News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
ಸುದ್ದಿ

ಮೃತ ಅಪ್ಪನಿಗೆ ಮಸೇಜ್ ಮಾಡುತ್ತಿದ್ದಳು, 4 ವರ್ಷದ ನಂತರ ಬಂತು ರಿಪ್ಲೈ..! ತಂದೆ ಮಗಳ ಕರುಣಾಜನಕ ಕಥೆ….

34

ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್​ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರ​​​ನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು. ಅಮೆರಿಕಾದ ಅರ್ಕನ್ಸಾಸ್​ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್​ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.

ಅಂದಿನಿಂದಲೂ ಇಂದಿನವರೆಗೆ ಸತತವಾಗಿ ತನ್ನ ತಂದೆಯ ಹಳೆಯ ಮೊಬೈಲ್​ ನಂಬರ್​ಗೆ ಮೆಸೇಜ್ ಮಾಡುತ್ತಲೇ ಇದ್ದಳು. ತನ್ನ ದೈನಂದಿನ ಬದುಕಿನ ಬಗ್ಗೆ, ತಾನು ಪದವಿ ಗಳಿಸಿದ ಬಗ್ಗೆ, ಹಾಗೆಯೇ ಕ್ಯಾನ್ಸರ್​ ಗೆದ್ದು ಬದುಕು ನೂಕುತ್ತಿರುವ ಬಗ್ಗೆ ಮೆಸೇಜ್​ನಲ್ಲಿ ಹೇಳುತ್ತಾ ಅತ್ಯಂತ ಭಾವುಕ ಪತ್ರವೆನ್ನುವಂತೆ ತನ್ನ ತಂದೆಯೊಂದಿಗೆ ಏಕಮುಖಿ ಸಂವಹನ ನಡೆಸುತ್ತಿದ್ದಳು. ಆಕೆಯ ತಂದೆ ತೀರಿ ಹೋಗಿ ನಾಲ್ಕು ವರ್ಷ ಸಂದಿದ್ದವು. ಈ ಬಗ್ಗೆ ತೀವ್ರ ಭಾವುಕಳಾಗಿ ಒಂದು ಸಂದೇಶವನ್ನು ಕಳುಹಿಸಿದ್ದಳು.

‘ಹಲೋ ಡ್ಯಾಡ್, ಇದು ನಾನು, ನಾಳೆ ಮತ್ತೊಂದು ಭೀಕರ ದಿನದ ನೆನಪನ್ನು ನೆನಪಿಸಿಕೊಳ್ಳುವ ದಿನ, ನೀನು ನಮ್ಮನ್ನು ಅಗಲಿ ನಾಳೆಗೆ ನಾಲ್ಕು ವರ್ಷವಾಯ್ತು, ಈ ನಾಲ್ಕು ವರ್ಷ ಅನ್ನೋ ಪುಟ್ಟ ಸಮಯದಲ್ಲಿ ಬದುಕಿನಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಈಗಾಗಲೇ ನಾನು ಹಲವು ಬಾರಿ ಹೇಳಿದಂತೆ ಗ್ರಾಜುಯೇಷನ್ ಮುಗಿಸಿದ್ದೇನೆ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದೇನೆ. ಪ್ರೀತಿಯಲ್ಲಿ ಬಿದ್ದು ಹೃದಯವನ್ನು ಘಾಸಿ ಮಾಡಿಕೊಂಡಿದ್ದೇನೆ. ಆದ್ರೆ ಎಲ್ಲದಕ್ಕೂ ಎದೆಗೊಟ್ಟು ನಿಂತು ಗಟ್ಟಿ ಮಹಿಳೆಯಾಗಿ ಪರಿವರ್ತಿತಗೊಂಡಿದ್ದೇನೆ. ಕ್ಷಮಿಸು ನಿನಗೆ ನನ್ನ ಅತ್ಯವಶ್ಯಕತೆಯಿದ್ದಾಗ ನಾನು ನಿನ್ನ ಜೊತೆ ಇರಲಿಲ್ಲ. ಒಂದು ದಿನ ನಾವು ಜೊತೆಗೆ ಇರಲಿದ್ದೇವೆ ನನ್ನ ಸರದಿ ಬರೋವರೆಗೂ ಈ ಬದುಕಿನ ಆಟವನ್ನು ನೋಡಬೇಕಿದೆ ’

