ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.
ಆದ್ರೆ ಈಗ ಆಗಿಲ್ಲ. ಎಲ್ಲಿ ನೋಡಿದ್ರು ನಮಗೆ ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್ ನಮ್ಗೆ ಕಣ್ಣಿಗೆ ಕಾಣಲು ಸಿಗುತ್ತದೆ.
ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಯ ಬ್ರಾಂಡ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಒಂದಾಗಿದೆ.
ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿದ ಬಜಾಜ್ ಆಟೋ:-
ಆದ್ರೆ ಅಂತಹ ಬೈಕ್‌ಗಳ ರಾಜ, ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿ ಭಾರತದ ಮತ್ತೊಂದು ಮುಂಚೂಣಿಯ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಬಜಾಜ್ ಆಟೋ ಅತಿ ನೂತನ ಡೊಮಿನರ್ ಜಾಹೀರಾತನ್ನು ಹೊರಗೆಡವಿದೆ.
ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಹೊರಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು, ವಾದ ವಿವಾದಗಳು ಎದುರಾಗುತ್ತಿದೆ. ಐಕಾನಿಕ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ನೀಡುವಷ್ಟು ಬಜಾಜ್ ಬೆಳೆದಿದೆಯೇ ಎಂಬುದು ಕಟ್ಟಾ ಎನ್‌ಫೀಲ್ಡ್ ಬೈಕ್ ಪ್ರೇಮಿಗಳ ಅಭಿಪ್ರಾಯವಾಗಿದೆ.
‘ಹೈಪರ್ ರೈಡಿಂಗ್’ ಎಂಬ ಥೀಮ್ ಇಟ್ಟುಕೊಂಡು ಘಾಟಿ ಪ್ರದೇಶದ ರಸ್ತೆಯಲ್ಲಿ ಇಕ್ಕಟ್ಟಾದ ತಿರುವುಗಳಲ್ಲೂ ಡೊಮಿನರ್ ಸ್ಥಿರತೆಯನ್ನು ಪ್ರಮುಖವಾಗಿಯೂ ಉಲ್ಲೇಖಿಸಲಾಗಿದೆ.
ಬಜಾಜ್ ಆಟೋದಿಂದ ರಾಯಲ್ ಎನ್‌ಫೀಲ್ಡ್ ಬೈಕ್’ನ ವ್ಯಂಗ್ಯ :-
ಬಹು ದೀರ್ಘ ಕಾಲದ ಇತಿಹಾಸವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಶಬ್ದವನ್ನು ಇಲ್ಲಿ ವ್ಯಂಗ್ಯ ಮಾಡಲಾಗಿದೆ. ಇಲ್ಲಿ ಎನ್‌ಫೀಲ್ಡ್ ಬೈಕ್‌ಗಳನ್ನು ನಿಧಾನವಾಗಿ ಚಲಿಸುವ ಆನೆಗಳ ಹಿಂಡಿನ ಜೊತೆ ಹೋಲಿಸಲಾಗಿದೆ.
ಹಾಗೆಯೇ ಸಿಂಹವನ್ನು ಹೋಲುವ ಡೊಮಿನರ್‌ಗಳ ಮುಂದೆ ಇವೆಲ್ಲವೂ ಲೆಕ್ಕಕ್ಕಿಲ್ಲ ಎಂಬುದನ್ನು ಬಿಂಬಿಸಲಾಗಿದೆ.
ಡೊಮಿನರ್‌ನಿಂದ ಅಪಹಾಸ್ಯ :-
ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸುವ ಸವಾರರು ಗಡ್ಡ ಬಿಟ್ಟುಕೊಂಡು ವಿಶೇಷ ರೈಡಿಂಗ್ ಗೇರ್‌ನೊಂದಿಗೆ ಮಿಂಚುತ್ತಾರೆ. ಇವೆಲ್ಲವೂ ಡೊಮಿನರ್‌ನಿಂದ ಅಪಹಾಸ್ಯಕ್ಕೊಳಕ್ಕಾಗಿದೆ.
