bank, ಬ್ಯಾಂಕ್, ಸಾಲ, ಹಣ

ಮುದ್ರಾ ಯೋಜನೆ ಬಗ್ಗೆ ತಿಳಿಯಿರಿ, ಸ್ವಯಂ ಉದ್ಯೋಗಿಗಳಾಗಿ

51090

ಯಾರುಬೇಕಾದ್ರು ಈ ಸಾಲ ಪಡೆಯಬಹುದು ಆದರೆ ಈ ನಿಯಮ ಪಾಲಿಸಬೇಕು.

ಪ್ರಧಾನಿಮಂತ್ರಿಯವರು `ಮುದ್ರಾ ಯೋಜನೆ’ ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿಸ್ತಾ ಇದ್ದೀವಿ. ಇಂಥಾ ಯೋಜನೆಗಳು ಅರ್ಹರಿಗೆ ತಲುಪಲೇ ಬೇಕು ಅಂತಾದ್ರೆ ನಾವು ನೀವು ಎಲ್ಲರೂ.., ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕು..! ಫ್ರೆಂಡ್ಸ್, ಸರಿ.., ಯೋಜನೆ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡ್ತಾ ಇದ್ದೀವಿ..ಪ್ರತಿಯೊಬ್ಬರಿಗೂ ಈ ಮಾಹಿತಿ ಮುಟ್ಟಿಸುವ ಕೆಲಸವನ್ನು ನೀವು ಮಾಡೇ ಮಾಡ್ತೀರ ಅನ್ನೋ ನಂಬಿಕೆ ನಮಗಿದೆ.

ಏನಿದು `ಮುದ್ರಾ ಯೋಜನೆ’..?

ಸ್ವ ಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರೋರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಈ ಸಾಲ ನೀಡೋ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.

1. ಶಿಶು ಸಾಲ : 50,000 ರೂವರೆಗಿನ ಸಾಲವನ್ನು ಶಿಶು ಸಾಲ ಅಂತಾರೆ.

2. ಕಿಶೋರ ಸಾಲ : 50,000 ರೂಪಾಯಿಗಳಿಗಿಂತ ಮೇಲ್ಪಟ್ಟು 5ಲಕ್ಷ ರೂಪಾಯಿಗಳ ತನಕದ ಸಾಲವನ್ನು `ಕಿಶೋರ’ ಸಾಲವೆಂದು ಕರೀತಾರೆ.

3. ತುರುಣ್ ಸಾಲ : 5ಲಕ್ಷ ದಿಂದ 10 ಲಕ್ಷದವರೆಗಿನ ಸಾಲವನ್ನು ತರುಣ್ ಸಾಲ ಅಂತಾರೆ.

ಫಲಾನುಭವಿಯ ಅರ್ಹತೆ
ಪ್ರಧಾನಮಂತ್ರಿ ಮುದ್ರಾಯೋಜನೆಯಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿಯೇತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಕನಿಷ್ಟ 50 ಸಾವಿರದಿಂದ 10 ಲಕ್ಷ ರೂ ವರೆಗೆ ಸಾಲ ನೀಡಲಾಗುತ್ತಿದೆ. ಮೊದಲೇ ಹೇಳಿದಂತೆ ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್ಗಳೂ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ.

ಪ್ರಕ್ರಿಯೆ ಏನು..?
ಶಿಶು ಸಾಲವೇ., ಕಿಶೋರ್ ಸಾಲವೇ ಅಥವಾ ತರುಣ್ ಸಾಲವೇ ಎಂದು ನೋಡಲಾಗುತ್ತದೆ. ಅಂದರೆ ಫಲಾನುಭವಿಗೆ ಎಷ್ಟು ಸಾಲಬೇಕು..? ಅವನು ಮಾಡಹೊರಟಿರುವ ಉದ್ಯೋಗವೇನು ಅಂತ ತಿಳಿದು ಅದಕ್ಕನುಗುಣವಾಗಿ ಸಾಲವನ್ನು ನೀಡುವ ಪ್ರಕ್ರಿಯೆ ಶುರುವಾಗುತ್ತೆ.
ಫಲಾನಿಭವಿಯು ತನ್ನ ಹತ್ತಿರದ ಬ್ಯಾಂಕ್ ಅನ್ನು ಸಂಪರ್ಕಿಸಿ ಅಲ್ಲಿಂದ ಮುದ್ರಾ ಸಾಲಯೋಜನೆಯ ಅಡಿಯಲ್ಲಿ ಸಾಲ ಪಡೆಯ ತಕ್ಕದ್ದು.

ಪುರಾವೆ ಗುರುತೇನು(ಪ್ರೂಫ್ ಆಫ್ ಐಡೆಂಟಿಟಿ) :
* ಸೆಲ್ಫ್ ಅಟೆಸ್ಟೆಡ್ (ಸ್ವಯಂ ಸಹೀಕೃತ) ಚುನಾವಣ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ ಆಗಬಹುದು.

