ಹೌದು, ಪತ್ರಿಕೆಯೊಂದು ವರದಿ ಮಾಡಿರುವಂತೆ, ಪ್ರಸ್ತುತ ಭಾರತೀಯ ಸೇನೆಗೆ ಅಮೆರಿಕದಿಂದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ತರಿಸಿಕೊಳ್ಳಲಾಗುತ್ತಿದ್ದು, ಇದೀಗ ಈ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಇನ್ನು ಮುಂದೆ ಭಾರತದಲ್ಲೇ ತಯಾರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ ಸ್ವದೇಶಿ ‘ಬುಲೆಟ್‌ಪ್ರೂಫ್’ ಜಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಇದರ ಬಳಕೆಗೆ ರಕ್ಷಣಾ ಸಚಿವಾಲಯದ ಉನ್ನತಾಧಿಕಾರ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್‌ಪ್ರೂಫ್ ಜಾಕೆಟ್ ಅನ್ನು ಧರಿಸಲು ದಾರಿ ಸುಗಮವಾಗಿದೆ.

ಕೇಂದ್ರ ಸರ್ಕಾರಕ್ಕೆ ಹೇಗೆ ಉಳಿತಾಯ ?
ಇನ್ನು ಈ ಬುಲೆಟ್ ಪ್ರೂಫ್ ಜಾಕೆಟ್ ಗಳು ಕಡಿಮೆ ವೆಚ್ಚದ್ದಾಗಿದ್ದು, ಒಂದು ಜಾಕೆಟ್ ನಿರ್ಮಾಣಕ್ಕೆ ಕೇವಲ 50 ಸಾವಿರ ರು. ವೆಚ್ಚ ತಗುಲುತ್ತದೆ. ಆದರೆ ಅಮೆರಿಕದ ಜಾಕೆಟ್ ಗಳಿಗೆ 1.50 ಲಕ್ಷ ರು. ವೆಚ್ಚವಾಗುತ್ತಿದೆ. ಜತೆಗೆ ಒಂದು ಕವಚ 15ರಿಂದ 18 ಕೆ.ಜಿ.ವರೆಗೂ ತೂಕವಿದೆ. ಇಷ್ಟು ಮಣ ಭಾರದ ಜಾಕೆಟ್ ಧರಿಸಿ ಉಗ್ರರ ಜತೆ ಕಾದಾಡಬೇಕಾದ ಪರಿಸ್ಥಿತಿ ಯೋಧರಿಗಿದೆ.
ಇದನ್ನು ಮನಗಂಡ ಬಂಗಾಳಿ ವಿಜ್ಞಾನಿ ಪ್ರೊ| ಶಂತನು ಭೌಮಿಕ್ ಅತ್ಯಂತ ಕಡಿಮೆ ತೂಕದ, ಥರ್ಮೋ ಪ್ಲಾಸ್ಟಿಕ್ ಜಾಕೆಟ್ ಅನ್ನು ಅಭಿವೃದ್ಧಿಪಡಿ ಸಿದ್ದಾರೆ. ಈ ಜಾಕೆಟ್ ಬೆಲೆ 50 ಸಾವಿರ ವಿರಲಿದ್ದು, ತೂಕ 1.5 ಕೆ.ಜಿ.ಯಿರಲಿದೆ.
ಇದರಿಂದಾಗಿ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೋಧರು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಧರಿಸಲು ಹಾದಿ ಸುಗಮವಾದಂತಾಗಿದೆ. ಜತೆಗೆ ರಕ್ಷಣಾ ಇಲಾಖೆಯ ಬೊಕ್ಕಸಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ರು. ಉಳಿತಾಯವಾಗಲಿದೆ.

ಯಾರೂ ಗೊತ್ತಾ ವಿಜ್ಞಾನಿ ಶಾಂತನು ಭೌಮಿಕ್ ?
ಪ್ರಸ್ತುತ ಭಾರತೀಯ ಯೋಧರಿಗೆ ಅಗ್ಗದ ಮತ್ತು ಕಡಿಮೆ ತೂಕದ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಸಂಶೋಧಿಸಿರುವ, ವಿಜ್ಞಾನಿ ಶಾಂತನು ಭೌಮಿಕ್ ಮೂಲತಃ ಬಂಗಾಳ ಮೂಲದವರಾಗಿದ್ದು, ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ಏರೇಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ತಮ್ಮ ವಿನೂತನ ಸಂಶೋಧನೆಯನ್ನು ವಿಜ್ಞಾನಿ ಶಾಂತನು ಭೌಮಿಕ್ ಅವರು ನೇತಾಜಿ ಸುಭಾಷ್ ಚಂದ್ರಬೋಸ್ ಅವರಿಗೆ ಸಮರ್ಪಿಸಿದ್ದಾರೆ.

