ಉಪಯುಕ್ತ ಮಾಹಿತಿ

ಮಾರ್ಚ್ ಬಂತು.ಪರೀಕ್ಷೆ ಭಯವೇ..?ಭಯ ಬೇಡ?ಈ ಕ್ರಮಗಳನ್ನು ಅನುಸರಿಸಿ ಎಕ್ಸಾಮ್ ಭಯದಿಂದ ದೂರವಿರಿ…

1252

ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ಮಕ್ಕಳಿಗೆ ಟೆನ್ಷನ್ ಶುರು…. ಮಕ್ಕಳಿಗೆ ಪರೀಕ್ಷೆಯ ಟೆನ್ಷನ್ ಆದರೆ ಪಾಲಕರಿಗೆ ಮಕ್ಕಳು ಪರೀಕ್ಷೆ ಹೇಗೆ ಬರೆಯುತ್ತಾರೆಂಬ ಟೆನ್ಷನ್. ನೆನಪಿಡಿ ಟೆನ್ಷನ್ ಮಾಡಿಕೊಂಡಷ್ಟು ವಸ್ತು ವಿಷಯಗಳು ಅಸ್ಪಷ್ಟವಾಗುತ್ತಾ ಹೋಗುತ್ತವೆ. ಮಕ್ಕಳು ಹಾಗೂ ಪೋಷಕರು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಿದರೆ ಪರೀಕ್ಷೆ ಗಳನ್ನೂ ಎಂಜಾಯ್ ಮಾಡಬಹುದು.

ಈ ಕ್ರಮಗಳನ್ನು ಅನುಸರಿಸಿ, ಪರಿಕ್ಷೆ ಭಯದಿಂದ ದೂರವಿರಿ…

  • ಮೊಟ್ಟಮೊದಲನೇಯದಾಗಿ ಪೋಷಕರೇ ನಿಮ್ಮ ಮಕ್ಕಳ ಪರೀಕ್ಷೆಗಳ ಬಗ್ಗೆ ಆತಂಕ ಪಡಬೇಡಿ. ನಿಮ್ಮ ಆತಂಕ ನಿಮ್ಮ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ಹುಟ್ಟಿಸಬಹುದು.
  • ನಿಮ್ಮ ದೈನಂದಿನ ಜೀವನದಲ್ಲಿ ಮಕ್ಕಳಿಗೋಸ್ಕರ ಒಂದು ಗಂಟೆ ಸಮಯ ಮೀಸಲಿಡಿ. ಅವರ ಜೊತೆಯಲ್ಲಿ ಕುಳಿತು ಪರೀಕ್ಷೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಿ, ಸಾಧ್ಯವಾದಲ್ಲಿ ಹೇಳಿಕೊಡಿ. ಹಾಗೆಯೇ ಪರೀಕ್ಷೆಯ ಬಳಿಕ ಅದರಲ್ಲಿ ಬಿಟ್ಟುಹೋದ ಪ್ರಶ್ನೆಗಳ ಬಗ್ಗೆ ಚರ್ಚಿಸಬೇಡಿ.

  • ದೈನಂದಿನ ಚಟುವಟಿಕೆಗಳಾದ ನಿದ್ದೆ, ಆಟ ಆಡುವುದು, ಟಿವಿ ನೋಡುವುದು, ಸ್ನೇಹಿತರೊಂದಿಗಿನ ಹರಟೆ ಯಾವುದೂ ಬೇಡ ಎನ್ನಬೇಡಿ. ಆವಾಗಲೇ ಪರೀಕ್ಷೆಯ ಬಗೆಗಿನ ಆತಂಕ ನಿವಾರಣೆಯಾಗುವುದು. ಆದರೆ ಸಾಧ್ಯವಾದಷ್ಟು ಪರೀಕ್ಷೆಗಳು ಮುಗಿಯುವವರೆಗೂ ಹೊರಗಿನ ತಿಂಡಿ ತಿನಿಸುಗಳಿಂದ ದೂರವಿರಿಸಿ.
  • ಮಕ್ಕಳೇ…. ಪರೀಕ್ಷೆಯಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ. ಪ್ರಶ್ನೆ ಸಂಖ್ಯೆಯೂ ಅಷ್ಟೇ. ಗೊತ್ತಿರದ ಪ್ರಶ್ನೆಗಳಿಗೆ ಉತ್ತರ ಯೋಚಿಸುತ್ತ ಸಮಯ ವ್ಯರ್ಥಗೊಳಿಸಬೇಡಿ. ಗೊತ್ತಿರುವ ಪ್ರಶ್ನೆಗಳಿಗೆ ಸರಿಯಾಗಿ ಸಂಖ್ಯೆ ಹಾಕಿ ಉತ್ತರ ಬರೆದುಬಿಡಿ.

