ವಿಸ್ಮಯ ಜಗತ್ತು

ಮೊಟ್ಟೆಯೊಳಗೆ ಇನ್ನೊಂದು ಮೊಟ್ಟೆ..!ಇದು ಹೇಗೆ ಸಾಧ್ಯ ಅಂತೀರಾ…ಏನಿದು ವಿಸ್ಮಯ ಓದಿ ತಿಳಿಯಿರಿ…

157

ಸಾಮಾನ್ಯವಾಗಿ ಕೋಳಿ ಮೊಟ್ಟೆ ಒಂದೇ ಗಾತ್ರದಲ್ಲಿರುತ್ತವೆ. ಆದರೆ, ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್ ಲ್ಯಾಂಡ್‌ನ ಕೈನ್ಸ್‌ರ್‍ ಕೈರಿ ಎಂಬಲ್ಲಿನ ಫಾರಂ ಒಂದರಲ್ಲಿ ದೊರೆತ ಕೋಳಿ ಮೊಟ್ಟೆಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಮೂರು ಸಾವಿರ ಕೋಳಿಗಳುಳ್ಳ ಈ ಫಾರಂನಲ್ಲಿ ಎಂದಿನಂತೆ ಕೆಲಸಗಾರರು ಮೊಟ್ಟೆ ಸಂಗ್ರಹಿಸುತ್ತಿದ್ದಾಗ ಅಚ್ಚರಿಯೊಂದು ಕಾದಿತ್ತು.

 

ರೈತನೊಬ್ಬ ಪ್ರಕೃತಿ ವೈಚಿತ್ರ್ಯ ನೋಡಿ ಬೆರಗಾಗಿದ್ದಾನೆ. ಕೇರ್ನ್ಸ್ ನಲ್ಲಿರೋ ಸ್ಟಾಕ್ ಮ್ಯಾನ್ಸ್ ಎಗ್ ನಲ್ಲಿ ಆತ ಮೊಟ್ಟೆ ಸಂಗ್ರಹಿಸಲು ತೆರಳಿದ್ದ. ಅಲ್ಲಿ ಒಂದು ಮೊಟ್ಟೆ ಬೃಹದಾಕಾರದಲ್ಲಿತ್ತು. ಸಾಮಾನ್ಯ ಮೊಟ್ಟೆಗಿಂತ ಮೂರು ಪಟ್ಟು ದೊಡ್ಡದಾಗಿತ್ತು.  ಬರೋಬ್ಬರಿ ವಯಸ್ಕ ವ್ಯಕ್ತಿಯೊಬ್ಬ ತನ್ನ ಕೈ ಪೂರ್ತಿ ಹಿಡಿದು ಕೊಳ್ಳಬಹುದಾದಷ್ಟು ದೊಡ್ಡ ಗಾತ್ರದ ಮೊಟ್ಟೆ ಪತ್ತೆಯಾಗಿದೆ.

ಅದನ್ನು ಒಡೆದು ನೋಡಿದಾಗ ಮತ್ತೊಂದು ಅಚ್ಚರಿ ಕಾದಿತ್ತು. ಯಾಕಂದ್ರೆ ಮೊಟ್ಟೆಯೊಳಗೆ ಮತ್ತೊಂದು ಮೊಟ್ಟೆ. ಅದರೊಳಗೆ ಹಳದಿ ಬಣ್ಣದ ಲೋಳೆ ಇದ್ದುದಲ್ಲದೆ, ಇನ್ನೊಂದು ಮೊಟ್ಟೆಯೂ ಇದ್ದುದು ಪತ್ತೆಯಾಗಿದೆ.

ಇದನ್ನು ಫೇಸ್ಬುಕ್ ನಲ್ಲಿ ಆತ ಪೋಸ್ಟ್ ಮಾಡಿದ್ದಾನೆ. ಸಾಮಾನ್ಯವಾಗಿ ಮೊಟ್ಟೆ 58 ಗ್ರಾಂ ತೂಕವಿರುತ್ತದೆ. ಆದ್ರೆ ಈ ಮೊಟ್ಟೆ 176 ಗ್ರಾಂ ತೂಕವಿತ್ತು.1923ರಿಂದ್ಲೂ ಈ ಫಾರ್ಮ್ ಅಸ್ತಿತ್ವದಲ್ಲಿದೆ. ಇಷ್ಟು ದೊಡ್ಡ ಮೊಟ್ಟೆ ಸಿಕ್ಕಿರೋದು ಇದೇ ಮೊದಲು. ತಜ್ಞರು ಕೂಡ ಮೊಟ್ಟೆಯೊಳಗೊಂದು ಮೊಟ್ಟೆ ನೋಡಿ ಅಚ್ಚರಿಪಟ್ಟಿದ್ದಾರೆ. ಕೋಳಿ ಬಹಳ ಒತ್ತಡದಲ್ಲಿದ್ರೆ ಈ ರೀತಿ ಆಗುತ್ತದೆ ಅನ್ನೋದು ಅವರ ಅಭಿಪ್ರಾಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