ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಶಿಂಧೆ ಎಂಬವರು ಕೆಲಸಕ್ಕಾಗಿ ತೆರಳುವಾಗ ರೈಲು ನಿಂತಿದ್ದನ್ನು ಗಮನಿಸಿದ್ದಾರೆ. ರೈಲಿನ ಚಾಲಕ ಕೆಳಗಿಳಿದು ಬಂದು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಸೋನು ಶಿಂಧೇ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.
ಯಾವುದೇ ತಾಂತ್ರಿಕ ವೈಫಲ್ಯ ಅಥವಾ ಕೆಂಪು ಸಿಗ್ನಲ್ ನೋಡಿ ರೈಲನ್ನು ನಿಲ್ಲಿಸಲಿಲ್ಲ. ನಾನು ಕೆಲಸಕ್ಕೆ ಹೋಗುವಾಗ ರೈಲು ಎರಡು ನಿಲ್ದಾಣದ ನಡುವೆ ನಿಂತಿತ್ತು. ಆಗ ಚಾಲಕ ರೈಲಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಹಾಗಾಗಿ ನಾನು ಅವರ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದೇನೆ ಎಂದು ಸೋನು ಶಿಂಧೇ ಹೇಳಿದ್ದಾರೆ.
ವೈರಲ್ ಫೋಟೋ ಹಾಗೂ ವಿಡಿಯೋಗಳು ಕೇಂದ್ರ ರೈಲ್ವೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಯಶ್ ಕುಟುಂಬಕ್ಕೆ ಅಂಬಿ ಆತ್ಮೀಯರು.ದರ್ಶನ್ ಪುನೀತ್ ಹಾಗೂ ಸುದೀಪ್ ಅಂತೆ ಅವರು ಸಹ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಅಂಬಿ ನಿಧನವಾದ ಆಗಲಂತೂ ಆಸ್ಪತ್ರೆಯಿಂದ ಹಿಡಿದು ಅಂತ್ಯಸಂಸ್ಕಾರದ ವಿಧಿವಿಧಾನಗಳು ಎಲ್ಲವೂ ಪೂರ್ಣಗೊಳ್ಳುವವರೆಗೂ ಯಶ್ ಅಂಬಿಗ್ ಕುಟುಂಬದ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ರಾಧಿಕ ಶ್ರೀಮಂತ ಸಮಾರಂಭದಲ್ಲಿ ಸುಮಲತಾ ಹಾಗೂ ಅಂಬರೀಶ್ ಪಾಲ್ಗೊಂಡಿದ್ದರು. ಆದರೆ ಆಗ ಅವರು ರಾಧಿಕಾಗೆ ಏನು ಬಿಡುಗಡೆ ನೀಡಿರಲಿಲ್ಲ. ಆದರೆ ಅಂಬರೀಶ್ ಕೆಲವು ತಿಂಗಳುಗಳ ಹಿಂದೆ ಒಂದು ತೊಟ್ಟಿಲನ್ನು ಬುಕ್ ಮಾಡಿದ್ದರಂತೆ. ಈ ವಿಷಯ ಅಂಬರೀಶ್…
ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದೆ. ಈ ಚಿತ್ರ ಕನ್ನಡ, ಹಿಂದಿ, ತೆಲುಗು,ತಮಿಳು ಮತ್ತು ಮಲೆಯಳಂ ಭಾಷೆಗಳಲ್ಲಿ ಬಿಡುಗಡೆ ಗೊಳ್ಳಲಿದೆ. ಸದ್ಯ ಈ ಚಿತ್ರದ ಟ್ರೇಲರ್ ಎಲಾ ಭಾಷೆಗಳಲ್ಲೂ ಸಂಚಲನ ಸೃಷ್ಟಿಸಿದೆ. ಹಿಂದಿ ಆವೃತ್ತಿಯಲ್ಲಿ ಶಾರುಕ್ ಖಾನ್ ಅಭಿನಯದ ಝೀರೋ ಚಿತ್ರವನ್ನೇ ಹಿಂದಿಕ್ಕಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿತ್ತು. ಹೀಗೆ ಎಲ್ಲಾ ಭಾಷೆಯಲ್ಲೂ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಇತರೆ ಫಿಲ್ಮ್…
20 ವರ್ಷದ ಯುವತಿಯನ್ನು ಸಾರ್ವಜನಿಕವಾಗಿ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ಭೋಗಲ್ ಪ್ರದೇಶದಲ್ಲಿ ನಡೆದಿದೆ.ಈ ಘಟನೆ ಭೋಗಲ್ ಬಸ್ ನಿಲ್ದಾಣದ ಬಳಿ ನಡೆದಿದೆ. ಆರೋಪಿಯನ್ನು ಮುನಾಸೀರ್ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ದೆಹಲಿ ಪೊಲೀಸರು ಆರೋಪಿ ಮತ್ತು ಮೃತ ಯುವತಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಮೊದಲಿಗೆ ಮೃತ ಯುವತಿಯ ಬಳಿ ಬಂದು ಮಾತನಾಡುತ್ತಿದ್ದನು. ಆದರೆ…