* ವಾಸಸ್ಥಳ ಪುರಾವೆಗಾಗಿ , ಇತ್ತೀಚಿನ ಟೆಲಿಫೋನ್ ಬಿಲ್ ಅಥವಾ ಎಲೆಕ್ಟ್ರಿಸಿಟಿ ಬಿಲ್, ಕಂದಾಯ ರಶೀದಿ( ಎರಡು ತಿಂಗಳಿಗಿಂತ ಹಳೆಯದಾಗಿರಬಾರದು) ಅಥವಾ ಚುನಾವಣ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ವಸತಿ ಪ್ರಮಾಣ ಪತ್ರ ಅಥವಾ ಸ್ಥಳೀಯ ಅಧಿಕಾರಿಯಿಂದ ಕೊಡಲಾದ ಯಾವುದೇ ಗುರುತಿನ ಪತ್ರ

* ಅರ್ಜಿದಾರನ ಇತ್ತೀಚಿಗಿನ ಭಾವಚಿತ್ರ

* ಕೊಂಡುಕೊಳ್ಳುವ ಯಂತ್ರೋಪಕರಣಗಳು ಅಥವಾ ವಸ್ತುವಿನ ಕೊಟೇಷನ್

* ಸರಬರಾಜುದಾರರ ಹೆಸರು ಮತ್ತು ವಿವರ
* ವ್ಯಾಪಾರ ಉದ್ಯಮದ ವಿಳಾಸ ( ಸಂಬಂಧಿಸಿದ ಪರವಾನಿಗೆ ಪತ್ರ)
* ವರ್ಗ ಅಥವಾ ಕೆಟಗರಿ ಪುರಾವೆ (ಪ್ರೂಫ್)
ಮುದ್ರಾ ಒಂದು ಬ್ಯಾಂಕ್ ಅಲ್ಲ :
ಇದನ್ನು ನೆನಪಿನಲ್ಲಿಟ್ಟುಕೊಳ್ಳಿ, ಕರ್ನಾಟಕ ಬ್ಯಾಂಕ್, ಎಸ್.ಬಿ.ಎಮ್. ಇವೇ ಮೊದಲಾದ ಬ್ಯಾಂಕ್ ಗಳ ರೀತಿಯಲ್ಲಿ ಮುದ್ರಾ ಅನ್ನೋದು ಪ್ರತ್ಯೇಕ ಬ್ಯಾಂಕ್ ಅಲ್ಲ. ಈ ಮುದ್ರಾ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು ಮೊದಲೇ ಹೇಳಿದಂತೆ ಸ್ಥಳೀಯ ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು.

ಮುದ್ರಾ ಕಾರ್ಡ್ :


ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಮಂಜೂರಾದ ನಂತರ ಅಭ್ಯರ್ಥಿ `ಮುದ್ರಾ ಕಾರ್ಡ್’ ಅನ್ನು ಪಡೆಯುತ್ತಾರೆ. ಈ ಕಾರ್ಡ್ ಕ್ರೆಡಿಟ್ ಕಾರ್ಡ್ ರೀತಿಯದ್ದಾಗಿದೆ. ಈ ಕಾರ್ಡ್ ಮೂಲಕ ಅಭ್ಯರ್ಥಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತ ಕಚ್ಚಾ ಸಾಮಗ್ರಿಗಳನ್ನು ಪಡೆಬಹುದು. ಆದರೆ ಇದರ ಮಿತಿ ಸಾಲದ ಶೇಕಡ 10ರಷ್ಟು..! ಅಂದರೆ ಹೆಚ್ಚೆಂದರೆ 10000 ಮಾತ್ರ.

ಮುದ್ರಾಯೋಜನೆ ಲಾಭವನ್ನು ಪಡೆಯಿರಿ.. ಸಾಧ್ಯವಾದಷ್ಟು ಸ್ವಯಂ ಉದ್ಯೋಗಿಗಳಾಗಿ..ಇನ್ನೂ ಮಾಹಿತಿ ಬೇಕು ಅಂತಾದ್ರೆ ನಿಮ್ಮ ಸ್ಥಳೀಯ ಬ್ಯಾಂಕ್ ಗಳಿಗೆ ಭೇಟಿ ಕೊಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬಿಸಿಬಿಸಿ ಕಾಫಿ ಕುಡಿಯಿರಿ:ʼತೂಕʼ ಇಳಿಸಿಕೊಳ್ಳಿ…..!

