ರೆಸಿಪಿ

ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

363

ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

ಸಾಮಗ್ರಿಗಳು

ಚಿಕನ್‌ – 1 k.g

ಎಣ್ಣೆ – 1 ಕಪ್‌‌‌

ಕೊತ್ತಂಬರಿ ಸೊಪ್ಪು – 2 ಕಟ್ಟು

ಈರುಳ್ಳಿ – 4

ಏಲಕ್ಕಿ – 6

ಬಿರ್ಯಾನಿ ಎಲೆ – 6

ಲವಂಗ – 6

ಗೋಡಂಬಿ – 10

ತೆಂಗಿನ ಕಾಯಿ ಪೇಸ್ಟ್‌ – 1ಕಪ್

ಹಸಿಮೆಣಸಿನ ಕಾಯಿ – 5

ಮೊಸರು – 1/2 ಕಪ್‌‌‌

ಸೋಂಪು – 1 ಸ್ಪೂನ್

ಗಸಗಸೆ – 2 ಸ್ಪೂನ್.

ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ – 2 ಸ್ಪೂನ್.

ಉಪ್ಪು – ರುಚಿಗೆ ತಕ್ಕಷ್ಟು

ಅರಿಶಿನ – 1 ಸ್ಪೂನ್.

ಮಾಡುವ ವಿಧಾನ

*ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕೋಳಿ ಮಾಂಸವನ್ನು 15 ನಿಮಿಷ ಉರಿದು ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

*ಜಾರ್‌ಗೆ ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ತುರಿ, ಗೋಡಂಬಿ, ಗಸಗಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್‌ ಮಾಡಿಕೊಳ್ಳಿ.

*ಮತ್ತೊಂದು ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಏಲಕ್ಕಿ, ಲವಂಗ , ಸೋಂಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌‌ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಿಕೊಳ್ಳಿ.

*ನಂತರ ರುಬ್ಬಿಕೊಂಡ ತೆಂಗಿನಕಾಯಿ, ಗೋಡಂಬಿ ಮಿಶ್ರಣ, ಮೊಸರು ಹಾಕಿ 5 ನಿಮಿಷ ಬೇಯಿಸಿ.

*ಈ ಮಿಶ್ರಣಕ್ಕೆ ಎಣ್ಣೆಯಲ್ಲಿ ಉರಿದಿಟ್ಟುಕೊಂಡ ಚಿಕನ್‌ , ಅರಿಶಿನ, ಹಾಕಿ ಬೆರೆಸಿ 15 ನಿಮಿಷ ಬೇಯಿಸಿದರೆ ಬಾಯಲ್ಲಿ ನೀರೂರಿಸುವ ಮೈಸೂರು ಚಿಲ್ಲಿ ಚಿಕನ್ ರೆಡಿ.

ಇದನ್ನು ನೀವು ಅನ್ನ, ರೊಟ್ಟಿ, ದೋಸೆ , ಚಪಾತಿಯೊಂದಿಗೆ ತಿನ್ನಬಹುದು. ಇನ್ನು ಬಹಳಷ್ಟು ಮಂದಿ ಚಿಕನ್‌ ಅನ್ನು ಫ್ರೈ ಮಾಡುವುದಿಲ್ಲ. ಹೀಗೆ ಬಳಸಿದರೆ ಹಸಿ ವಾಸನೆ ಹೋಗುವುದಿಲ್ಲ. ಆದ್ದರಿಂದ ಯಾವುದೇ ಚಿಕನ್, ಮಟನ್ ಡಿಶ್‌ ಮಾಡುವ ಮುನ್ನ ಎಣ್ಣೆಯಲ್ಲಿ 15 ನಿಮಿಷ ಉರಿದುಕೊಂಡರೆ ಮತ್ತಷ್ಟು ರುಚಿ ಹೆಚ್ಚುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಲಕ್ಷ್ಮೀದೇವಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯವನ್ನು ನೋಡಿರಿ

      ಮೇಷ ರಾಶಿ ಭವಿಷ್ಯ (Friday, December 3, 2021) ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ವೆಚ್ಚಗಳ ಮೇಲೆ ಮಿತಿ ಹೇರಿ. ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ನಿಮ್ಮ ಯೋಜನೆಗಳ ಬಗ್ಗೆ ತುಂಬಾ ಮುಕ್ತತೆ ಹೊಂದಿದ್ದಲ್ಲಿ ನೀವು…

  • ಉಪಯುಕ್ತ ಮಾಹಿತಿ

    ಅಪ್ಪಿ ತಪ್ಪಿಯೂ ಇಂತಹ ಸಮಯದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ..!

