ರೆಸಿಪಿ

ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

354

ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

ಸಾಮಗ್ರಿಗಳು

ಚಿಕನ್‌ – 1 k.g

ಎಣ್ಣೆ – 1 ಕಪ್‌‌‌

ಕೊತ್ತಂಬರಿ ಸೊಪ್ಪು – 2 ಕಟ್ಟು

ಈರುಳ್ಳಿ – 4

ಏಲಕ್ಕಿ – 6

ಬಿರ್ಯಾನಿ ಎಲೆ – 6

ಲವಂಗ – 6

ಗೋಡಂಬಿ – 10

ತೆಂಗಿನ ಕಾಯಿ ಪೇಸ್ಟ್‌ – 1ಕಪ್

ಹಸಿಮೆಣಸಿನ ಕಾಯಿ – 5

ಮೊಸರು – 1/2 ಕಪ್‌‌‌

ಸೋಂಪು – 1 ಸ್ಪೂನ್

ಗಸಗಸೆ – 2 ಸ್ಪೂನ್.

ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ – 2 ಸ್ಪೂನ್.

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – 1 ಸ್ಪೂನ್.

ಮಾಡುವ ವಿಧಾನ

*ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕೋಳಿ ಮಾಂಸವನ್ನು 15 ನಿಮಿಷ ಉರಿದು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

*ಜಾರ್‌ಗೆ ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ತುರಿ, ಗೋಡಂಬಿ, ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಏಲಕ್ಕಿ, ಲವಂಗ , ಸೋಂಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

*ನಂತರ ರುಬ್ಬಿಕೊಂಡ ತೆಂಗಿನಕಾಯಿ, ಗೋಡಂಬಿ ಮಿಶ್ರಣ, ಮೊಸರು ಹಾಕಿ 5 ನಿಮಿಷ ಬೇಯಿಸಿ.

*ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಉರಿದಿಟ್ಟುಕೊಂಡ ಚಿಕನ್‌ , ಅರಿಶಿನ, ಹಾಕಿ ಬೆರೆಸಿ 15 ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ಮೈಸೂರು ಚಿಲ್ಲಿ ಚಿಕನ್ ರೆಡಿ.

ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು. ಇನ್ನು ಬಹಳಷ್ಟು ಮಂದಿ ಚಿಕನ್‌ ಅನ್ನು ಫ್ರೈ ಮಾಡುವುದಿಲ್ಲ. ಹೀಗೆ ಬಳಸಿದರೆ ಹಸಿ ವಾಸನೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಚಿಕನ್, ಮಟನ್ ಡಿಶ್‌ ಮಾಡುವ ಮುನ್ನ ಎಣ್ಣೆಯಲ್ಲಿ 15 ನಿಮಿಷ ಉರಿದುಕೊಂಡರೆ ಮತ್ತಷ್ಟು ರುಚಿ ಹೆಚ್ಚುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