ಸುದ್ದಿ

ಮದ್ಯಪಾನ ಮಾರಾಟದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದ ಮಂಡ್ಯ…..!

54

ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಈ ವರ್ಷ ಮದ್ಯ ಮಾರಾಟವಾಗಿದೆ?
ಜನವರಿಯಲ್ಲಿ 51.30 ಲಕ್ಷ ಬಾಕ್ಸ್, 4.43 ಕೋಟಿ ಲೀಟರ್
ಫೆಬ್ರವರಿಯಲ್ಲಿ 47.61 ಲಕ್ಷ ಬಾಕ್ಸ್, 4.11 ಕೋಟಿ ಲೀಟರ್
ಮಾರ್ಚ್‍ನಲ್ಲಿ 44.11 ಲಕ್ಷ ಬಾಕ್ಸ್, 3.80 ಕೋಟಿ ಲೀಟರ್
ಎಪ್ರಿಲ್‍ನಲ್ಲಿ 46.35 ಲಕ್ಷ ಬಾಕ್ಸ್, 4 ಕೋಟಿ ಲೀಟರ್

(ಒಂದು ಬಾಕ್ಸ್ ನಲ್ಲಿ 180 ಎಂಎಲ್ ಇರುವ ಒಟ್ಟು 48 ಬಾಟಲ್‍ಗಳಿರುತ್ತೆ.)ಅಬಕಾರಿ ಇಲಾಖೆ ಕೊಟ್ಟಿರುವ ಈ ಲೆಕ್ಕಾಚಾರದ ಪ್ರಕಾರ 2005 ರಿಂದ ಇಲ್ಲಿಯವರೆಗೆ ಏಪ್ರಿಲ್ ತಿಂಗಳಲ್ಲಿ ಈ ಬಾರಿಯೇ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ಮಂಡ್ಯದಲ್ಲಿ ಹೆಚ್ಚು ಎಣ್ಣೆ ಮಾರಾಟವಾಗುತ್ತೆ.
ಇದಕ್ಕೆ ಪ್ರತಿ ವರ್ಷ ಅಬಕಾರಿ ಇಲಾಖೆ ಬಳಿ ಇರೋ ದಾಖಲೆಗಳೇ ಸಾಕ್ಷಿ. 2005ರಲ್ಲಿ ಒಂದು ವರ್ಷಕ್ಕೆ, 1 ಕೋಟಿ 44 ಲಕ್ಷ ಬಾಕ್ಸ್ ಗಳು ಮಾರಾಟವಾಗುತ್ತಿದ್ದರೆ, ಅದೇ 2018ರಲ್ಲಿ 5 ಕೋಟಿ 69 ಲಕ್ಷ ಬಾಕ್ಸ್ ಗಳು ಮಾರಾಟವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಮದ್ಯದ ಮಾರಾಟ ಪ್ರಮಾಣದ ಗುರಿಯನ್ನು ವರ್ಷದಿಂದ ವರ್ಷಕ್ಕೆ ಸರಕಾರ ಹೆಚ್ಚಿಸುತ್ತಲೇ ಇದೆ. ಹೀಗಾಗಿ ಪ್ರತಿ ವರ್ಷವೂ ಮದ್ಯ ಮಾರಾಟ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅದರಲ್ಲೂ 2018ರಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ, ಲೋಕಸಭೆ ಉಪ ಚುನಾವಣೆ,
ಎಷ್ಟು ಅಂಗಡಿಗಳಿವೆ?

ಮಂಡ್ಯ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕಾಗಿ ವಿವಿಧ ವರ್ಗದ ಒಟ್ಟು 256 ಲೈಸೆನ್ಸ್ ನೀಡಲಾಗಿದೆ. ಕೆ.ಆರ್.ಪೇಟೆಯಲ್ಲಿ 34, ಮದ್ದೂರಿನಲ್ಲಿ 48, ಮಳವಳ್ಳಿಯಲ್ಲಿ 33, ಮಂಡ್ಯದಲ್ಲಿ 62, ನಾಗಮಂಗಲದಲ್ಲಿ 27, ಪಾಂಡಪುರದಲ್ಲಿ 18 ಹಾಗೂ ಶ್ರೀರಂಗಪಟ್ಟಣದಲ್ಲಿ 35 ಲೈಸೆನ್ಸ್ ಹೊಂದಿರೋ ಬಾರ್ ಆಂಡ್ ರೆಸ್ಟೋರೆಂಟ್‍ಗಳಿವೆ. ಇವೆಲ್ಲ ಲೈಸೆನ್ಸ್ ಹೊಂದಿರೋ ಮದ್ಯ ಮಾರಾಟದ ಕೇಂದ್ರಗಳು. ಆದ್ರೆ, ಲೈಸೆನ್ಸ್ ಇಲ್ಲದೆ, ಹಳ್ಳಿ ಹಳ್ಳಿಗಳಲ್ಲಿ ಕದ್ದು ಮುಚ್ಚಿ ಮಾರಾಟ ಮಾಡೋ ಕೇಂದ್ರಗಳು ಅಲ್ಲಲ್ಲಿ ಸಿಗುತ್ವೆ. ಕೆಲವು ಹೋಟೆಲ್‍ಗಳಂತೂ ಅನಧಿಕೃತವಾಗಿ ಬಾರ್ ಆಂಡ್ ರೆಸ್ಟೋರೆಂಟ್‍ಗಳಾಗಿವೆ. ಇಲ್ಲಿ ಹೇಳೋರು ಕೇಳೋರು ಇದ್ದಾರೋ ಇಲ್ವೋ ಗೊತ್ತಿಲ್ಲ.

ಒಂದೆಡೆ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಮದ್ಯ ಸೇವನೆ ಮಾಡಬೇಡಿ’ ಎನ್ನುವ ಸರಕಾರ ಮತ್ತೊಂದೆಡೆ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿ ಮದ್ಯ ಮಾರಾಟಕ್ಕೆ ಉತ್ತೇಜನ ನೀಡುತ್ತಿದೆ. ಯಾಕಂದ್ರೆ, ಸರಕಾರಗಳ ಪ್ರಮುಖ ಆದಾಯದ ಮೂಲಗಳಲ್ಲಿ ಅಬಕಾರಿ ಸುಂಕವೂ ಒಂದು. ಆದ್ರೆ, ಇದರಿಂದಾಗಿ ಮಂಡ್ಯದಲ್ಲಿ ಆಗ್ತಿರೋ ದುಷ್ಪರಿಣಾಮದ ಬಗ್ಗೆ ಯಾವ ನಾಯಕರಿಗೂ ಅರಿವು ಇದ್ದಂತಿಲ್ಲ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