ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜನರಿಗೆ ಉಪಯೋಗವಾಗಲೆಂದು ಅನೇಕ ಯೋಜನೆಗಳನ್ನು ಮಾಡುತ್ತಾ ಬಂದಿದೆ.. ಅದರಲ್ಲೂ ಬಿ ಪಿ ಎಲ್ ಕಾರ್ಡ್ ಹೊಂದಿರುವವರಿಗೆ ಯೋಜನೆಗಳಿಂದ ಅನೇಕ ಅನುಕೂಲಗಳಾಗಿವೆ..ಅದರಲ್ಲೊಂದು ಪ್ರಮುಖ ವಾದ ಯೋಜನೆ ಮೂಲಕ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದೆ..

ಹೌದು ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಕ್ಕೆ ಒಟ್ಟು ಎರಡು ಯೋಜನೆಗಳಿವೆ..
ಒಂದು ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಉಜ್ವಲ ಯೋಜನೆ”
ಇನ್ನೊಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದ “ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ”
ಬಿ ಪಿ ಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಗಳ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಬಹುದಾಗಿದೆ..

ಹಾಗಾದ್ರೆ ಪ್ರಧಾನಮಂತ್ರಿ ಉಜ್ವಲ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಳಿಂದ ಹೇಗೆ ಉಚಿತವಾಗಿ ಗ್ಯಾಸ್ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕೆ 1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‌ಪಿಜಿ ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್‌ಗಳಿಗೆ ಹಣ ನೀಡಬೇಕಾಗುತ್ತದೆ.ಹಾಗಾದ್ರೆ ಈ ಯೋಜನೆಯನ್ನು ಉಚಿತವಾಗಿ ಪಡೆದುಕೊಳ್ಳುವ ಬಗೆ ಹೇಗೆ ಮತ್ತು ಯಾರೆಲ್ಲಾ ಈ ಯೋಜನೆಗೆ ಅರ್ಹರು ತಿಳಿಯಲು ಮುಂದೆ ಓದಿ…



ಹತ್ತಿರದ ಗ್ಯಾಸ್ ಏಜೆನ್ಸಿ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಕೊಡಬೇಕು.. 1 ತಿಂಗಳಲ್ಲಿ ಮನವಿ ಅಂಗೀಕಾರವಾಗಿ ಗ್ಯಾಸ್ ಏಜೆನ್ಸಿಯವರು 1600 ರೂಪಾಯಿ ಮೌಲ್ಯದ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಅನ್ನು ಉಚಿತವಾಗಿ ನೀಡುತ್ತಾರೆ.. ಉಳಿದ ಗ್ಯಾಸ್ ಉಪಕರಣಗಳು ಬೇಕಿದ್ದರೆ ಹಣವನ್ನು ನೀಡಿ ಪಡೆದುಕೊಳ್ಳಬಹುದಾಗಿದೆ..
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್ ಹಾಗೂ ಸ್ಟೌ ನೀಡುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಇದೇ ವರ್ಷದ ಡಿಸೆಂಬರ್ 1 2017 ರಿಂದ ರಾಜ್ಯದಲ್ಲಿ ಜಾರಿಯಲ್ಲಿದೆ.

ಮೊದಲಿಗೆ ಅನಿಲ ಭಾಗ್ಯ ಯೋಜನೆಯನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ವಿತರಿಸುವುದು ಎಂದಾಗಿತ್ತು.. ಆದರೆ ಆನಂತರ ಹೆಚ್ಚಿನ ಮಂದಿಗೆ ಇದರ ಉಪಯೋಗವಾಗುವುದಿಲ್ಲ ಎಂದು ಯೋಚಿಸಿ.. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಮೂಲಕ 15 ಲಕ್ಷ ಕುಟುಂಬ ಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕೊಡಲು ನಿರ್ಧರಿಸಿದ್ದಾರೆ..
ಬಿ ಪಿ ಎಲ್ ಕಾರ್ಡ್ ಹೊಂದಿರುವವರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿ ಯೋಜನೆಯ ಫಲವನ್ನು ಪಡೆಯಬಹುದಾಗಿದೆ..