  • ಪರೀಕ್ಷಾ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚೆನೇ ನಿಮಗಾಗಿಯೇ ಕಾಯ್ದಿರಿಸಿದ ಸ್ಥಳದಲ್ಲಿ ಹಾಜರಿರಿ. ಉತ್ತರ ಪತ್ರಿಕೆ ಕೈಗೆ ಬರುವವರೆಗೂ ಓದಬೇಡಿ. ಅದರಿಂದ confusion ಹೆಚ್ಚುತ್ತದೆ ಹೊರತು ಏನು ಲಾಭವಿಲ್ಲ. ಒಂದೊಮ್ಮೆ ಪರೀಕ್ಷಾ ಕೊಠಡಿಗೆ ಬಂದರೆ ಉತ್ತರ ಪತ್ರಿಕೆ ಕೊಡುವವರೆಗೂ ಕಣ್ಣು ಮುಚ್ಚಿ ರಿಲ್ಯಾಕ್ಸ್ ಆಗಿ. ಪರೀಕ್ಷೆ ಶುರುವಾಗುವ ಮೊದಲಿನ ಈ 10 ನಿಮಿಷಗಳು ತುಂಬಾ ಮುಖ್ಯ.
  • ಪರೀಕ್ಷೆಗೆ ಬೇಕಾಗುವ ಸಲಕರಣೆಗಳನ್ನು ಹೊರತುಪಡಿಸಿ ನಿಮ್ಮ ಬಳಿ ಇನ್ನೇನನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಅನುಮಾನಗಳೇನೇ ಇದ್ದರೂ invigilator ನ ಕೇಳಿ. ಸಹಪಾಠಿಗಳೊಂದಿಗೆ ಅನವಶ್ಯಕವಾಗಿ ಮಾತನಾಡದಿರಿ. ಇದರಿಂದ ಸಮಯವೂ ವ್ಯರ್ಥ ಜೊತೆಗೆ Bad remarks ಬರುವ ಸಾಧ್ಯತೆಗಳೂ ಉಂಟು.

ಕೊನೆಯದಾಗಿ ಒಂದು ಒಳ್ಳೆಯ ಸಲಹೆ…

ಆತಂಕದಿಂದ ಯಾವುದನ್ನೂ ಗೆದ್ದ ಉದಾಹರಣೆಗಳಿಲ್ಲ ಆದರೆ ಆತ್ಮವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು. ಎಲ್ಲ ಪರೀಕ್ಷೆಗಳಿಗಿಂತ ಜೀವನ ಮುಖ್ಯ. ಕಡಿಮೆ ಅಂಕ ಗಳಿಸಿದವರಿಗೆ ಭವಿಷ್ಯವೇ ಇಲ್ಲ ಎಂಬ ಭ್ರಮೆ ಬೇಡ. ಮಕ್ಕಳಿಗೆ ಇಷ್ಟೇ ಅಂಕ ಪಡೆಯಬೇಕು, ಮೊದಲನೇ ಶ್ರೇಣಿಯಲ್ಲೇ ಉತ್ತೀರ್ಣರಾಗಬೇಕೆಂಬ ಒತ್ತಡ ಹೇರದಿರಿ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮನುಷ್ಯನ ಬುದ್ಧಿವಂತಿಕೆಯನ್ನಳೆಯುವ ಅಳತೆಗೋಲಲ್ಲ ಎಂಬ ಪುಟ್ಟ ಸತ್ಯವನ್ನು ಸದಾ ನೆನಪಿನಲ್ಲಿಡಿ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    70 ವರ್ಷದ ಈ ವೃದ್ದನ ಬಯಕೆ ಕೇಳಿದ್ರೆ ಅಚ್ಚ್ಚರಿಯಂತು ಗ್ಯಾರಂಟಿ..ಅಷ್ಟಕ್ಕೂ ಆ ವಿಷಯವಾದ್ರು ಏನು?

