ದಿನಕ್ಕೊಂದು ನೀತಿ ಕಥೆ

ಭೂಮಿ ಮೇಲೆ ಯಾರು ಹೆಚ್ಚು ಸುಖೀ?ರಾಜನಿಗೆ ಕಾಡಿದ ಈ ಪ್ರಶ್ನೆಗೆ ಉತ್ತರ ಕೊಟ್ಟವರು ಯಾರು ಗೊತ್ತಾ..?ತಿಳಿಯಲು ಈ ಕಥೆ ಓದಿ…

484

ಒಮ್ಮೆ ರಾಜನಿಗೆ ಈ ಇಳೆಯಲ್ಲಿ ಯಾರು ಹೆಚ್ಚು ಸುಖೀ ಹಾಗೂ ಸಂತೃಪ್ತ…! ಎಂದು ತಿಳಿಯುವ ಮನಸ್ಸಾಯಿತು. ತನ್ನ ಪ್ರಶ್ನೆಯನ್ನು ಸಭಾಸದರ ಮುಂದಿಟ್ಟ. ತಲೆಗೊಂದೊಂದು ಉತ್ತರ ಬಂತು. ಯಾವ ಉತ್ತರವೂ ರಾಜನಿಗೆ ಸಮಾಧಾನ ತರಲಿಲ್ಲ. ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಹೇಗಾದರೂ ಉತ್ತರ ಕಂಡುಕೊಳ್ಳಬೇಕೆಂಬ ತವಕದಿಂದ ರಾಜ ಮಾರುವೇಷದಲ್ಲಿ ಸಂಚಾರ ಹೊರಟ. ರಾಜ್ಯದ ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ, ಅಲ್ಲಿನ ಜನರನ್ನು ಮಾತಾಡಿಸುತ್ತಾ, ಅವರ ಕಷ್ಟ-ಸುಖಗಳನ್ನು, ಆಲಿಸುತ್ತಾ, ಸಮಾಧಾನವನ್ನೋ, ಪರಿಹಾರವನ್ನೋ ಹೇಳುತ್ತಾ ನಡೆದ.

ಒಂದು ರಾತ್ರಿ ದೂರದ ಹಳ್ಳಿಯೊಂದರ ಜಗಲಿಯಲ್ಲಿ ಕುಳಿತು ಆನಂದದಿಂದ ಹಾಡುತ್ತಿದ್ದ ರೈತನೊಬ್ಬ ಕಾಣಿಸಿದ. ಮಾರುವೇಷದಲ್ಲಿದ್ದ ರಾಜನಿಗೆ ಆತನನ್ನು ಕಂಡು ಅಚ್ಚರಿಯಾಯಿತು. ಆತನ ಕುಶಲ ವಿಚಾರಿಸಿ, ಬಹಳ ಸಂತೋಷದಿಂದ ಹಾಡುತ್ತಿರುವ ಕಾರಣ ಕೇಳಿದ. ಅದಕ್ಕೆ ರೈತನ ಉತ್ತರ ಹೀಗಿತ್ತು; “ದಿನವೂ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತೇನೆ. ಭಗವಂತನ ದಯೆಯಿಂದ ಸಿಕ್ಕ ಫ‌ಲದಲ್ಲಿ ಅರ್ಧ ಭಾಗವನ್ನು ಮಾತ್ರ ನನ್ನ ದೈನಂದಿನ ಜೀವನದ ನಿರ್ವಹಣೆಗೆ ಖರ್ಚು ಮಾಡುತ್ತೇನೆ. ಉಳಿದ ಅರ್ಧಭಾಗದಲ್ಲಿ ಕಾಲು ಭಾಗವನ್ನು ಸಾಲ ತೀರಿಸಲು, ಇನ್ನುಳಿದ ಕಾಲು ಭಾಗವನ್ನು ಸಾಲ ಕೊಡುವುದಕ್ಕೂ ವ್ಯಯಿಸುತ್ತೇನೆ. ಹೀಗಾಗಿ ನನ್ನ ಆದಾಯದ ಮಿತಿಯಲ್ಲಿ ನಾನು ಜೀವಿಸುತ್ತಾ ನನ್ನ ಕುಟುಂಬದವರೊಟ್ಟಿಗೆ ಸುಖ- ಸಂತೋಷದಿಂದಿದ್ದೇನೆ’ ಎಂದ.

