ತಂತ್ರಜ್ಞಾನ

ಭಾರತ ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎಲ್ಲಿದೆಯೆಂದು ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

276

ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಚೆನ್ನೈನಲ್ಲಿ ಶುರುವಾಗಿದೆ. ಇಲ್ಲಿ ವೇಟರ್ ಬದಲು ರೋಬೋಟ್ ಆಹಾರ ಒದಗಿಸುವ ಕೆಲಸ ಮಾಡುತ್ತದೆ. ಈ ರೆಸ್ಟೋರೆಂಟ್ ಚೆನ್ನೈನ ಮಹಾಬಲಿಪುರಂ ರಸ್ತೆಯಲ್ಲಿದೆ. ಥಾಯ್ ಹಾಗೂ ಚೈನೀಸ್ ಆಹಾರ ಗ್ರಾಹಕರಿಗೆ ಸಿಗಲಿದೆ.

ನೀವ್​ ಅಲ್ಲಿಗೆ ಹೋದ್ರೆ ಅಲ್ಲಿನ ಸಿಬ್ಬಂದಿ ಬಂದು ನಿಮಗೆ ಫುಡ್​ ಸಪ್ಲೈ ಮಾಡಲ್ಲ. ಬದಲಿಗೆ ನಿಮಗೆ ಬೇಕಾದ ವೆರೈಟಿ ವೆರೈಟಿ ಫುಡ್​ ಸಪ್ಲೈ ಮಾಡೋದು ರೋಬೋಗಳು.

ಇದು ದೇಶದ ಮೊದಲ ರೋಬೋಟ್ ರೆಸ್ಟೋರೆಂಟ್ ಎನ್ನಲಾಗ್ತಿದೆ. ವೆಂಕಟೇಶ್ ರಾಜೇಂದ್ರನ್ ಹಾಗೂ ಕಾರ್ತಿಕ್ ಕನ್ನನ್ ಸೇರಿ ಈ ರೆಸ್ಟೋರೆಂಟ್ ತೆರೆದಿದ್ದಾರೆ. ಪ್ರತಿ ಟೇಬಲ್ ಗೂ ಟ್ಯಾಬ್ ಇದೆ. ಈ ಟ್ಯಾಬ್ ಮೂಲಕ ಗ್ರಾಹಕರು ಆಹಾರವನ್ನು ಆರ್ಡರ್ ಮಾಡಬೇಕು. ಅದು ನೇರವಾಗಿ ಕಿಚನ್ ತಲುಪುತ್ತದೆ.

ತಕ್ಷಣ ನೀಮಗೆ ಬೇಕಾದ ಫುಡ್​ ನಿಮ್ಮ ಟೇಬಲ್​ ಬಳಿ ಬರುತ್ತೆ.ವಿದೇಶಗಳಲ್ಲಿ ಮನುಷ್ಯರ ತರ ರೋಬೋಗಳು ಹೋಟೆಲ್​ನಲ್ಲಿ ಕೆಲಸ ಮಾಡೋದನ್ನು ಕೇಳಿದ್ದೀವಿ..ಆದ್ರೆ ನಮ್ಮ ಚೆನ್ನೈಗೂ ಇಂತಹ ರೋಬೋಟ್​ಗಳು ಎಂಟ್ರಿಕೊಟ್ಟಿವೆ. ಸೆನ್ಸಾರ್​ ಮೂಲಕ ಕೆಲಸ ಮಾಡುವ ಈ ರೋಬೋಗಳು ಪ್ರತೀ ಗ್ರಾಹಕರ ಬಳಿ ಹೋಗಿ ಫುಡ್​ ಸಪ್ಲೈ ಮಾಡುತ್ತವೆ.. ಹಸಿದಿದ್ದ ಗ್ರಾಹಕರಿಗೆ ಆತ್ಮೀಯವಾಗಿ ಆಹಾರ ನೀಡುತ್ತವೆ.

ಆಹಾರ ಸಿದ್ಧವಾದ ಮೇಲೆ ರೋಬೋಟ್ ಗ್ರಾಹಕರಿಗೆ ಆಹಾರವನ್ನು ಸರ್ವ್ ಮಾಡುತ್ತದೆ. ಇಲ್ಲಿರುವ ಎಲ್ಲ ರೋಬೋಟ್ ಗಳು ಬ್ಯಾಟರಿ ಮೂಲಕ ಕೆಲಸ ಮಾಡುತ್ತವೆ. ಯಾರಾದ್ರೂ ರೋಬೋಟ್ ದಾರಿಗೆ ಅಡ್ಡ ಬಂದ್ರೆ ಅದು ಅಲ್ಲೇ ನಿಲ್ಲುತ್ತದೆ. ದೇಶದಾದ್ಯಂತ ಈ ರೆಸ್ಟೋರೆಂಟ್ ಬಗ್ಗೆ ಚರ್ಚೆಯಾಗ್ತಿದೆ. ಹಾಗಾಗಿ ಮಾಲೀಕರು ಇನ್ನೂ ಅನೇಕ ಕಡೆ ಶಾಖೆ ತೆರೆಯುವ ತಯಾರಿಯಲ್ಲಿದ್ದಾರೆ.

ವಿಡಿಯೋ ನೋಡಲು ಕ್ಲಿಕ್ ಮಾಡಿ:-https://youtu.be/7_zOtVrMejg

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