ಒಂದು ದೀರ್ಘವಾದ ಪತ್ರವನ್ನ ಚಾಸ್ತಿತ್ಯ ಬರೆದು ಒಂದು ನಿಟ್ಟುಸಿರು ಬಿಟ್ಟು, ಸಣ್ಣದಾಗಿ ಬಿಕ್ಕಳಿಸಿದ್ದಳೇನೋ..ಕೆಲವೇ ಗಂಟೆಗಳಲ್ಲಿ ಅದೇ ನಂಬರ್​ನಿಂದ ಒಂದು ರಿಪ್ಲೈ ಬಂದದ್ದು ಚಾಸ್ತಿತ್ಯಳನ್ನ ಅಚ್ಚರಿಗೆ ನೂಕಿತ್ತು. ಈ ಕಡೆ ತಂದೆಯನ್ನು ಕಳೆದುಕೊಂಡ ಹತಭಾಗ್ಯಳಾದ ಚಾಸ್ತಿತ್ಯ​ ಮೆಸೇಜ್ ಮಾಡಿದ್ದರೇ. ಆ ಕಡೆಯಿಂದ ಮಗಳನ್ನು ಕಳೆದುಕೊಂಡ ತಂದೆಯ ಹೃದಯವೊಂದು ಚಾಸ್ತಿತ್ಯ​ಳ ದೀರ್ಘ ಸಂದೇಶಕ್ಕೆ ಅಷ್ಟೇ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ರು.

‘ಹಲೋ ಸ್ವೀಟ್ ಹಾರ್ಟ್​, ನಾನುನಿನ್ನ ತಂದೆಯಲ್ಲ, ಆದ್ರೆ ಕಳೆದ ನಾಲ್ಕುವರ್ಷಗಳಿಂದ ನಿನ್ನಿಂದ ನಾನು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ.ನನ್ನ ಹೆಸರು ಬ್ರಾಡ್​, ಆಗಸ್ಟ್​2014ರಲ್ಲಿ ಕಾರ್​ ಅಪಘಾತದಲ್ಲಿ ನಾನುನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹತಾಶಗೊಂಡಿದ್ದನನ್ನನ್ನು ನಿನ್ನ ಸಂದೇಶಗಳು ಜೀವಂತವಾಗಿಟ್ಟಿವೆ.ಈ ನಾಲ್ಕು ವರ್ಷಗಳಲ್ಲಿನಿನ್ನೆಲ್ಲ ಏಳುಬೀಳುಗಳನ್ನು ನಾನು ನೋಡಿದ್ದೇನೆ. ಅನೇಕಬಾರಿ ನಿನಗೆ ಪ್ರತಿಕ್ರಿಯೆ ನೀಡಬೇಕುಅಂದುಕೊಂಡಿದ್ದೆ. ಆದ್ರೆ ನಿನ್ನ ಹೃದಯಚೂರಾದೀತು ಅಂತ ಆ ಧೈರ್ಯಮಾಡಲಿಲ್ಲ. ನೀನು ಅಸಾಮಾನ್ಯ ಯುವತಿಮಗು.

ನನ್ನ ಮಗಳು ಕೂಡನಿನ್ನಂತೆಯೇ ಇರಬೇಕು ಅಂತ ಬಯಸಿದ್ದೆ.ನಿನ್ನ ಪ್ರತಿದಿನದ ಸಮಾಚಾರಗಳಿಗೆ ಧನ್ಯವಾದ. ನನ್ನ ಮಗಳನ್ನು ಕಿತ್ತುಕೊಂಡದೇವರದ್ದು ತಪ್ಪಲ್ಲ ಅನ್ನೋ ಮನವರಿಕೆಮಾಡಿಕೊಟ್ಟಿದ್ದೀಯಾ. ದೇವರು ನಿನ್ನ ರೂಪದಲ್ಲಿನನಗೆ ನನ್ನ ಪುಟ್ಟ ದೇವತೆಯನ್ನುವಾಪಸ್ ನೀಡಿದ್ದಾನೆ. ಎಲ್ಲವೂ ಸರಿಯಾಗಲಿದೆ. ನಿನ್ನಬಗ್ಗೆ ಹೆಮ್ಮೆಯಿದೆ ನನಗೆ, ನಾಳೆಯೂ ನಿನ್ನಸಂದೇಶಗಳಿಗಾಗಿ ಕಾಯುವೇ ಅಂತ ಮೆಸೇಜ್ಮಾಡಿದ್ದಾರೆ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