್ಲಾಗತ್ತೆ.

  • ದೇಶ-ವಿದೇಶ

    2018ರ ಮೊದಲ ದಿನದ ಯಾವ ದೇಶದಲ್ಲಿ ಎಷ್ಟು ಶಿಶುಗಳ ಜನನ..!ತಿಳಿಯಲು ಈ ಲೇಖನ ಓದಿ..

    2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.