    ಬಿಸಿ ಬಿಸಿ ಕಾಫಿ ಹೀರುವುದರಿಂದ ಮನಸ್ಸು ಉಲ್ಲಾಸಿತವಾಗಿ ರಿಲ್ಯಾಕ್ಸ್‌ ಅನಿಸುತ್ತದೆ. ಒತ್ತಡ ಕಡಿಮೆ ಮಾಡಿ ಫ್ರೆಶ್‌ನೆಸ್‌ ನೀಡುವ ಈ ಪೇಯದ ಹೊಸ ಆರೋಗ್ಯ ಪ್ರಯೋಜನವೊಂದು ಬೆಳಕಿಗೆ ಬಂದಿದೆ.ಹೊಸ ಅಧ್ಯಯನವೊಂದು ಕಾಫಿ ಸೇವನೆಯಿಂದ ದೇಹ ತೂಕವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದೆ. ನಮ್ಮ ದೇಹದಲ್ಲಿರುವ ಬ್ರೌನ್‌ ಫ್ಯಾಟ್‌ ಅನ್ನು ಪರೋಕ್ಷ ಅಥವಾ ನೇರವಾಗಿ ಸಕ್ರಿಯಗೊಳಿಸುವ ಅಂಶಗಳು ಕಾಫಿಯಲ್ಲಿದೆ ಎಂದು ಹೇಳಿರುವ ಈ ಅಧ್ಯಯನ, ಬಿಳಿ ಕೊಬ್ಬು ಕ್ಯಾಲೋರಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದರೆ, ಕಂದು ಕೊಬ್ಬು ಕೊಬ್ಬನ್ನು ಕರಗಿಸಿ…

  • ಜ್ಯೋತಿಷ್ಯ

    ತಾಯಿ ಚಾಮುಂಡಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

    ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…

  • ಉಪಯುಕ್ತ ಮಾಹಿತಿ

    ಮೊದಲ ರಾತ್ರಿ ವಧು ತನ್ನ ಗಂಡನಿಗೆ ಕೇಸರಿಯುಕ್ತ ಬಾದಾಮಿ ಹಾಲು ಕೊಡುವುದೇಕೆ ಗೊತ್ತಾ..?

    ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ? ಇದು ಕೇವಲ ಒಂದು ಪದ್ಧತಿಯಲ್ಲ. ಇದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ. ಹಿಂದು ಧರ್ಮದಲ್ಲಿ ಹಾಲು, ಕೇಸರಿ ಹಾಗೂ ಬಾದಾಮಿಗೆ ಬಹಳ ಮಹತ್ವವಿದೆ. ಹಾಗಾಗಿ ಮದುವೆಯ ಮೊದಲ ರಾತ್ರಿ ವಧು ಕೇಸರಿ, ಬಾದಾಮಿಯುಕ್ತ ಹಾಲನ್ನು ವರನಿಗೆ ನೀಡ್ತಾಳೆ….

  • ತಂತ್ರಜ್ಞಾನ

    ಕಂಪನಿಗಳಲ್ಲಿ ನಿರುದ್ಯೋಗಿಗಳ ಇಂಟರ್ವ್ಯೂ ಪಡೆಯುತ್ತೆ ಈ ರೋಬೋಟ್..!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ರಷ್ಯಾದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ರೋಬೋಟ್ ಒಂದನ್ನು ತಯಾರಿಸಿದೆ. ಈ ರೋಬೋಟ್ ಉದ್ಯೋಗವರಸಿ ಬರುವ ನಿರುದ್ಯೋಗಿಗಳ ಸಂದರ್ಶನ ಪಡೆಯಲಿದೆ. ಪ್ರಮುಖ ಕಂಪನಿಗಳು ಸೇರಿ ಸುಮಾರು 300 ಕಂಪನಿಗಳು ಈ ರೋಬೋಟ್ ಮೂಲಕ ಇಂಟರ್ವ್ಯೂ ಮಾಡಿಸ್ತಿವೆ. ಪೆಪ್ಸಿ, ಲೋರಿಯಲ್ ಸೇರಿದಂತೆ ಪ್ರಮುಖ ಕಂಪನಿಗಳಿಗೆ ಕೆಲಸಕ್ಕೆ ಸೇರಲು ನೀವು ನಿರ್ಧರಿಸಿದ್ದರೆ ನಿಮಗೆ ರೋಬೋಟ್ ವೇರಾ ಕರೆ ಮಾಡಬಹುದು. ಇಲ್ಲವೆ ವಿಡಿಯೋ ಕಾಲ್ ಮೂಲಕ ನಿಮಗೆ ಪ್ರಶ್ನೆಗಳನ್ನು ಕೇಳಬಹುದು. ಸೇಂಟ್ ಪೀಟರ್ಸ್ಬರ್ಗ್ ನ ಸ್ಟ್ರಾಫೇರಿ ಸಂಸ್ಥೆ ಈ ರೋಬೋಟ್ ಸಿದ್ಧಪಡಿಸಿದೆ….

  • ಆಯುರ್ವೇದ

    ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ

    ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.