ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ವಾಸ್ತು ಶಾಸ್ತ್ರ ಬಹಳ ಪುರಾತನವಾದುದು. ಇದು ಅಪ್ಪಟ ವೈಜ್ಞಾನಿಕ ಶಾಸ್ತ್ರ ಎನ್ನುವ ಅಭಿಪ್ರಾಯಗಳಿವೆ. ನಮ್ಮ ನಡವಳಿಕೆಗಳು, ಸ್ವಭಾವಗಳು ಈ ಶಕ್ತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ, ಬಹುತೇಕ ಭಾರತೀಯರೆಲ್ಲರೂ ಈಗ ವಾಸ್ತು ಶಾಸ್ತ್ರದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹೀಗೆ ಇದ್ದರೆ ಧನ ಪ್ರಾಪ್ತಿ ಸಿಗುತ್ತದೆ.

ಮನೆಯ ಬಾಗಿಲಿನ ಹೊರಗೆ ನಾಮಫಲಕ ಇದ್ದರೆ ಒಳ್ಳೆಯದು.

ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಣತೆಯ ದೀಪ ಮತ್ತು ಊದುಬತ್ತಿ ಹಚ್ಚಿದರೆ ಒಳ್ಳೆಯದು.

ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು.

ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣು ಇಡಿ. ಪ್ರತೀ ಶನಿವಾರ ಅದನ್ನ ಬದಲಿಸುತ್ತಾ ಹೋಗಿ. ಇದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿ ನಶಿಸುತ್ತದೆ.

ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬಾರದು. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

ದಿನಕ್ಕೆ ಒಮ್ಮೆಯಾದರೂ ಧ್ಯಾನ ಮತ್ತು ಮಂತ್ರೋಚ್ಛಾರ ಮಾಡಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ಸಂಚಯವಾಗುತ್ತದೆ.

ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ಬೆಡ್’ನಿಂದ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ಅಥವಾ ಕನ್ನಡಿಯನ್ನ ಬಟ್ಟೆಯಿಂದ ಮುಚ್ಚಿದ ಬಳಿಕವಷ್ಟೇ ಮಲಗಿಕೊಳ್ಳಿ. ಈ ಕನ್ನಡಿಯಿಂದ ಆರೋಗ್ಯ ಕೆಡುತ್ತದೆ, ಕುಟುಂಬದಲ್ಲಿ ವೈಮನಸ್ಸಿಗೆ ಕಾರಣವಾಗುತ್ತದೆ.

ಮನೆಯ ಮೂಲೆಯಲ್ಲಿರುವ ಕತ್ತಲೆಯ ಜಾಗದಲ್ಲಿ ದೇವರ ತೀರ್ಥವನ್ನು ಇಟ್ಟು ವಾರಕ್ಕೊಮ್ಮೆ ಬದಲಿಸಿ.

ಸ್ವಸ್ತಿಕ್ ಮತ್ತು ಓಂ ಚಿಹ್ನೆಗಳನ್ನ ಮನೆಯ ಬಾಗಿಲಿನಲ್ಲಿ ಹಾಕಿ.

ಪೂಜೆಯ ವೇಳೆ ಗಂಟೆ ಭಾರಿಸುತ್ತೇವೆ. ಗಂಟೆಯ ಸದ್ದು ಪಾಸಿಟಿವ್ ಎನರ್ಜಿಯನ್ನ ಉತ್ತೇಜಿಸುತ್ತದೆ. ಹೀಗಾಗಿ, ಕಾಂಪೌಂಡ್’ನ ಗೇಟಿಗೆ ಗಂಟೆಗಳನ್ನ ಹಾಕಿರಿ.

ಮನೆಯ ಎಲ್ಲಾ ಮೂಲೆಗಳಲ್ಲೂ ಒಂದೊಂದು ಡಬ್ಬಿಯಲ್ಲಿ ಲವಣವನ್ನ ಇಡಿ. ಈ ಉಪ್ಪು ನೆಗಟಿವ್ ಎನರ್ಜಿಯನ್ನ ಹೀರಿಕೊಳ್ಳುತ್ತದೆ.