ಇದಕ್ಕೆ ಮೊದಲು ಕೇಂದ್ರ ಸರ್ಕಾರದ ‘ಉಜ್ವಲ ಯೋಜನೆ’ಯಲ್ಲಿ ಸಿಲಿಂಡರ್ ಮತ್ತು ಅನಿಲ ಸಂಪರ್ಕ ಪಡೆದವರಿಗೆ ಉಚಿತವಾಗಿ ಒಲೆ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ, ಉಜ್ವಲ ಯೋಜನೆಯ ಸೌಲಭ್ಯ ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕವಾಗಿಯೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಈ ಯೋಜನೆಯಿಂದ ಸ್ಟೌವ್, ಕನೆಕ್ಟರ್ ಹಾಗೂ ಮೊದಲ ಎರಡು ಗ್ಯಾಸ್ ಸಿಲಿಂಡರ್ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಸರ್ಕಾರಕ್ಕೆ ಪ್ರತಿ ಸಂಪರ್ಕಕ್ಕೆ 4,040 ರೂ. ವೆಚ್ಚ ತಗಲಿದೆ ಎಂದು ಹೇಳಲಾಗಿದೆ.ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 300 ಕೋಟಿ ರೂ. ವ್ಯಯಿಸಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಈ ಯೋಜನೆಯ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.. ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಫಲವನ್ನು ಪಡೆಯಬಹುದು..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಇಂದಿನ ಕ್ಷೇತ್ರ ಮಾಲೂರು (ಕೋಲಾರದ ಮಾಲೂರು). ಬರದನಾಡು ಒಂದು ಕಾಲದ ಕೃಷಿ ಪ್ರಧಾನ ನಾಡು, ಅತಿ ಹೆಚ್ಚು ಕೃಷಿ ಪ್ರಧಾನ ಜಾತಿ ಒಕ್ಕಲಿಗರನ್ನು ಒಂದಿರುವ ಕ್ಷೇತ್ರ. ಆದರೆ ಇಂದು ರಾಜಕೀಯ ಗಾಳಕ್ಕೆ ಸಿಲುಕಿ ತಾಲೂಕಿನ ಚಿತ್ರಣವೇ ಬದಲು
ಶರಣ್ ಮತ್ತು ಕೋಮಲ್ ನಂತರ ಮತ್ತೊಬ್ಬ ಹಾಸ್ಯನಟ ಚಿಕ್ಕಣ್ಣ ಹೀರೋ ಆಗಿ ಬದಲಾಗುತ್ತಿದ್ದಾರೆ. ಉಪಮಾತಿ ಬ್ಯಾನರ್ ನಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. ರಾಬರ್ಟ್, ಮದಗಜ ನಿರ್ದೇಶಕ ಮಂಜು ಮಾಂಡವ್ಯ ಚಿಕ್ಕಣ್ಣ ನಟನೆಯ ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಭರತ ಬಾಹುಬಲಿ ಎಂಬ ಸಿನಿಮಾದಲ್ಲಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ,.ಇದೇ ಸಿನಿಮಾದಲ್ಲಿ ನಿರ್ದೇಶಕರಾಗಿದ್ದ ಮಂಜು ಮಾಂಡವ್ಯ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ. 9 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ…
ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ.
Bandipur National Park is regarded as one of the most beautiful and the better-managed national parks of India. Located amidst the picturesque surroundings of the towering Western Ghat Mountains on the Mysore-Ooty highway in Karnataka, Bandipur National Park covers an area of about 874.2 sq km.
‘ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ’ ಎಂದು ಸಿಎಂ ಯಡಿಯೂರಪ್ಪ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.ಶಿವಮೊಗ್ಗದಲ್ಲಿ ನಿನ್ನೆ ಪ್ರವಾಹದಿಂದಾದ ನಷ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಹಾಗೂ ನೀಡಬೇಕಿರುವ ಪರಿಹಾರದ ಬಗ್ಗೆ ಸಿಎಂ ಅವರಿಗೆ ಮಾಹಿತಿ ನೀಡಿದಾಗ ಅವರು ಮೇಲಿನಂತೆ ಉತ್ತರ ನೀಡಿದ್ದಾರೆ. ‘ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ, 8-10…
ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗೋವೇನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಇಂದು ಬೆಳಗ್ಗೆ ಕ್ಲಾಸ್ಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಕ್ ಆಗಿದ್ದಾರೆ. ಶಾಲೆಯಿಂದ ಹೊರಗೆ ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕಟ್ಟಡ ವೀಕ್ಷಿಸುತ್ತಿದ್ದಾರೆ. ತಾಳೇಕೆರೆ, ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ 20ಕ್ಕೂ ಅಧಿಕ…