ರೈತನ ಈ ಮಾತು ರಾಜನಿಗೆ ಒಗಟಾಗಿ ಕಂಡಿತು. “ಸಾಲ ಕೊಡುವುದು, ಸಾಲ ತೀರಿಸುವುದು ಹೀಗಂದರೇನು? ಕೊಂಚ ಬಿಡಿಸಿ ಹೇಳು ಮಹರಾಯ’ ಎಂದ. ರಾಜನ ಮಾತಿಗೆ ನಗುತ್ತ ರೈತನೆಂದ; “ಸಾಲ ಕೊಡುವುದೆಂದರೆ, ನನ್ನ ದುಡಿಮೆಯ ಕಾಲು ಭಾಗವನ್ನು ನಾನು ನನ್ನ ತಂದೆ- ತಾಯಿಯರನ್ನು ಸಾಕಲು ವ್ಯಯಿಸುತ್ತೇನೆ. ಕಾರಣ ಅವರು ನನ್ನನ್ನು ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ- ಸಲಹಿ ದೊಡ್ಡವನನ್ನಾಗಿ ಮಾಡಿ¨ªಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ವೃದ್ಧರಾದ ಅವರನ್ನು ನೋಡಿಕೊಳ್ಳುವುದು ನನ್ನ ಹೊಣೆ. ಇದು ನಾನು ಪಡೆದ ಸಾಲ ತೀರಿಸುವ ರೀತಿ. ಇನ್ನು ನಿಮ್ಮ ಅನುಮಾನ ಸಾಲ ಕೊಡುವ ಕುರಿತದ್ದು; ಅದೂ ಹೀಗೆಯೇ, ನಾನು ನನ್ನ ಮಕ್ಕಳನ್ನು ಸಾಕಿ-ಸಲಹಿ, ಸಶಕ್ತರನ್ನಾಗಿ ಮಾಡುತ್ತಿದ್ದೇನೆ. ಇದು ಒಂದು ರೀತಿ ಸಾಲ ಕೊಟ್ಟಂತೆ; ಅಂದರೆ ಅವರು ಮುಂದೆ ನನಗೆ ಮತ್ತು ನನ್ನ ಹೆಂಡತಿಗೆ ವಯಸ್ಸಾದಾಗ ದಿಕ್ಕಾಗುತ್ತಾರೆ. ಇನ್ನು ಉಳಿದ ಅರ್ಧಭಾಗದಲ್ಲಿ ನನ್ನ ದೈನಂದಿನ ಜೀವನ ಹೇಗೋ ಸಾಗುತ್ತದೆ.

ಹೀಗಾಗಿ ನನ್ನ ನೆಮ್ಮದಿಯ ಜೀವನಕ್ಕೆ ಭಂಗವಿಲ್ಲ’ ಎಂದು ನಗೆ ಬೀರಿದ. ರೈತನ ಜೀವನೋತ್ಸಾಹದ ಮಾತು ರಾಜನಲ್ಲಿ ಹೊಸ ಅರಿವನ್ನೇ ಹುಟ್ಟಿಸಿತು. ಸರಳ ಜೀವನ ಹಾಗೂ ಇದ್ದುದರ ತೃಪ್ತಿ ಹೊಂದುವ ಗುಣ ಇವೇ ಬದುಕಿನ ಸುಖ-ಸಂತೋಷದ ಮೂಲ ಎನ್ನುವ ಸತ್ಯ ಗೊತ್ತಾಯಿತು. ಆಗಲೇ ರಾಜನನ್ನು ಕಾಡುತ್ತಿದ್ದ ಪ್ರಶ್ನೆಗೆ ಉತ್ತರವೂ ದೊರಕಿತು.

ಮೂಲ:- 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಓರ್ವ ಆಸ್ಪತ್ರೆಗೆ ದಾಖಲು…….!

    ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ. ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್‌ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು…

  • ವಿಜ್ಞಾನ

    ಪ್ರಪಂಚದಲ್ಲೆ ಶಬ್ದದ ವೇಗಕ್ಕಿಂತ ಎರಡು ಪಟ್ಟು ಸ್ಪೀಡ್ ಹೋಗುತ್ತಿದ್ದ ಸೂಪರ್ ಸೋನಿಕ್ ವಿಮಾನ ಬ್ಯಾನ್ ಆಗಿದ್ದು ಯಾಕೆ ಗೊತ್ತಾ?

    ಶಬ್ದದ ವೇಗಕ್ಕಿಂತ 2ಪಟ್ಟು ಸ್ಪೀಡಾಗಿ ಚಲಿಸುವ ಈ ವಿಮಾನ 1969 ರಿಂದ 2003 ರವರೆಗೆ ನಿರಂತರವಾಗಿ ಲಕ್ಷಾಂತರ ಜನ ಪ್ರಯಾಣಿಕರನ್ನ ಸುರಕ್ಷಿತವಾಗಿ ಅತಿ ಬೇಗನೆ ತಲುಪಿಸುವಂತಹ ಕೆಲಸವನ್ನು ಮಾಡಿದ ಈ ವಿಮಾನ ಈಗ ಮ್ಯೂಸಿಯಂಯೊಂದರಲ್ಲಿ ಕೇವಲ ಒಂದು ಬೊಂಬೆಯಾಗಿ ನೋಡುವುದಕ್ಕೆ ಕಾಣಲು ಸಿಗುತ್ತದೆ. 1969ರಲ್ಲಿ ರಾಯಲ್ ಏರ್ಕ್ರಾಫ್ಟ್ ಎಸ್ಟಾಬ್ಲಿಷ್ಮೆಂಟ್ ಅಂದರೆ RAE ಡೈರೆಕ್ಟರ್ ಆದ ಅರ್ನಾಲ್ಡ್ ಎಂಬ ವ್ಯಕ್ತಿ ಕಾನ್ ಕಾರ್ಡ್ ಸೂಪರ್ ಸೋನಿಕ್ ಅನ್ನುವ ಒಂದು ಕಾನ್ಸೆಪ್ಟ್ ನನ್ನು ತನ್ನ ತಂಡದ ಮುಂದೆ ಇಡುತ್ತಾರೆ. ಅವರ…

