ಜನರಿಗೆ ಮನರಂಜನೆಯ ಮಟ್ಟವನ್ನು ಹೆಚ್ಚಿಸಲು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನ ಮಾಡುತ್ತಿರುವ ಬಿಗ್ಗ್ ಬಾಸ್ ಯಶಸ್ವಿ ಕೂಡ ಆಗ್ತಿದ್ದಾರೆ ಅಂತ ಹೇಳಬಹುದು..ಬಿಗ್ ಬಾಸ್ ಕನ್ನಡ ಸೀಸನ್ 5ರ ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ಫೂಲ್ ಮಾಡಿದ್ದಾರೆ.
ಸುದೀಪ್ ಶಾಕ್ ಕೊಟ್ಟಿದ್ದಾರೆ.ಗಾರ್ಡನ್ ಏರಿಯಾ ದಲ್ಲಿ ಕಾಣಿಸಿಕೊಂಡಿರುವ ಕಿಚ್ಚ.. ಮನೆಯ ಸದಸ್ಯರ ಮುಂದೆ ಟಿ ವಿ ಪರದೆಯಲ್ಲಿ ಬಂದಿದ್ದೇ ತಡ ಮನೆಯ ಸದಸ್ಯರು ದಂಗಾಗಿದ್ದಾರೆ.. ಅತಿ ಹೆಚ್ಚು ಖುಷಿ ಪಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5ರ ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ಫೂಲ್ ಮಾಡಿದ್ದಾರೆ. ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಇವತ್ತು ಕಿಚನ್ ಟೈಮ್ ಕಾರ್ಯಕ್ರಮ ನಡೆಯಬೇಕಿತ್ತು ಆದರೆ ಸ್ವಲ್ಪ ಡಿಫರೆಂಟಾಗಿ ಇರಲಿ ಎಂದು ಕಿಚನ್ ಟೈಮ್ ಮಾದರಿಯಲ್ಲಿಯೇ ಬಿಗ್ ಬಾಸ್ ಮನೆಯೊಳಗೇ ಅಡುಗೆ ಮಾಡಲು ಮನೆಯೊಳಕ್ಕೆ ಹೋಗಿದ್ದರು. ಸುದೀಪ್ ಜೊತೆ ಚಂದನ್, ಭಟ್ಕಳ್,ಕಾರಿಯಪ್ಪ ಮನೆಯೊಳಕ್ಕೆ ಮುಖವಾಡವನ್ನು ಧರಿಸಿ ಮಾರು ವೇಷದಲ್ಲಿ ಹೋಗಿದ್ದರಿಂದ ಮನೆಗೆ ಬಂದಿರುವುದು ಸುದೀಪ್ ಅವರೇ ಎಂದು ಅಲ್ಲಿನ ಯಾವುದೇ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.
ಒಂದು ಕಡೆ ಮಾಸ್ಕ್ ದರಿಸಿದ್ದ ಸುದೀಪ್ ತಮ್ಮ ಕೈಯ್ಯಾರೆ ಅಡುಗೆ ಮಾಡುತ್ತಿದ್ದರೆ ಮತ್ತೊಂದು ಕಡೆ ಸ್ಪರ್ಧಿಗಳು ಹಾಡು, ಡ್ಯಾನ್ಸ್ ಸೇರಿ ತಮ್ಮ ತಮ್ಮ ಪ್ರತಿಭೆಗಳ ಮೂಲಕ ಮನೋರಂಜನೆ ನೀಡಿದರು. ನಂತರ ಕಿಚ್ಚ ಮಾಡಿದ ಅಡುಗೆಯನ್ನು ಸವಿದು ಕುಣಿದು ಕುಪ್ಪಳಿಸಿದರು. ಅಡುಗೆ ಮಾಡಿದ್ದು ಸುದೀಪ್ ಅವರೇ ಎಂದು ಯಾರಿಗೂ ಕಂಡುಹಿಡಿಯಲು ಆಗಲಿಲ್ಲ. ಕೊನೆಯಲ್ಲಿ ಮನೆಯಿಂದ ಹೊರಗೆ ಸುದೀಪ್ ಸೇರಿ ಅವರೊಂದಿಗೆ ಹೋಗಿದ್ದ ಚಂದನ್, ಭಟ್ಕಳ್,ಕಾರಿಯಪ್ಪ ಹೊರ ಬಂದರು.
ಆದರೆ ಕೇವಲ ಟಿವಿಯಲ್ಲಿ ಮಾತ್ರ ನೋಡುವ ಭಾಗ್ಯ ಸ್ಪರ್ಧಿಗಳಿಗೆ ಲಭಿಸಿತು. ತಮಗೆ ಅಡುಗೆ ಮಾಡಿಕೊಟ್ಟಿದ್ದು ಸುದೀಪ್ ಎಂದು ತಿಳಿದ ಸ್ಪರ್ಧಿಗಳು ಥ್ರಿಲ್ ಆಗಿ ಕುಣಿದು ಕುಪ್ಪಳಿಸಿದರು. ಮತ್ತೆ ಮನೆಯೊಳಕ್ಕೆ ಬನ್ನಿ ಎಂದು ಎಲ್ಲರು ಕೇಳಿಕೊಂಡರು ಆದರೆ ಅದು ಸಾಧ್ಯವಾಗಲಿಲ್ಲ..ಸ್ಪರ್ಧಿಗಳೆಲ್ಲಾ ಎಂಥಾ ಅವಕಾಶವನ್ನು ಕೈಚೆಲ್ಲಿದೆವು ಎಂದು ನಿರಾಸೆಗೊಂಡರು.ಪ್ರತಿ ವೀಕೆಂಡ್ ನಲ್ಲಿ ಟಿ ಆರ್ ಪಿ ಯಲ್ಲಿ ಕಿಂಗ್ ಎನಿಸಿಕೊಳ್ಳುತ್ತಿರುವ ಬಿಗ್ಗ್ ಬಾಸ್ ಗೆ ಈ ಸಂಚಿಕೆ ಕೂಡ ಒಂದು ಉದಾಹರಣೆಯಾಗಲಿದೆ..
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು, ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ. ಭಾರತದ ಉದ್ದಗಲಕ್ಕೂ ಪ್ರತಿಯೊಂದು ದೇವರುಗಳ ದೇವಸ್ಥಾನಗಳು, ಪೂಜಾ ಮಂದಿರಗಳು ನಮಗೆ ಸಿಗುತ್ತವೆ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇವರು ಸೃಷ್ಟಿ, ಸ್ಥಿತಿ, ಲಯ
ಕರ್ತರಾಗಿದ್ದು, ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ.ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.
ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ. ಪರಿಸರದ…
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…
ಕುಲ ಕುಲವೆಂದು ಬಡಿದಾಡುವ ಈ ದಿನದಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲದೇವರು ಒಂದೇ ಎಂದು ತಿಳಿದು ಅಯ್ಯಪ್ಪ ಮಾಲೆ ಧರಿಸಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಸ್ಮರಣೆ ಮಾಡುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳ ಪೂರೈಸಿ ಶಬರಿಗೆ ಹೋಗುವಾಗ ಅರಣ್ಯದ ಮಧ್ಯದಲ್ಲಿಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಳ್ಳುತ್ತಾರೆ. ಅಡವಿಯಲ್ಲಿಹೋಗುವಾಗ ಕಾಡು ಪ್ರಾಣಿಗಳಿಂದ ರಕ್ಷಣೆಗೆ ಬಾಬರ…