ಮೂರು ವರ್ಷಕ್ಕೆ ಒಮ್ಮೆಯಾದರೂ ಗಣೇಶ ಪೂಜೆ ಮತ್ತು ನವಗ್ರಹ ಶಾಂತಿ ಪೂಜೆಯನ್ನ ಮಾಡಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

ಅಳುತ್ತಿರುವ ಹೆಂಗಸು, ಯುದ್ಧದ ದೃಶ್ಯ, ಲೈಂಗಿಕವಾಗಿ ಉದ್ರೇಕಿಸುವ ಭಂಗಿಗಳು, ಕೋಪೋದ್ರಿಕ್ತ ವ್ಯಕ್ತಿ, ಗೂಬೆ, ರಣಹದ್ದು ಇವೆಲ್ಲವೂ ಅಪಶಕುನಗಳಾಗಿವೆ. ಈ ಫೋಟೋಗಳನ್ನ ಮನೆಯ ಗೋಡೆಗೆ ತೂಗುಹಾಕಬಾರದು.

“ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನ ಪಠಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

ಲಿವಿಂಗ್ ರೂಮಿನ ಆಗ್ನೇಯ(ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಐಶ್ವರ್ಯ ತುಂಬುತ್ತದೆ.
ಕೃಪೆ: ಸುದರ್ಶನ್ ಭಟ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿ ಕುರುಡು ಅಂತಾರೆ. ಪ್ರೀತಿಯಲ್ಲಿ ವಯಸ್ಸು, ಜಾತಿ ಇದ್ಯಾವುದೂ ಪ್ರಮುಖ ಆಗುವುದಿಲ್ಲ. ಈ ತಾರಾ ಜೋಡಿಗಳಲ್ಲಿ ಪತಿಗಿಂತ ಪತ್ನಿಯರೇ ವಯಸಲ್ಲಿ ದೊಡ್ಡವರು.
ವಿಶ್ವದ ನಂಬರ್ 1 ಶ್ರೀಮಂತ ಎಂಬ ಅಗ್ಗಳಿಕೆ ಈಗ 72 ವರ್ಷದ ಬರ್ನಾರ್ಡ್ ಅರ್ನಾಲ್ಟ್ ಪಾಲಾಗಿದೆ. LVMH ಅಧ್ಯಕ್ಷ, ಸಿಇಒ ಅರ್ನಾಲ್ಟ್ ಬಗ್ಗೆ ಮಾಹಿತಿ ಇಲ್ಲಿದೆ. Published On – 25 May 2021 ಬರ್ನಾರ್ಡ್ ಅರ್ನಾಲ್ಟ್ ಈಗ ವಿಶ್ವದ ನಂಬರ್ 1 ಶ್ರೀಮಂತ ಸ್ಥಾನದಲ್ಲಿದೆ. ಫೋರ್ಬ್ಸ್ ಅಂಕಿ- ಅಂಶದ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ 18,620 ಕೋಟಿ ಅಮೆರಿಕನ್ ಡಾಲರ್. ಇಷ್ಟು ಹಣ ಇದ್ದರೆ ಭಾರತದ ರೂಪಾಯಿ ಲೆಕ್ಕದಲ್ಲಿ ಎಷ್ಟಾಗುತ್ತದೆ ಎಂಬ ಕುತೂಹಲ ನಿಮಗೆ…
ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.ನಂದಿನಿ(28) ಕೊಲೆಯಾದ ದುರ್ದೈವಿ. ನಂದಿನಿ ಪ್ರೈವೇಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜುನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ. ನಂದಿನಿ ಹಾಗೂ ಕನಕ ರಾಜು ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂದಿನಿ ತನ್ನ ಪತಿ ಕನಕ ರಾಜುನಿಂದ ದೂರ ಆಗಿ ಟಿಕ್‍ಟಾಕ್‍ಗೆ ಅಡಿಕ್ಟ್…
ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….
ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.
ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.