  • ಸುದ್ದಿ

    ಅಮ್ಮನಿಗೆ ಪತ್ರವನ್ನು ಬರೆದು ಮನೆ ಬಿಟ್ಟು ಹೋದಂತಹ ಬಾಲಕಿಯ ಬಣ್ಣವನ್ನು ಬಯಲು ಮಾಡಿದ ಪೊಲೀಸರು…!

    ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗ್ತಿದ್ದೇನೆ ಅಂತಾ ಅಮ್ಮನಿಗೆ ಪತ್ರ ಬರೆದು ಹೋದ ಮಗಳ ನಿಜವಾದ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಮುಂಬೈನಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಅಮ್ಮನಿಗೆ ಈ ರೀತಿ ಪತ್ರ ಬರೆದಿದ್ದಾಳೆ. “ಅಮ್ಮಾ ನಾನು ಅಪ್ಪನ ವರ್ತನೆಯಿಂದ ಬೇಸರಗೊಂಡು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಹಾಗಂತ ನಾನು ಯಾವುದೋ ಹುಡುಗನೊಂದಿಗೆ ಓಡಿ ಹೋಗುತ್ತಿಲ್ಲ. ನೀವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಅಂತಾ ದೇವರ ಮೇಲೆ ಆಣೆ ಮಾಡು” ಎಂದು ಪತ್ರದಲ್ಲಿ…

  • ಆರೋಗ್ಯ

    ಕಡಿಮೆ ವೆಚ್ಚದಲ್ಲಿ ಮೂತ್ರ ಪಿಂಡ ಶುದ್ದೀಕರಿಸುವ ಮನೆಮದ್ದು. ಈ ಮಾಹಿತಿ ನೋಡಿ.

    ಮನುಷ್ಯನ ದೇಹದಲ್ಲಿ ಪ್ರತಿ ಅಂಗಾಂಗಗಳು ಕೂಡ ಹೆಚ್ಚಿನ ಮಹತ್ವವನ್ನು ವಹಿಸುತ್ತವೆ. ಹಾಗಾಗಿ ಕೆಲವರಿಗೆ ಈ ಮೂತ್ರ ಪಿಂಡದ ಸಮಸ್ಯೆ ಇರುತ್ತದೆ ಇದಕ್ಕೆ ಮನೆಯಲ್ಲಿಯೇ ಮನೆಮದ್ದನ್ನು ತಯಾರಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನಮ್ಮ ದೇಹಕ್ಕೆ ಮೂತ್ರಪಿಂಡಗಳು ತುಂಬಾನೇ ಮುಖ್ಯವಾದ ಭಾಗವಾಗಿದೆ ನಮ್ಮ ದೇಹದಲ್ಲಿ ಸಂಗ್ರಹಿತವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ನಮ್ಮ ಆರೋಗ್ಯರಕ್ಷಣೆ ಮಾಡುತ್ತಿರುತ್ತದೆ. ಅಂತಹ ಅತಿ ಮುಖ್ಯ ಅಂಗ ಮೂತ್ರಪಿಂಡವನ್ನು ಅತೀ ಕಡಿಮೆ ವೆಚ್ಚದಲ್ಲಿ ನಿಮ್ಮ ಮನೆಗಳಲ್ಲೇ ಶುದ್ಧೀಕರಿಸುವ ಸರಳ ವಿಧಾನ ಹೀಗಿದೆ. ಒಂದು…

  • ವಿಶೇಷ ಲೇಖನ

    ಶ್ರೀಗಳು ಸಿದ್ದಗಂಗಾ ಮಠಾಧಿಪತಿಯಾಗಿದ್ದು ಹೇಗೆ ಗೊತ್ತಾ..?ಶ್ರೀಗಳ ದಿನಚರಿ ಹೇಗಿತ್ತು ಗೊತ್ತಾ..!

    ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿರುವರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.

  • ಸಿನಿಮಾ

    ಪಡ್ಡೆ ಹುಡುಗರ ನಿದ್ದೆ ಕದ್ದಿರೋ, ಕಣ್ ಸನ್ನೆ ನೋಟದ ಈ ಹುಡುಗಿಯ ಕತೆ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

    ಒಂದೇ ಒಂದು ವಿಡಿಯೋ ಕ್ಲಿಪ್‌ ನಿಂದ ಇಡೀ ದೇಶದಲ್ಲಿ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ನೋಟ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.