ಬೆಳ್ಳಂಬೆಳಗ್ಗೆ ಮೆಡಿಸಿನ್ ತಯಾರಿಕಾ ಘಟಕದ ರಿಯಾಕ್ಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿದ್ದ ಬೇಳೂರು ಬಾಯರ್ ಮೆಡಿಸಿನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಸೋರಿಕೆಯಾಗಿ ಸ್ಫೋಟಗೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಮೆಡಿಸಿನ್ ಫ್ಯಾಕ್ಟರಿಯ ಬಾಯ್ಲರ್ನ ತಾಪಮಾನದಲ್ಲಿ ಏರುಪೇರಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ ಫ್ಯಾಕ್ಟರಿಯ ಛಾವಣಿ ಕಿತ್ತು ಹೋಗಿದ್ದು, ಅವಶೇಷಗಳು ಗ್ರಾಮದ ಸುತ್ತಮುತ್ತಲ ಮನೆಗಳ ಮೇಲೆ ಬಿದ್ದಿದೆ. ಇದರಿಂದ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ.
ಬಾಯ್ಲರ್ ನಿಂದ ವಿಷಾನಿಲ ಸೋರಿಕೆಯಾಗಿ ಸುತ್ತಮುತ್ತಲ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಹಾಗೆಯೇ ಘಟನೆಯಿಂದ ಸುಮಾರು ಮೂರು ಕಿಮೀ ದೂರದಷ್ಟು ಸ್ಫೋಟದ ತೀವ್ರತೆಗೆ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಶಾಸಕ ಜ್ಯೋತಿಗಣೇಶ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಆಗಮಿಸಿದ್ದಾರೆ.ಅವಘಡ ಸಂಭವಿಸುವ ವೇಳೆ ಫ್ಯಾಕ್ಟರಿಯಲ್ಲಿ ಯಾವ ಸಿಬ್ಬಂದಿಯೂ ಇರಲಿಲ್ಲ. ಬೆಳಗ್ಗಿನ ಸಮಯವಾಗಿದ್ದರಿಂದ ತಿಂಡಿಗೆ ಸಿಬ್ಬಂದಿ ತೆರಳಿದ್ದರು. ಹೀಗಾಗಿ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಅಲ್ಲದೆ ಈ ಹಿಂದೆ ಕೂಡ ಈ ರೀತಿ ಬಾಯ್ಲರ್ ಸ್ಫೋಟಗೊಂಡಿತ್ತು. ಆಗ ಕೂಡ ವಿಷಾನಿಲ ಸೋರಿಕೆಯಾಗಿ ಗ್ರಾಮಸ್ಥರು ಉಸಿರಾಡಲು ಕಷ್ಟಪಟ್ಟಿದ್ದರು. ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಈ ಭಾಗದ ಸುತ್ತಮುತ್ತ ವಾಸಿಸುತ್ತಿರುವ ಜನರು ತೊಂದರೆ ಅನುಭವಿಸುವಂತಗಿದೆ. ಅನಾರೋಗ್ಯದಿಂದ ಬಳಲುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಸದ್ಯ ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೇಗೆ ಸ್ಫೋಟ ಸಂಭವಿಸಿತು ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 call/ whatsapp/ mail raghavendrastrology@gmail.com ಮೇಷ:– ನೀವು ಸ್ವಲ್ಪ…
ಬ್ರಿಟೀಷರ ಅಟ್ಟಹಾಸ ತಾರಕಕ್ಕೇರಿದಾಗ, ಭಾರತವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡಿಸಲು ಜನಿಸಿದ ಶಾಂತಿ ಪ್ರವರ್ತಕ ಮಹಾತ್ಮಾ ಗಾಂಧಿ. ಗುಜರಾತ್ ನ ಪೋರ್ ಬಂದರ್ ನಲ್ಲಿ ಅಕ್ಟೋಬರ್ 2, 1869 ರಂದು ಮೋಹನ್ ದಾಸ್ ಕರಮ್ ಚಂದ್ ಗಾಂಧಿಯಾಗಿ ಜನಿಸಿ, ವಿದೇಶದಲ್ಲಿ ಕಾನೂನು ಪದವಿ ಪಡೆದು ದಕ್ಷಿಣ ಭಾರತದಲ್ಲೇ ಹೋರಾಟ ಆರಂಭಿಸಿ ಭಾರತಕ್ಕೆ ಬಂದರು.
