2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಂಡು ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ರಮೇಶ್ 3.2 ಕೋಟಿ ರೂ.ಮೌಲ್ಯದ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರನ್ನ ಕೊಂಡುಕೊಂಡಿದ್ದಾರೆ.
ಜರ್ಮನಿಯಿಂದ ಆಮದು ಮಾಡಿಕೊಂಡಿರೋ ಈ ಕಾರ್ ಬೆಂಗಳೂರಿನಲ್ಲಿ ವಿಜಯ್ ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿ ಬಳಿ ಬಿಟ್ಟರೆ ಈಗ ರಮೇಶ್ ಅವರ ಬಳಿ ಮಾತ್ರ ಇರೋದು.

ಇವರ ಬಳಿ ಈಗಾಗಲೇ ರೋಲ್ಸ್ ರಾಯ್ಸ್ ಕಾರು, 11 ಮರ್ಸಿಡಿಸ್, 10 ಬಿಎಂಡಬ್ಲ್ಯೂ, 3 ಆಡಿ ಹಾಗೂ 2 ಜಾಗ್ವಾರ್ ಕಾರುಗಳಿವೆ.
45 ವರ್ಷದ ರಮೇಶ್ ಕಳೆದ ತಿಂಗಳು ಬ್ಯಾಂಕ್ ಲೋನ್ ಜೊತೆಗೆ ತಮ್ಮ ಸ್ವಂತ ಹಣದಲ್ಲಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಕೊಂಡುಕೊಂಡಿದ್ದಾರೆ. 1994ರಲ್ಲಿ ಮಾರುತಿ ಓಮ್ನಿ ಕಾರನ್ನು ಕೊಂಡು ಬಾಡಿಗೆಗೆ ಬಿಟ್ಟ ನಂತರ ರಮೇಶ್ ಅವರ ಅದೃಷ್ಟವೇ ಬದಲಾಯಿತು.

ಅಲ್ಲಿಂದ ರಮೇಶ್ ಅವರಿಗೆ ಕಾರ್‍ಗಳ ಮೇಲಿನ ಪ್ರೀತಿ ಶುರುವಾಯ್ತು. ಪ್ರಸ್ತುತ ರಮೇಶ್ ಅವರ ಬಳಿ 150 ಐಷಾರಾಮಿ ಕಾರುಗಳಿವೆ. ಇವುಗಳಲ್ಲಿ ಕೆಲವನ್ನ ರಮೇಶ್ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗ್ತಾರೆ ಅಥವಾ ಒಳ್ಳೇ ಗ್ರಾಹಕರು ಸಿಕ್ಕರೆ ಬಾಡಿಗೆಗೆ ಕೊಡ್ತಾರೆ.
ನಾನು ಯಾವ ಮಟ್ಟದಿಂದ ಇಲ್ಲಿಯತನಕ ಬಂದೆ ಅನ್ನೋದನ್ನ ಮರೆಯಲು ಇಷ್ಟವಿಲ್ಲ. ನಾನು ಪಟ್ಟ ಕಷ್ಟ, ತಂದೆ ತೀರಿಕೊಂಡ ಬಳಿಕ ನನ್ನ ತಾಯಿ ಬಡತನದಲ್ಲೂ ನನ್ನನ್ನು ಕಷ್ಟಪಟ್ಟು ಸಾಕಿದ್ದನ್ನು ಮರೆಯೋಕಾಗಲ್ಲ.

