ಸರ್ಕಾರದ ಯೋಜನೆಗಳು

ಬಿ.ಪಿ.ಎಲ್. ಕುಟುಂಬಗಳಿಗೆ ಸರ್ಕಾರದಿಂದ “ಇಂದಿರಾ ಬಟ್ಟೆ ಭಾಗ್ಯ”..! ತಿಳಿಯಲು ಈ ಓದಿ..

486

ಈಗಾಗಲೇ ಹಲವು ‘ಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಈಗಾಗಲೇ ಇಂದಿರಾ ಹೆಸರಿನಲ್ಲಿ  ಕ್ಯಾಂಟೀನ್‌, ಕ್ಲಿನಿಕ್‌ ತೆರೆದಿರುವ ಸರ್ಕಾರ ಈಗ ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.

ಬಿ.ಪಿ.ಎಲ್. ಕುಟುಂಬದವರಿಗೆ ಉಚಿತವಾಗಿ ಬಟ್ಟೆ ನೀಡುವ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೆ ಯೋಜಿಸಲಾಗಿದೆ. ಜವಳಿ ಇಲಾಖೆಯಿಂದ ವಾರ್ಷಿಕ 550 ಕೋಟಿ ರೂ. ವೆಚ್ಚದಲ್ಲಿ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೊಳಿಸಲಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ಪುರುಷರಿಗೆ ಶರ್ಟ್ ಬಟ್ಟೆ, ಪಂಚೆ, ಮಹಿಳೆಯರಿಗೆ ಸೀರೆ ಮತ್ತು ರವಿಕೆ ಬಟ್ಟೆ ನೀಡಲಾಗುವುದು. ರಾಜ್ಯದ 1.10 ಕೋಟಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ. ನ್ಯಾಯಬೆಲೆ ಅಂಗಡಿಗಳ ಮೂಲಕ ಬಟ್ಟೆಯನ್ನು ವಿತರಿಸಲಾಗುತ್ತದೆ ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ, ಕ್ಷೀರಭಾಗ್ಯ ಮೊದಲಾದ ಯೋಜನೆಗಳು ಜನಪ್ರಿಯವಾಗಿದ್ದು, ಅದೇ ಮಾದರಿಯಲ್ಲಿ ‘ಇಂದಿರಾ ವಸ್ತ್ರ ಭಾಗ್ಯ’ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ 550 ಕೋಟಿ ರೂಪಾಯಿ ಅಗತ್ಯವಿದ್ದು, ಆ ಅನುದಾನವನ್ನು 2018-19 ಬಜೆಟ್‌ನಲ್ಲಿ ಘೋಷಿಸಿ, ಹಣ ಒದಗಿಸಲು ಸಚಿವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.


ಪುರುಷರಿಗೆ                ಮಹಿಳೆಯರಿಗೆ
ಪಂಚೆ    150              ಸೀರೆ         200
ಶರ್ಟ್‌    100              ರವಿಕೆ         50
ಒಟ್ಟು    250                              250

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ 4 ರೋಗಗಳನ್ನು ಗುಣಪಡಿಸುವ ಅದ್ಭುತ ಶಕ್ತಿ ಈ ಸೊಪ್ಪಿನಲ್ಲಿದೆ..!

    ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ : ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು. ಕೊಲೆಸ್ಟ್ರಾಲ್ : ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು…

  • ಸುದ್ದಿ

    ನೀವು ತಿರುಪತಿ ತಿಮ್ಮಪ್ಪನಿಗೆ ಮೂಡಿ ಅರ್ಪಿಸುತ್ತಿದ್ದೀರಾ ಯಾಕೆ ಅಂತ ಕಾರಣ ಗೊತ್ತಾ?ಗೊತ್ತಿಲ್ಲದಿದ್ದರೆ ತಿಳಿಯಿರಿ,!

    ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ…

  • ಸುದ್ದಿ

    ಚಂದನ್ ಶೆಟ್ಟಿ ನಿವೇದಿತಾ ಗೌಡ ನಿಶ್ಚಿತಾರ್ಥ ಹೇಗಿದೆ ಗೊತ್ತ…?