ಭಾರತದ ಸ್ಪೈಡರ್ ಮ್ಯಾನ್ ಎಂದೇ ಹೆಸರುಗಳಿಸಿರುವ ಚಿತ್ರದುರ್ಗದ ಕೋತಿರಾಜು ಅಲಿಯಾಸ್ ಜೋತಿರಾಜು ಬಗ್ಗೆ ನಿಮಗೆ ಗೊತ್ತೇ? ನೀವು ಚಿತ್ರದುರ್ಗದ ಕೋಟೆಗೆ ಭೇಟಿ ನೀಡಿದ್ದರೆ ನೀವು ಇವರ ಸಾಹಸಮಯ ಆಟಗಳನ್ನು ನೋಡಿರಬಹುದು, ಇವರು ನೂರಾರು ಅಡಿ ಎತ್ತರದ ಗೋಡೆಗಳನ್ನು ಯಾವ ಸಹಾಯವಿಲ್ಲದೆಯೇ ಮೇಲೇರುತ್ತಾರೆ!
ಹಲವಾರು ನಟರು ತಮ್ಮನ್ನು ಇಷ್ಟಪಡುವ ಅಭಿಮಾನಿಗಳ ಕಷ್ಟಕ್ಕೂ ಕೂಡ ಸ್ಪಂದಿಸುತ್ತಾರೆ.ತಮ್ಮ ಕೈ ಲಾದ ಸಹಾಯವನ್ನು ಕೂಡ ಮಾಡುತ್ತಾರೆ.ಇಂತಹ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.ನಟ ಕಿಚ್ಚ ಸುದೀಪ್ ಅವರು ಸಹಾಯ ಕೇಳಿದವರಿಗೆ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಾರೆ. ಈಗ ಸುದೀಪ್ ಅವರು ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಅರೆ ಇದೇನಿದು ಸುದೀಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದು, ಅದರಲ್ಲಿ ವಿಶೇಷ ಅಭಿಮಾನಿ ಎಂದರೆ ಏನು ಎಂದು ನೀವು ಕೇಳಬಹುದು. ಆದರೆ ಇಲ್ಲಿನ ವಿಶೇಷ…
ಅನ್ನಧಾನಕ್ಕಿಂತ ಮಿಗಿಲಾದ ಧಾನ ಯಾವುದು ಇಲ್ಲ. ಹಸಿದು ಬಂದವರಿಗೆ ಒಂದು ಹೊತ್ತು ಊಟ ಹಾಕಿದರೆ ಸಾವಿರ ಜನ್ಮದ ಪುಣ್ಯ ಸಿಗುತ್ತದೆ. ಹೌದು ಮನುಷ್ಯನಿಗೆ ಎಷ್ಟೇ ಹಣವನ್ನು ಕೊಟ್ಟರು ಆತನಿಗೆ ತೃಪ್ತಿ ಅನ್ನುವುದೇ ಇರುವುದಿಲ್ಲ. ಹಸಿದು ಬಂದವರಿಗೆ ಹೊಟ್ಟೆ ತುಂಬಾ ಅನ್ನ ಹಾಕಿದರೆ ಯಾವುದೇ ಮನುಷ್ಯ ಕೂಡ ತೃಪ್ತಿಯಾಗುತ್ತಾನೆ. ನಮ್ಮ ದೇಶದಲ್ಲಿ ಇರುವ ಹಲವು ಪುಣ್ಯಕ್ಷೇತ್ರಗಳಲ್ಲಿ ಪ್ರಖ್ಯಾತಿ ಹೊಂದಿರುವ ನಮ್ಮ ಕರ್ನಾಟಕದ ಶ್ರೀ ಕ್ಷೆತ್ರ ಧರ್ಮಸ್ಥಳ ಎಂದು ಹೇಳಬಹುದು. ಸುಮಾರು ನಾಲ್ಕು ನೂರಕ್ಕೂ ಹೆಚ್ಚು ವರ್ಷಗಳಿಂದ ಧರ್ಮಸ್ಥಳದಲ್ಲಿ ನೆಲೆಸೇರುವ…
ದೇಶಾದ್ಯಂತಒಂದೇ ಮಾದರಿಯ ಡಿಎಲ್ ಹಾಗೂಆರ್ಸಿ ಕಾರ್ಡ್ಗಳನ್ನುವಿತರಿಸಲು ಕೇಂದ್ರ ರಸ್ತೆ ಸಾರಿಗೆಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂಆರ್ಸಿ ಕಾರ್ಡ್ಗಳುಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳು ಎಟಿಎಂ ಕಾರ್ಡ್ಗಳು ಕೆಲಸ ನಿರ್ವಹಿಸುವರೀತಿಯಲ್ಲೇ ಕಾರ್ಯ ನಿರ್ವಹಿಸಲಿವೆ. ಈಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ, ಆಗಸ್ಟ್ 1 ರಿಂದ ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ.ಹಳೆಯ ವಾಹನಗಳ ಮಾಲೀಕರು ನವೀಕರಣಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ಕಾರ್ಡ್ ಕ್ಯೂಆರ್ ಕೋಡ್ ಹಾಗೂಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಸಂಬಂಧಿಸಿದ ವಿವರಗಳನ್ನು,ಸುಲಭವಾಗಿ ಮತ್ತು…