ಈ ಕೆಲಸದಿಂದಲೇ ನಾನಿಂದು ಶ್ರೀಮಂತನಾಗಿದ್ದೀನಿ. ಆದ್ದರಿಂದ ಈ ಕೆಲಸವನ್ನು ಮುಂದುವರೆಸುತ್ತೇನೆ. ಈ ರೀತಿಯ ಇನ್ನೂ ಅನೇಕ ಕಾರ್‍ಗಳನ್ನು ಹೊಂದಬೇಕು ಎಂಬುದು ನನ್ನ ಡ್ರೀಮ್ ಅಂತಾರೆ ರಮೇಶ್.1979ರಲ್ಲಿ ಅವರ ತಂದೆ ತೀರಿಕೊಂಡಾದ ರಮೇಶ್‍ಗೆ 9 ವರ್ಷ.
ಎಸ್‍ಎಸ್‍ಎಲ್‍ಸಿ ಮುಗಿದ ಬಳಿಕ ವಿದ್ಯಾಭ್ಯಾಸ ನಿಲ್ಲಿಸಿ ತಂದೆಯಂತೆಯೇ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿದ್ರು.ಸಲೂನ್‍ನಿಂದ ಇವರಿಗೆ ಬರುವ ಆದಾಯ ಸಾಧಾರಣವಾಗಿದ್ರೂ ಲಾಭದಾಯಕವಾದ ಕಾರ್ ಬಾಡಿಗೆಗೆ ಕೊಡುವ ಬಿಸಿನೆಸ್ ನಡೆಸಿಕೊಂಡು ಬರ್ತಿದ್ದಾರೆ ರಮೇಶ್ ಅವರು ತಮ್ಮ ಹೇರ್ ಸಲೂನ್‍ನಲ್ಲಿ 75 ರೂ.ಗೆ ಹೇರ್ ಕಟ್ ಮಾಡುವುದರ ಜೊತೆಗೆ ಐಷಾರಾಮಿ ಕಾರುಗಳನ್ನ ಬಾಡಿಗೆಗೆ ಕೊಡ್ತಾರೆ.

ರಮೇಶ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಇವರು ಬೌರಿಂಗ್ ಇನ್ಸ್ ಟಿಟ್ಯೂಟ್‍ನ ತಮ್ಮ ಸಲೂನ್‍ನಲ್ಲಿ ಪ್ರತಿದಿನ ಕನಿಷ್ಠ 5 ಗಂಟೆಗಳ ಕಾಲ ಗ್ರಾಹಕರಿಗೆ ಹೇರ್‍ಕಟ್ ಮಾಡ್ತಾರೆ. ತನ್ನ ಕಸುಬನ್ನು ಬಿಡಬಾರದು ಎಂಬ ಕಾರಣಕ್ಕೆ ಕ್ಷೌರಿಕ ವೃತ್ತಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ.
ತಮ್ಮ ಬಿಳಿ ಬಣ್ಣದ ರಾಲ್ಸ್ ರಾಯ್ಸ್ ಕಾರಿನಲ್ಲೇ ಕೆಲಸಕ್ಕೆ ರಮೇಶ್ ಹೋಗುವುದು ವಿಶೇಷ.ವಿಜಯ್ ಮಲ್ಯ ಬಳಿ ಕೂಡ ಚಿನ್ನದ ಬಣ್ಣದ ಮೇಬ್ಯಾಕ್ ಕಾರ್ ಇತ್ತು. ಮಲ್ಯ ಹಾಗೂ ಮತ್ತೊಬ್ಬ ಉದ್ಯಮಿಯನ್ನು ಬಿಟ್ಟರೆ.
ಆ ಕ್ಷೌರಿಕ ಇತ್ತೀಚೆಗಷ್ಟೇ ಜರ್ಮನಿಯಿಂದ ಆ ಕಾರನ್ನು ಆಮದು ಮಾಡಿಕೊಂಡಿದ್ದರು. ಅವರು ಬೇರಾರೂ ಅಲ್ಲ, ಬೆಂಗಳೂರಿನ ದಂತಕತೆಯಾಗಿರುವ ಕ್ಷೌರಿಕ ರಮೇಶ್ ಬಾಬು. 75 ರೂ.ಗಳಿಗೆ ಕ್ಷೌರ ಸೇವೆ ನೀಡುವ ಅವರಿಗೆ ದುಬಾರಿ ಕಾರುಗಳನ್ನು ಸಂಗ್ರಹಿಸುವುದೇ ಹವ್ಯಾಸ