ಚಂದನವನದ ರೆಬೆಲ್, ಕಲಿಯುಗದ ಕರ್ಣ ಅಂಬರೀಶ್ ರವರಿಗೆ ಭಾರತೀಯ ಚಿತ್ರರಂಗ ಸೇರಿದಂತೆ, ರಾಜಕ್ಕಿಯ ನಾಯಕರು ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.ಅಷ್ಟಲ್ಲದೇ ಕನ್ನಡ ಚಿತ್ರರಂಗದ ಪುನಿತ್, ಯಶ್, ಶಿವಣ್ಣ, ಸುದೀಪ್, ಉಪೇಂದ್ರ ದರ್ಶನ್ ಸೇರಿದಂತೆ ಎಲ್ಲಾ ಟಾಪ್ ಸ್ಟಾರ್ ಗಳು ಅಂತಿಮ ದರ್ಶನ ಮಾಡಿದ್ದಾರೆ. ಇದರ ಜೊತೆಗೆ ರಜನಿಕಾಂತ್ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಶರತ್ ಕುಮಾರ್ ಇನ್ನೂ ಹಲವಾರು ಗಣ್ಯ ಮಿತ್ರರು ಅವರ ಅಗಲಿಕೆಗೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದ್ದಾರೆ. ಇದರ ನಡುವೆ ಮಾಜಿ…
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಯಾವುದೇ ಆ್ಯಪ್ ಬೇಕಾದರೂ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ಆದರೆ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಎಲ್ಲ ಆ್ಯಪ್‌ಗಳು ಉಚಿತವಲ್ಲ. ಕೆಲವೊಂದು ಆ್ಯಪ್‌ಗಳಿಗೆ ನಾವು ಹಣ ಪಾವತಿಸಬೇಕಾಗುತ್ತದೆ. ಕೆಲವೊಂದು ಆ್ಯಪ್‌ಗಳ ಆರಂಭಿಕ ಸೇವೆಗಳು ಉಚಿತವಾಗಿದ್ದರೂ, ಪ್ರೀಮಿಯಂ ಸೇವೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವುದು ಅನಿವಾರ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವುದಾದರೂ ಆ್ಯಪ್ ಅನ್ನು ಖರೀದಿಸಿದ್ದರೆ ಮತ್ತು ಹಣ ಪಾವತಿಸಿದ್ದರೆ, ಅದನ್ನು ಮರಳಿ ಪಡೆಯುವುದು ಹೇಗೆ ಎಂದು ಇಲ್ಲಿವಿವರಿಸಲಾಗಿದೆ. ಜತೆಗೆ ಕೆಲವೊಂದು ಆ್ಯಪ್‌ಗಳು ಟ್ರಯಲ್ ಲಭ್ಯವಿದ್ದರೂ, ಅಚಾನಕ್…
ಜಮ್ಮು-ಕಾಶ್ಮಿರದ ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಉಗ್ರರನ್ನು ಹತ್ಯೆ ಮಾಡಿದ ಬಳಿಕ ಯೋಧರು ಅವರ ಬಳಿ ಇದ್ದ ಮೂರು ಎಕೆ ಸರಣಿ ರೈಫಲ್‍ಗಳನ್ನು ವಶಪಡೆಸಿಕೊಂಡಿದ್ದಾರೆ. ಸದ್ಯ ಭದ್ರತಾ ಪಡೆಗಳು ಉಳಿದ ಉಗ್ರರನ್ನು ಹುಡುಕಿ ಎನ್‍ಕೌಂಟರ್ ಮಾಡಲು ಮುಂದಾಗಿದ್ದಾರೆ. ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು(ಎಸ್‍ಪಿಒ) ಪುಲ್ವಾಮ ಪೊಲೀಸ್ ಲೈನ್‍ಗಳಿಂದ ತಮ್ಮ ಸೇವಾ ರೈಫಲ್‍ಗಳೊಂದಿಗೆ ಕಾಣೆಯಾಗಿದ್ದಾರೆ. ಇಬ್ಬರು ಅಧಿಕಾರಿಗಳ ಹುಡುಕಾಡುವ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಕಾಣೆಯಾದ ಪ್ರಕರಣ ಪುಲ್ವಾಮದಲ್ಲಿನ ಎನ್‍ಕೌಂಟರ್ ಗೆ ಸಂಬಂಧಿಸಿದ್ದೀಯಾ ಎಂಬುದು…