ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ಪುದಿನ ಮಾರಕ ಕಾಯಿಲೆಯಾದ ಕ್ಯಾನ್ಸರ್ ಸೇರಿದಂತೆ ತುಂಬಾ ಕಾಯಿಲೆಗಳಿಗೆ ಒಳ್ಳೆಯದು:-
ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ.
ನಮ್ಮ ಚರ್ಮದ ಮೇಲೆ ಪುದಿನ ಮೋಡಿ :-
ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.
ಅಡಿಗೆ ಉಪಯೋಗದಲ್ಲಿ :-
ಇದರಲ್ಲಿ ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.
ನಮಗೆ ಗೊತ್ತಿಲ್ಲದ ಇನ್ನೂ ಕೆಲುವು ಉಪಯೋಗಗಳು ಎಲ್ಲಿವೆ ನೋಡಿ !
*ಶೀತ ಆಗಿ ಗಂಟಲು ನೋವು ಬಂದಿದ್ದರೆ, ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ.
*ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಜೊತೆ ಅಷ್ಟೇಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.
*ಊಟಕ್ಕೆಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.
*ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದಮೊಡವೆ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ, ಸ್ವಲ್ಪ ನಿಂಬೆರಸ ಮತ್ತುಜೇನು ಸೇರಿಸಿ 3 ದಿನ ಕುಡಿದರೆ, ವಾಂತಿ ಪೂರ್ತಿ ವಾಸಿ ಆಗುತ್ತೆ.
ನೋಡಿದರಲ್ಲ ಮನೆ ಮುಂದೆ ಸಿಗೋ ಪುದೀನಾ ಸೊಪ್ಪಿಂದ ಎಷ್ಟೆಲ್ಲಾ ಉಪಯೋಗ ಇದೆ ಅಂತಾ? ನೀವಿದನ್ನ ಹೆಂಗೆ ಉಪಯೋಗಿಸ್ತೀರ ಅಂತ ಯೋಚ್ನೆ ಮಾಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾನುವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯ ನೋಡಲು ಬಂದ ಉದ್ಯಮಿ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತೀಯ ಪ್ರೇಕ್ಷಕರು ಹೀಯಾಳಿಸಿದ ಘಟನೆ ನಡೆದಿದೆ
ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.
ಗೂಗಲ್ ನಲ್ಲಿ ಏನು ಸಿಗಲ್ಲ ಹೇಳಿ? ಪ್ರತಿಯೊಂದು ವಿಷ್ಯದ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ಸಣ್ಣಗೆ ಕಾಲು ನೋವು ಬಂದ್ರೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾರೆ. ಪ್ರತಿಯೊಂದು ರೋಗ, ಅದ್ರ ಲಕ್ಷಣ, ಚಿಕಿತ್ಸೆ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ. 2018ರಲ್ಲಿ ಗೂಗಲ್ ನಲ್ಲಿ ಯಾವ ರೋಗದ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ ಎಂಬ ವರದಿ ಈಗ ಹೊರಬಿದ್ದಿದೆ. 2018ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಬಾರಿ ಕ್ಯಾನ್ಸರ್ ಬಗ್ಗೆ ಹುಡುಕಾಟ ನಡೆಸಿದ್ದಾರೆ….
ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ
ನಾವು ದಿನ ನಿತ್ಯ ಬಳುಸುವ ಕೆಲವೊಂದು ವಸ್ತುಗಳೇ ನಮ್ಮ ದೇಹಕ್ಕೆ ಹಾನಿಕಾರಕ. ಅವುಗಳಲ್ಲಿ ಯಾವುವು ಅಂತ ತಿಳಿದುಕೊಲ್ಲಬೇಕಾದ್ರೆ ಮುಂದೆ
ನಿಮಗೆಲ್ಲರಿಗೂ ಗೊತ್ತಿರಬಹುದು, ಹಿಂದಿನ ಕಾಲದ ಮದುವೆಯ ನಿಯಮಗಳು ಸಂಪ್ರದಾಯಗಳು ಹೇಗಿತ್ತು ಎಂಬುದು. ಮದುವೆಯಾಗುವ ನವ ಜೋಡಿಗಳಲ್ಲಿ ವಧುಗಿಂತ ವರನು ದೊಡ್ಡವನಾಗಿರಬೇಕು, ಇಲ್ಲವಾದಲ್ಲಿ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಲೇ ಇರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ದಿನಗಳು ಉರುಳಿದಂತೆ ಸಂಪ್ರದಾಯಗಳು ಬದಲಾಗುತ್ತಿವೆ. ಜಾತಿ, ಧರ್ಮ, ವಯಸ್ಸು ಇವ್ಯಾವುದನ್ನು ಲೆಕ್ಕಿಸದೆ ತಾನು ಪ್ರೀತಿಸಿದ ವ್ಯಕ್ತಿಯನ್ನು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿರುತ್ತಾರೆ. ಒಂದು ಕಡೆಯಿಂದ ಯೋಚಿಸುವುದಾದರೆ ಈ ನಿರ್ಧಾರ ಸರಿ ಅನಿಸುತ್ತದೆ ಅಲ್ಲವೇ? ಅಂತೆಯೇ ನಮ್ಮ ದಕ್ಷಿಣ ಭಾರತದ ಆಲ್ಮೋಸ್ಟ್ ಟಾಪ್ ನಟಿಯರು…