ಉಪಯುಕ್ತ ಮಾಹಿತಿ

ಬ್ಯಾಂಕ್’ಗಳಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

707

ಸಾಲಗಳಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್ ಗಳು ಏಪ್ರಿಲ್ 1 ರಿಂದ ಹೊಸ ವಿಧಾನ ಅಳವಡಿಸಿಕೊಂಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಗಳು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣದಿಂದ ಆರ್.ಬಿ.ಐ. ಸೂಚನೆಯಂತೆ ಏಪ್ರಿಲ್ 1, 2016 ರಿಂದ ಎಂ.ಸಿ.ಎಲ್.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ.

ಇದರ ಆಧಾರದ ಮೇಲೆ ಬದಲಾಗುವ ಬಡ್ಡಿದರದ ಸಾಲಗಳನ್ನು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನಾಧರಿಸಿದ ಬಡ್ಡಿದರಕ್ಕೆ(MCLR) ಜೋಡಿಸಲಾಗುತ್ತದೆ. ಮೂಲ ದರ ಆಧರಿಸಿ ಮಂಜೂರು ಮಾಡಲಾದ ಸಾಲಗಳು ಬದಲಾಗಬೇಕಿತ್ತಾದರೂ, ಬ್ಯಾಂಕ್ ಗಳು ಅದನ್ನು ಪಾಲಿಸುತ್ತಿರಲಿಲ್ಲ.

ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿದರಕ್ಕೆ ಜೋಡಣೆ ಮಾಡಿರುವುದರಿಂದ ತಿಂಗಳ ಸಾಲದ ಕಂತಿನಲ್ಲಿ ಇಳಿಕೆಯಾಗಲಿದೆ. ಏಪ್ರಿಲ್ 1 ರಿಂದ ಬ್ಯಾಂಕ್ ಗಳು ಹೊಸ ವಿಧಾನವನ್ನು ಅಳವಡಿಸಿಕೊಳ್ಳಬೇಕಿದ್ದು, ಮೂಲ ದರಕ್ಕೆ ಹೋಲಿಸಿದಾಗ, ಹೊಸ ದರದಲ್ಲಿ ಶೇ. 0.50 ರಷ್ಟರವರೆಗೂ ಕಡಿಮೆಯಾಗಲಿದೆ.

ಇದರಿಂದ 2016 ರ ಏಪ್ರಿಲ್ ಗಿಂತ ಮೊದಲು ಪಡೆದ ಗೃಹಸಾಲಗಳ ಕಂತಿನ ಪ್ರಮಾಣ ಕಡಿಮೆಯಾಗಲಿದೆ. ಸ್ಥಿರ ಬಡ್ಡಿ ದರ ಆಧರಿಸಿರುವ ಕಾರಣ, ವೈಯಕ್ತಿಕ ಸಾಲ, ಕಾರು ಖರೀದಿ ಸಾಲಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.

2016 ರ ನಂತರದ ಗೃಹಸಾಲಗಳಿಗೆ MCLR ಸೌಲಭ್ಯ ಸಿಗುತ್ತಿದೆ. ಅದಕ್ಕಿಂತ ಹಿಂದಿನ ಸಾಲಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಬ್ಯಾಂಕ್ ಗಳು ಮೂಲ ದರ ಆಧರಿಸಿ ಬಡ್ಡಿ ದರ ವಸೂಲಿ ಮಾಡುತ್ತಿವೆ ಎಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಹೊಸ ವಿಧಾನ ಅಳವಡಿಕೆಗೆ ಸೂಚನೆ ನೀಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