ಅಷ್ಟಕ್ಕೂ ಆಧುನಿಕ ದೀರ್ಘ ದೂರದ ಪ್ರಯಾಣವನ್ನು ಪರಿಷ್ಕರಿಸಲು ಡೊಮಿನರ್‌ನಿಂದ ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ಸದ್ಯಕ್ಕೆ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳೋಣವೇ…
ಎನ್‌ಫೀಲ್ಡ್ ಬೈಕ್’ನ್ನು ಇಷ್ಟೆಲ್ಲಾ ಅಪಹಾಸ್ಯ ಮಾಡುತ್ತಿರುವ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಗೊತ್ತಾ? (ಫೀಚರ್)
ಡೊಮಿನೇಟಿಂಗ್ ಸಾನಿಧ್ಯ (ಪ್ರಾಬಲ್ಯ):
ಸಿಂಹ ಸಾನಿಧ್ಯವೇ ಪ್ರೇರಣೆ,
43ಎಂಎಂ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್,
ಹ್ಯಾಂಡ್ಲಿಂಗ್ ಮತ್ತು ಕಂಟ್ರೋಲ್:
ವೈಡ್ ಮತ್ತು ತಳಮಟ್ಟದ ರೇಡಿಯಲ್ ಚಕ್ರಗಳು,
ಗರಿಷ್ಠ ವೇಗದಲ್ಲೂ ಸೂಪರ್ ಗ್ರಿಪ್,
ಸ್ಟ್ಯಾಂಪ್ಡ್ ಮೆಟಲ್ ಸ್ವಿಂಗ್ ಆರ್ಮ್,
ಬೀಮ್ ವಿಧದ ಪೆರಿಮೀಟರ್ ಫ್ರೇಮ್,
ಎಂಜಿನ್: 373 ಸಿಸಿ ಫ್ಲ್ಯೂಯಲ್ ಇಂಜೆಕ್ಟಡ್ ಟ್ರಿಪಲ್ ಸ್ಪಾರ್ಕ್ 4 ವಾಲ್ವ್ ಡಿಟಿಎಸ್-ಐ ಎಂಜಿನ್,
ಪವರ್: 35PS, 35Nm torque,
ವೇಗತೆ: 8.23 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ
ಗೇರ್ ಬಾಕ್ಸ್: 6 ಸ್ಪೀಡ್, ಸ್ಲಿಪರ್ ಕ್ಲಚ್
ಇಂಧನ ಟ್ಯಾಂಕ್: 13 ಲೀಟರ್,
ಭಾರ: 182 ಕೆ.ಜಿ
ಚಂಕ್ರಾಂತರ: 1453 ಎಂಎಂ
ಗ್ರೌಂಡ್ ಕ್ಲಿಯರನ್ಸ್: 157 ಎಂಎಂ
ಉಬೆರ್ ರೆಸ್ಪಾನ್ಸಿವ್ ಬ್ರೇಕಿಂಗ್:
ಟ್ವಿನ್ ಚಾನೆಲ್ ಎಬಿಎಸ್,
ದೊಡ್ಡದಾದ 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್,
ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್,
ಆಟೋ ಹೆಡ್‌ಲ್ಯಾಂಪ್ ಆನ್,
ವಿಭಜಿತ ರಿವೆರ್ಸ್ ಎಲ್‌ಸಿಡಿ ಡಿಸ್‌ಪ್ಲೇ,
ಬಣ್ಣಗಳು: ಮಿಡ್ ನೈಟ್ ಬ್ಲೂ, ಟ್ವಿಲೈಟ್ ಪ್ಲಮ್, ಮೂನ್ ವೈಟ್.
ಮೂಲ:ಮಾಹಿತಿ ಸಂಗ್ರಹ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಅವರ ಕುಟುಂಬದಲ್ಲಿ ಈಗ ಪರಿಹಾರ ಹಣದ ವಿಚಾರ ಕುಟುಂಬ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಅವರ ಕುಟುಂಬಕ್ಕೆ ಸರ್ಕಾರ, ಸಾರ್ವಜನಿಕರು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿವೆ. ಆದರೆ, ಪರಿಹಾರದ ಹಣವೇ ಈಗ ಕುಟುಂಬ ಸದಸ್ಯರ ಸಂಬಂಧಕ್ಕೆ ಅಡ್ಡಿಯಾಗಿದೆ. ಗುರು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ…
ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.
ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…
ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ 2018 ಕುರಿತಂತೆ ಸಿ ಫೋರ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ಆಗಸ್ಟ್ 20 ರಂದು ಪ್ರಕಟಿಸಿದೆ.
ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಫಾಶಿಯನ್ ಕಡೆಗೆ ಹೆಚ್ಚಿನ ಗಮನವನ್ನ ಕೊಡುತ್ತಾರೆ ಮತ್ತು ನಾವು ಚಂದವಾಗಿ ಕಾಣಲು ವಿವಿಧ ರೀತಿಯ ಹೊಸ ಹೊಸ ಉಡುಗೆಗಳನ್ನ ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನ ಬಳಸುತ್ತಿದ್ದರು ಆದರೆ ಈಗಿನ ಯುವಕರು ಹತ್ತಿಯ ಬಟ್ಟೆಗಳನ್ನ ಹೆಚ್ಚಾಗಿ ಬಳಸದೆ ನಮ್ಮ ದೇಹದ ಕೆಟ್ಟ ಪರಿಣಾಮವನ್ನ ಭೀರುವ ಬಟ್ಟೆಗಳನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕ ಮತ್ತು ಯುವತಿಯರು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಗಳನ್ನ ಬಳಕೆ ಮಾಡುವುದನ್ನ ನಾವು…
ಪುರಾತನ ಮತ್ತು ಮುಜರಾಯಿ ಇಲಾಖೆಗೆ ಸೇರಿದ ಹಾಸನದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತಿ ಸೋಮವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.ಇದರ ಜೊತೆಗೆ ಅಧಿಕಾರಿಯ ಹೆಸರಿನಲ್ಲಿ ಮರ ಬೆಳೆಸಲಾಗುತ್ತಿದ್ದು ಪ್ರತಿದಿನ ಜಲಾಭಿಷೇಕ ಕೂಡ ನಡೆಯುತ್ತದೆ. ಈ ಪುರಾತನ ದೇವಾಲಯ ಶಿಥಿಲಾವಸ್ಥೆಗೆ ತೆರಳಿದ್ದರೂ ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿಸಲಿಲ್ಲ. ಆದರೆ ರೋಹಿಣಿ ಸಿಂಧೂರಿಯವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆ ಮಾಡಿದ್ದರು. 2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ಬಂದ ರೋಹಿಣಿ ಸಿಂಧೂರಿ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ತಕ್ಷಣ 30 ಲಕ್ಷ ಹಣ…