    ಮೈಸೂರಿನಲ್ಲಿ ನಿವೇದಿತಾ ಗೌಡ, ಚಂದನ್ ಶೆಟ್ಟಿ ನಿಶ್ವಿತಾರ್ಥ ನಡೆಯುತ್ತಿದ್ದು, ಗ್ರೀನ್ ಸ್ಯಾರಿ ತೊಟ್ಟು ಹೋಟೆಲ್ ಗೆ ಬಂದ ಬೇಬಿ ಡಾಲ್. ಹೋಟೆಲ್​ಗೆ ಎಂಟ್ರಿಯಾಗೊ ಮುನ್ನ ಆವರಣದಲ್ಲಿಯೇ  ಫೋಟೋ ಶೂಟ್ ಮಾಡಿಸಿದ್ದಾರೆ. ಇನ್ನೂ  ಕೆಲವೇ ನಿಮಿಷಗಳಲ್ಲಿ ಚೆಂದನ್ ಶೆಟ್ಟಿ ಹೋಟೆಲ್ ಗೆ ಆಗಮಿಸಲಿದ್ದಾರೆ. ಈಗಾಗಲೇ ಹೋಟೆಲ್ ಗೆ ಚಂದನ್ ಶೆಟ್ಟಿ ಕುಟುಂಬ ಹಾಗು ನಿವೇದಿತಾ ಕುಟುಂಬಸ್ಥರು ಮತ್ತು ಸಂಬಂಧಿಕರು, ಸ್ನೇಹಿತರು ಆಗಮಿಸಿದ್ದಾರೆ.  ಸದ್ಯ ಕಲರ್​ ಫುಲ್​ ಫ್ಲವರ್​ ಮೂಲಕ  ಎಂಗೆಜ್ಮೆಂಟ್ ಹಾಲ್ ಡೆಕೋರೆಟ್ ಮಾಡಲಾಗಿದೆ.  ಮಧ್ಯಾಹ್ನ 12.30ಕ್ಕೆ ಪರಸ್ಪರ…

  • ಸುದ್ದಿ

    ಸಿಲಿಕಾನ್ ಸಿಟಿ ಜನರೆ ಹುಷಾರ್ ದಟ್ಟಣೆ ತಟ್ಟಲಿದೆ ಬಿಸಿ ; ರಸ್ತೆಗಿಳಿಯುವ ಮುನ್ನ ಎಚ್ಚರ..ಎಚ್ಚರ…..!

    ಸಿಲಿಕಾನ್ ಸಿಟಿ ಜನರಿಗೆ ಇಂದು ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ. ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಜೆಡಿಎಸ್ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ನೆರೆ ಪರಿಹಾರ ಹಣ ಬಿಡುಗಡೆಗೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ ಅವರು ಹೇಳಿದ್ದು, ಇವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯು ಸಂಗೊಳ್ಳಿ…

  • ಸ್ಪೂರ್ತಿ

    ಹಸಿದ ಬಾಲಕನಿಗೆ ಊಟ ನೀಡಿದಕ್ಕೆ ವೇಯ್ಟರ್‌ ಗೆ ʼಶಿಕ್ಷೆʼ….!

    ಶಾಲಾ ಬಾಲಕನೊಬ್ಬ ಎಂಟು ಡಾಲರ್ ಮೌಲ್ಯದ ಊಟ ಮಾಡಿ, ಬಳಿಕ‌ ಹಣ ಪಾವತಿಸಲು ಸಾಧ್ಯವಾಗಿಲ್ಲವೆಂದು‌ ಸರ್ವ್ ಮಾಡಿದ ಲಂಚ್ ಲೇಡಿಯನ್ನು ‌ವಜಾಗೊಳಿಸಿರುವ ಘಟನೆ ನಡೆದಿದೆ. ಈ‌ ಘಟನೆ ನ್ಯೂ ಹ್ಯಾಮ್‌ಶೈರ್ ಭಾಗದ ಮಸ್ಕೋಮಾ ವ್ಯಾಲಿಯಲ್ಲಿರುವ ಶಾಲಾ ಭಾಗದಲ್ಲಿ ನಡೆದಿದೆ. ಬೋನಿ‌ ಕಿಂಬಲ್ ಎನ್ನುವ ಲಂಚ್ ಲೇಡಿ, ಬಾಲಕ ಕೇಳಿರುವ ಆಹಾರ‌ ಒದಗಿಸಿದ್ದಾಳೆ. ಆದರೆ ತಿಂದ ಬಳಿಕ ಪಾವತಿಸಲು ಬಾಲಕನ ಬಳಿ ಹಣವಿಲ್ಲ. ಆದ್ದರಿಂದ ಹಣವಿಲ್ಲದ ಬಾಲಕನಿಗೆ ಆಹಾರ ನೀಡಿದ್ದಕ್ಕೆ ಆಕೆಯನ್ನು ವಜಾಗೊಳಿಸಲಾಗಿದೆ. ಈ‌ ವಿಷಯ ಹರಡುತ್ತಿದ್ದಂತೆ ವಿದ್ಯಾರ್ಥಿಗಳು…

  • ಸರ್ಕಾರಿ ಯೋಜನೆಗಳು

    ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಇಂದಿರಾ ಸಾರಿಗೆ ನಂತರ ಈಗ ಪಿಂಕ್ ಆಟೋಗಳು..!ತಿಳಿಯಲು ಈ ಲೇಖನ ಓದಿ..

    ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ ರಸ್ತೆಗಿಳಿಯಲಿವೆ.