    ಯಾರ್ಯಾರಿಗೋ ಏನೋ ಆಸೆಯಾದರೆ, ಈ ವೃದ್ಧನದ್ದು ಬಲು ವಿಚಿತ್ರ ಹಾಗೂ ವಿಲಕ್ಷಣ ಆಸೆ…! ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಮಲೈಸ್ವಾಮಿ ಎಂಬ 70 ವರ್ಷದ ಈ ವೃದ್ಧನಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ 24 ವರ್ಷದ ಪಿ.ವಿ. ಸಿಂಧುವನ್ನು ಮದುವೆಯಾಗಬೇಕಂತೆ..! ಒಂದು ವೇಳೆ ಸಿಂಧು ಮದುವೆಯಾಗಲು ಒಪ್ಪದಿದ್ದರೆ ಆಕೆಯನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಮದುವೆಯಾಗುತ್ತಾನಂತೆ. ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆಂದು ಜಿಲ್ಲಾಧಿಕಾರಿಗಳು ನಡೆಸುವ ವಾರದ ಜನತಾದರ್ಶನದಲ್ಲಿ ಸಿಂಧು ಫೋಟೋ ಸಹಿತ ಪತ್ರವೊಂದನ್ನು ಜಿಲ್ಲಾಧಿಕಾರಿಗಳ ಕೈಗಿತ್ತು, ನನ್ನನ್ನು ಮದುವೆಯಾಗುವಂತೆ ಸಿಂಧು ಅವರಿಗೆ ಸೂಚಿಸಬೇಕೆಂದು…

  • ಸೌಂದರ್ಯ

    ತಲೆಹೊಟ್ಟಿನ ತಲೆನೋವಿಗೆ ಇಲ್ಲಿದೆ ಮನೆಮದ್ದು….

    ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ

  • ಉಪಯುಕ್ತ ಮಾಹಿತಿ

    ಪ್ರಧಾನಮಂತ್ರಿ ಜನೌಷಧಿ ಯೋಜನೆಯಲ್ಲಿ, ಕ್ಯಾನ್ಸೆರ್’ಗೂ ಸಿಗಲಿವೆ ಅತೀ ಕಡಿಮೆ ಬೆಲೆಯ ಗುಣಮಟ್ಟದ ಔಷಧಿಗಳು!ತಿಳಿಯಲು ಈ ಲೇಖನ ಓದಿ…

    ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಜನೌಷಧಿ ಯೋಜನೆಯಿಂದಾಗಿ ಉತ್ತಮ ಗುಣಮಟ್ಟದ ಔಷಧಿಗಳು ಬಡವರಿಗೆ ಕೈಗೆಟಕುವ ದರದಲ್ಲಿ ದೊರಕುತ್ತಿದ್ದು ಇದಕ್ಕಾಗಿ ದೇಶದಾದ್ಯಂತ ಕೇಂದ್ರ ಸರಕಾರವು ಸಾವಿರಾರು ಜನೌಷಧ ಮಳಿಗೆಗಳನ್ನು ತೆರೆದಿದೆ.

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…

  • ಜ್ಯೋತಿಷ್ಯ

    ದಿನ‌ ಭವಿಷ್ಯ ಗುರುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.ಕಾರ್ಯಕ್ಷೇತ್ರದಲ್ಲಿನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • inspirational, ಉಪಯುಕ್ತ ಮಾಹಿತಿ

    ಪ್ಯಾನ್ ಕಾರ್ಡ್ ಇಲ್ಲದೇ ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ… !ತಿಳಿಯಲು ಈ ಲೇಖನ ಓದಿ..

    ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..