    ಇನ್ನೇನು ಬೇಸಿಗೆ ಶುರುವಾಯಿತು. ಇಂತಹ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿ, ಫ್ರೆಶ್ ಆಗಿ ಇಟ್ಕೋಬೇಕು. ಇದಕ್ಕಾಗಿ ಕಲ್ಲಂಗಡಿ ಹಣ್ಣಿಗಿಂತ ಉತ್ತಮವಾದದ್ದು ಇನ್ಯಾವುದಿದೆ ಹೇಳಿ? ಕಲ್ಲಂಗಡಿ ಹಣ್ಣು ಟೇಸ್ಟಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿರುವವರಿಗೆ ಕಲ್ಲಂಗಡಿ ಬೆಸ್ಟ್. ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಸೇವನೆಯಿಂದ ಪ್ರಯೋಜನ ಮತ್ತು ಪರಿಹಾರವಿದೆ. ಕ್ಯಾಲೋರಿ ಬಗ್ಗೆ ಭಯ ಬೇಡ. ಕಲ್ಲಂಗಡಿಯಲ್ಲಿ ಶೇ.94ರಷ್ಟು ನೀರಿನ ಅಂಶವಿದೆ. ಲೈಕೋಪೀನ್, ಪೊಟ್ಯಾಶಿಯಂ ಸೇರಿದಂತೆ ಹಲವು ಬಗೆಯ…

  • nation

    400 ಶಾಲಾ ಮಕ್ಕಳ ಪ್ರಾಣ ಉಳಿಸಲು,10ಕೆಜಿ ಬಾಂಬ್ ಎತ್ತುಕೊಂಡು 1ಕಿಮೀ ಓಡಿದ, ಈ ಪೇದೆ ರಿಯಲ್ ಸಿಂಗಂ!ಈ ಲೇಖನಿ ಓದಿ ಶಾಕ್ ಆಗ್ತೀರಾ..!

    ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

  • ಉಪಯುಕ್ತ ಮಾಹಿತಿ

    ಮಾರ್ಚ್ ಬಂತು.ಪರೀಕ್ಷೆ ಭಯವೇ..?ಭಯ ಬೇಡ?ಈ ಕ್ರಮಗಳನ್ನು ಅನುಸರಿಸಿ ಎಕ್ಸಾಮ್ ಭಯದಿಂದ ದೂರವಿರಿ…

    ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಮಕ್ಕಳಿಗೆ ಟೆನ್ಷನ್ ಶುರು…. ಮಕ್ಕಳಿಗೆ ಪರೀಕ್ಷೆಯ ಟೆನ್ಷನ್ ಆದರೆ ಪಾಲಕರಿಗೆ ಮಕ್ಕಳು ಪರೀಕ್ಷೆ ಹೇಗೆ ಬರೆಯುತ್ತಾರೆಂಬ ಟೆನ್ಷನ್. ನೆನಪಿಡಿ ಟೆನ್ಷನ್ ಮಾಡಿಕೊಂಡಷ್ಟು ವಸ್ತು ವಿಷಯಗಳು ಅಸ್ಪಷ್ಟವಾಗುತ್ತಾ ಹೋಗುತ್ತವೆ. ಮಕ್ಕಳು ಹಾಗೂ ಪೋಷಕರು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಿದರೆ ಪರೀಕ್ಷೆ ಗಳನ್ನೂ ಎಂಜಾಯ್ ಮಾಡಬಹುದು.

  • ಸುದ್ದಿ

    ಹುತಾತ್ಮ ಯೋಧನ ಪತ್ನಿಗೆ ರಕ್ಷಾಬಂಧನ ಹಬ್ಬಕ್ಕೆ ಗ್ರಾಮಸ್ಥರಿಂದ 11 ಲಕ್ಷದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ…!

    ಭೋಪಾಲ್, ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ.ಹೌದು. ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹುತಾತ್ಮ ಯೋಧ ಹವಾಲ್ದಾರ್ ಮೋಹನ್ ಸಿಂಗ್ ಕುಟುಂಬಕ್ಕೆ ಗ್ರಾಮಸ್ಥರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮನೆಯನ್ನು ಯೋಧನ ಪತ್ನಿ ರಾಜು ಬಾಯಿ ಅವರಿಗೆ ಗ್ರಾಮಸ್ಥರು ರಕ್ಷಾಬಂಧನ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು…

  • ದೇವರು

    ‘ಉಗ್ರ ಹನುಮಂತ’ಚಿತ್ರದ ಹಿಂದಿರುವ ರೋಚಕ ಸ್ಟೋರಿ ಗೊತ್ತಾ ನಿಮ್ಗೆ!ಈ ಚಿತ್ರ ಹೇಗೆ ಬಂತು ಗೊತ್ತಾ?

    ಯುವ ಜನರಿಗೆ ಟ್ಯಾಟೂ, ಹಚ್ಚೆಗಳು ಅಂದ್ರೆ ಸ್ವಲ್ಪ ಹೆಚ್ಚೇ ಹುಚ್ಚಿದೆ. ವಾಹನಗಳ ಮೇಲೆ ವಿಭಿನ್ನವಾದ ಸ್ಟಿಕ್ಕರ್ಗಳು ಪ್ರಯೋಗಿಸುವ ಬಗ್ಗೆಯೂ ಆಸಕ್ತಿ ಇರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಾರು ಮತ್ತು ಬೈಕ್ಗಳ ಮೇಲೆ ಉಗ್ರ ಸ್ವರೂಪಿ ಆಂಜನೇಯನ ಚಿತ್ರ ರಾರಾಜಿಸುತ್ತಿದೆ. ರಾಜ್ಯದ ಸಾಕಷ್ಟು ಕಡೆಗಳಲ್ಲಿ ಈ ಭಜರಂಗಿ ಓಡಾಡುತ್ತಿದ್ದಾನೆ.